kannada news
ಬೆಂಗಳೂರಿನಲ್ಲಿ 14 ವರ್ಷದ ಮಗಳ ಸಾಯಿಸಿ ತಾಯಿ ಆತ್ಮಹತ್ಯೆ
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಮಹಿಳೆಯೊಬ್ಬರು 14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಸುವರ್ಣ ಆತ್ಮಹತ್ಯೆ ಮಾಡಿಕೊಂಡವರು, 14 ವರ್ಷದ ಮಗಳು ಕಾರುಣ್ಯ ಕೊಲೆಯಾದವಳು. ಸುವರ್ಣ ಮೊದಲು ಮಗಳು ಕಾರುಣ್ಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಗಳು ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿಕೊಂಡ ಬಳಿಕ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮನೆಯ ಒಳಗಿನಿಂದ ಯಾವುದೇ
ಹರ್ಮುಜ್ ಜಲಸಂಧಿ ತೆರೆಯಲು ಜಾಗತಿಕ ಒತ್ತಡ ಅಗತ್ಯ
ಹರ್ಮುಜ್ ಜಲಸಂಧಿ ಇರಾನ್ ಹಿಡಿತದಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂದಿಗ್ದತೆಗೆ ಕಾರಣವಾಗಿರುವುದರಿಂದ ತೈಲ ಪಡೆಯುವ ಎಲ್ಲ ದೇಶಗಳು ಒಂದುಗೂಡಿ ಅಮೆರಿಕ- ಇರಾನ್ ಮೇಲೆ ಒತ್ತಡ ಹೇರಿ ಜಲಸಂಧಿಯನ್ನು ತೆರವುಗೊಳಿಸುವಂತೆ ಮಾಡುವುದು ಇಂದಿನ ಅಗತ್ಯ. ಇಲ್ಲದಿದ್ದಲ್ಲಿ ಬಹುತೇಕ ದೇಶಗಳು ತೈಲದ ಕೊರತೆಯಿಂದ ಆರ್ಥಿಕ
ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್: ಡಿಕೆ ಶಿವಕುಮಾರ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್ ಎಂದು ನಾವು ಪೂಜಿಸಿ ಬದುಕುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್
ಜಮೀನು ದಾರಿಗಾಗಿ ಜಗಳದಲ್ಲಿ ಒಬ್ಬನ ಕೊಲೆ: ಪ್ರತೀಕಾರವಾಗಿ ಮನೆಗೆ ಬೆಂಕಿ
ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಎರಡು ಎಕರೆ ಜಮೀನಿಗೆ ದಾರಿಗಾಗಿ ಶುರುವಾದ ಜಗಳ ತೀವ್ರಗೊಂಡು ಒಬ್ಬನ ಕೊಲೆಯಾಗಿದೆ. ಈ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಿದವರ ಮನೆಗೆ ಕೊಲೆಯಾದವನ ಸೋದರ ಬೆಂಕಿ ಹಚ್ಚಿ ಜೈಲು ಸೇರಿದ್ದಾನೆ. ಮಲ್ಲಪ್ಪ ಮತ್ತು ಅವರ ಅಣ್ಣ ಹನುಮಂತರಾಯನ
ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದಸಂವಿಧಾನ ಶಿಲ್ಪಿ ಭಾರತ
ನಸೀರ್ ಅಹ್ಮದ್ ರಾಜೀನಾಮೆ: ತಮ್ಮದೇ ಮೂಲಗಳಿಂದ ಮಾಹಿತಿ ಪಡೆದು ಸಿಎಂ ತೀರ್ಮಾನವೆಂದ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿರುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮಗಳ ರೇಪ್: ಆರೋಪಿಯ ಜನನಾಂಗ ಕತ್ತರಿಸಿ ಕೊಲೆಗೈದ ತಾಯಿ ನಿರ್ದೋಷಿ ಎಂದ ಕೋರ್ಟ್
ಬ್ರೆಜಿಲ್‌ನಲ್ಲಿ ನಡೆದ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು, ಮಗಳ ಮೇಲೆ ಅತ್ಯಾಚಾರಗೈದ ಆರೋಪಿಯನ್ನು ಕೊಂದ ಮಹಿಳೆ ನಿರಪರಾಧಿ ಎಂದು ತೀರ್ಪು ನೀಡಿದೆ. 2025ರ ಮಾರ್ಚ್‌ನಲ್ಲಿ. ಎರಿಕಾ ಪೆರೇರಾ ಡ ಸಿಲ್ವೇರಾ ವಿಸೆಂಟೆ ಎಂಬ ಮಹಿಳೆಯ 11 ವರ್ಷದ ಮಗಳು ಬೆಲೊ
ನನ್ನ ಮುಟ್ಟಬೇಕಾದರೆ 90 ಲಕ್ಷ ಕೊಡು ಎಂದ ನವವಧು ಚಿನ್ನಾಭರಣ ದೋಚಿ ಪೋಷಕರೊಂದಿಗೆ ಪರಾರಿ
ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ಪುರದಲ್ಲಿ ಮದುವೆಯಾದ ಮೊದಲ ರಾತ್ರಿ ವಧು ತನ್ನನ್ನು ಮುಟ್ಟಬೇಕಾದರೆ ನೀನು 90 ಲಕ್ಷ ರೂಪಾಯಿ ಕೊಡಬೇಕು ಎಂದು ವರನಲ್ಲಿ ಹಠ ಹಿಡಿದಿದ್ದು ಮಾತ್ರವಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟಿದೆ.
ಬೆಂಗಳೂರಿಗರ ಪಾಲಿಗೆ ಮರೀಚಿಕೆಯಾದ ಎ ಖಾತೆ: ಆರ್ ಅಶೋಕ
ಬೆಂಗಳೂರಿನ 8.25 ಲಕ್ಷ ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ ಕಾಂಗ್ರೆಸ್ ಸರ್ಕಾರದ ಯೋಜನೆ ಇಂದು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಯೋಜನೆ ಘೋಷಣೆಯಾಗಿ ಆರು ತಿಂಗಳು ಕಳೆದರೂ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಕೇವಲ ಶೇ.10ಕ್ಕಿಂತ ಕಡಿಮೆ ಅರ್ಜಿಗಳು ವಿಲೇವಾರಿಯಾಗಿರುವುದು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು
ಹರ್ಮುಜ್ ಜಲಸಂಧಿಗೆ ಅಮೆರಿಕ ದಿಗ್ಬಂಧನವೆಂದ ಟ್ರಂಪ್: ನಮ್ಮ ನಿಯಂತ್ರಣದಲ್ಲೇ ಇದೆ ಎಂದ ಇರಾನ್
ಇರಾನ್ ಜೊತೆಗಿನ ಮಾತುಕತೆ ವಿಫಲಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಎಲ್ಲ ಬಂದರುಗಳಿಗೆ ದಿಗ್ಬಂಧನ ವಿಧಸಲಾಗಿದೆ. ಇರಾನ್‌ನ ಯಾವುದೇ ಹಡಗು ಜಲಸಂಧಿ ದಾಟದಂತೆ ಎಚ್ಚರಿಕೆ ನೀಡಲಾಗಿದೆ. ನಾವು ವಿಧಿಸಿರುವ ದಿಗ್ಬಂಧನದ ಮುರಿಯುವ ಪ್ರಯತ್ನವನ್ನು




