Wednesday, November 25, 2026
Menu

ಎಥೆನಾಲ್ ಮಿಶ್ರಣದ 63 ಸ್ಯಾಂಪಲ್ ಪರೀಕ್ಷಿಸಿದರೂ ವರದಿ ನೀಡಿಲ್ಲ – ರಿಜ್ವಾನ್ ಅರ್ಷದ್ ವಾಗ್ದಾಳಿ

ಉದಯಕಾಲ ನ್ಯೂಸ್, ದಾವಣಗೆರೆ: ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ಸಾಮಾನ್ಯ ಜನರ ವಾಹನಗಳ ಮೈಲೇಜ್ ಕುಸಿಯುತ್ತಿದೆ ಮತ್ತು ವಾಹನಗಳು ನಿರಂತರವಾಗಿ ರಿಪೇರಿಗೆ ಬರುತ್ತಿವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಕೇಂದ್ರ ಸರ್ಕಾರದ ಧೋರಣೆ ಹಾಗೂ ಸಚಿವರ ಮೌನವನ್ನು ಕಟುವಾಗಿ ಟೀಕಿಸಿದರು. ಮೈಲೇಜ್ ಕುಸಿತ, ರಿಪೇರಿ

ಮಹಿಳಾ ಮೀಸಲಾತಿಗೆ ಒತ್ತು: ವಿಶೇಷ ಅಧಿವೇಶನಕ್ಕೆ ಭರ್ಜರಿ ಸಿದ್ಧತೆ

ಉದಯಕಾಲ ನ್ಯೂಸ್, ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಯಶಸ್ವಿಯಾಗಿ ಅಂಗೀಕರಿಸಲು ಕೇಂದ್ರ ಸರ್ಕಾರ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಸಾಂವಿಧಾನಿಕ ಬಹುಮತವನ್ನು ಪಡೆಯುವ ಸಂಪೂರ್ಣ ವಿಶ್ವಾಸದಲ್ಲಿರುವ ಸರ್ಕಾರ, ಮಸೂದೆ ಪರವಾಗಿ ಅಗತ್ಯಕ್ಕಿಂತ ಕನಿಷ್ಠ

ಯಶೋಗಾಥೆಗಳ ಬಗ್ಗೆ ವರದಿ ಮಾಡಿ ಎಂದು ಮಾಧ್ಯಮಗಳಿಗೆ ಹೇಳಿದ ಪ್ರಧಾನಿ ಮೋದಿ

ಉದಯಕಾಲ ನ್ಯೂಸ್, ನವದೆಹಲಿ: ದೇಶದ ಸಕಾರಾತ್ಮಕ ಬೆಳವಣಿಗೆಗಳು ಮತ್ತು ಯಶೋಗಾಥೆಗಳ ಬಗ್ಗೆ ವಿಶೇಷವಾಗಿ ಗಮನಹರಿಸಿ ವರದಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ವಿಶೇಷ ‘ದೀಪಾವಳಿ ಮಿಲನ್’

ಚಳಿಗಾಲದ ಅಧಿವೇಶನಕ್ಕೆ ಉತ್ತಮ ತಯಾರಿ: ಪೊಲೀಸ್ ಸರ್ಪಗಾವಲು, ಡ್ರೋನ್‌ ಹದ್ದಿನ ಕಣ್ಣು!

ಉದಯಕಾಲ ನ್ಯೂಸ್, ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಡಿಸೆಂಬರ್ 2ರಿಂದ 11ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದ್ದು, ಸುವರ್ಣಸೌಧದಲ್ಲಿ ಸುಗಮ ಕಲಾಪ ಹಾಗೂ ಬಿಗಿ ಭದ್ರತೆಗಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ರೈತರು, ಕಾರ್ಮಿಕರು ಸೇರಿದಂತೆ ವಿವಿಧ

ಉಕ್ರೇನ್ ಶಾಂತಿ ಒಪ್ಪಂದ ಮಾತನಾಡಲು ಪುಟಿನ್​ ಭೇಟಿ ಮಾಡಲಿರುವ ಅಮೆರಿಕದ ರಾಯಭಾರಿಗಳು

ಅಬುಧಾಬಿ, ಯುಎಇ: ರಷ್ಯಾ-ಉಕ್ರೇನ್ ನಡುವಿನ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ. ಯುಎಇಯ ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಮಹತ್ವದ ಸಭೆಯ ಬೆನ್ನಲ್ಲೇ, ಅಮೆರಿಕದ ವಿಶೇಷ ರಾಯಭಾರಿಗಳಾದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಗುರುವಾರ ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ

ಪೋಷಕರನ್ನು ನಿರ್ಲಕ್ಷಿಸಿದರೆ ಸರ್ಕಾರಿ ವೇತನದಿಂದ ರೂ. 10,000 ಕಡಿತ: ತೆಲಂಗಾಣದಲ್ಲಿ ಹೊಸ ಕಾನೂನು

ಉದಯಕಾಲ ನ್ಯೂಸ್, ಹೈದರಾಬಾದ್‌:  ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರಿಗೆ ಶಾಕ್ ನೀಡಲು ತೆಲಂಗಾಣ ಸರ್ಕಾರ ಮುಂದಾಗಿದೆ. ವೃದ್ಧಾಪ್ಯದಲ್ಲಿ ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುವ ಪೋಷಕರನ್ನು ರಕ್ಷಿಸುವ ಮತ್ತು ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ‘ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ

ಕರ್ನಾಟಕದ ‘ಭರವಸೆಯ ಸ್ವಚ್ಛ ನಗರ’ ಗೌರವಕ್ಕೆ ಪಾತ್ರವಾದ ಮೈಸೂರು

ಉದಯಕಾಲ ನ್ಯೂಸ್‌, ನವದೆಹಲಿ: ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮಹಾನಗರ ಪಾಲಿಕೆಯು “ಭರವಸೆಯ ಸ್ವಚ್ಛ ನಗರ” ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಈ

ನಾಳೆ ಬೆಂಗಳೂರಿಗೆ ಮೋದಿ ಆಗಮನ: ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಹೈಅಲರ್ಟ್

ಉದಯಕಾಲ ನ್ಯೂಸ್, ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ಮೆಟ್ರೊ ಗುಲಾಬಿ ಮಾರ್ಗದ ಲೋಕಾರ್ಪಣೆಗೆ ಆಗಮಿಸಲಿದ್ದು, ರಾಜಧಾನಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಭೂತಪೂರ್ವ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಧಾನಿ ಸಂಚರಿಸಲಿರುವ ಪ್ರತಿಯೊಂದು ರಸ್ತೆಯ ಮೇಲೂ ಹದ್ದಿನ ಕಣ್ಣಿಡಲಾಗಿದ್ದು, ಯಾವುದೇ

ಸಂಪುಟ ಸಭೆಯಲ್ಲಿ ಸಮಗ್ರ ವಿಮಾನಯಾನ ನೀತಿ ಮಂಡನೆ: ಸಚಿವ ಎಂ.ಬಿ. ಪಾಟೀಲ

ಉದಯಕಾಲ ನ್ಯೂಸ್, ಬೆಂಗಳೂರು: ನಾಗರಿಕ ವಿಮಾನಯಾನ ಕ್ಷೇತ್ರದ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರವು ಅತ್ಯಂತ ಸಮಗ್ರವಾದ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಈ ಹೊಸ ನೀತಿಯನ್ನು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ

ಮೊದಲ ಹಂತದಲ್ಲಿ 500 ಬೋರ್ಡ್ ಆಫ್ ಡೈರೆಕ್ಟರ್‌ಗಳ ಪಟ್ಟಿ ಬಿಡುಗಡೆ: ಸಿಎಂ ಡಿ.ಕೆ. ಶಿವಕುಮಾರ್

ಉದಯಕಾಲ ನ್ಯೂಸ್, ಮೈಸೂರು: ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದ್ದು, ಇಂದು ಮೊದಲ ಹಂತವಾಗಿ 500 ಬೋರ್ಡ್ ಆಫ್ ಡೈರೆಕ್ಟರ್‌ಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನ ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ