Menu

ಹರ್ಮುಜ್‌ ಜಲಸಂಧಿಗೆ ಅಮೆರಿಕ ದಿಗ್ಬಂಧನವೆಂದ ಟ್ರಂಪ್‌: ನಮ್ಮ ನಿಯಂತ್ರಣದಲ್ಲೇ ಇದೆ ಎಂದ ಇರಾನ್‌

ಇರಾನ್‌ ಜೊತೆಗಿನ ಮಾತುಕತೆ ವಿಫಲಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹರ್ಮುಜ್‌ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಎಲ್ಲ ಬಂದರುಗಳಿಗೆ ದಿಗ್ಬಂಧನ ವಿಧಸಲಾಗಿದೆ. ಇರಾನ್‌ನ ಯಾವುದೇ ಹಡಗು ಜಲಸಂಧಿ ದಾಟದಂತೆ ಎಚ್ಚರಿಕೆ ನೀಡಲಾಗಿದೆ.

ನಾವು ವಿಧಿಸಿರುವ ದಿಗ್ಬಂಧನದ ಮುರಿಯುವ ಪ್ರಯತ್ನವನ್ನು ಇರಾನ್‌ ಮಾಡಬಾರದು, ಪ್ರವೇಶಿಸಲು ಇರಾನ್‌ನ ಯುದ್ಧನೌಕೆಗಳು ಯತ್ನಿಸಿದರೆ ನಾಶಪಡಿಸಿ ಬಿಡುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.  ತಿರುಗೇಟು ನೀಡಿರುವ ಇರಾನ್‌, ನಮ್ಮ ಬಂದರುಗಳಿಗೆ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮವನ್ನು ಕಡಲ್ಗಳ್ಳತನ ಎಂದು ಭಾವಿಸಲಾಗುವುದು, ಕೊಲ್ಲಿ ದೇಶಗಳ ಯಾವ ಬಂದರುಗಳೂ ಸುರಕ್ಷಿತವಾಗಿ ಇರಲು ಬಿಡುವುದಿಲ್ಲ ಎಂದು ವಾರ್ನ್‌ ಮಾಡಿದೆ.

ಹರ್ಮುಜ್‌ ಜಲಸಂಧಿ ಮೂಲಕ ಇರಾನ್‌ನ ಬಂದರುಗಳಿಂದ ಯಾವುದೇ ದೇಶದ ಹಡಗುಗಳಿಗೆ ಹೊರಬರಲು ಅಥವಾ ಬೇರೆ ಕಡೆಗಳಿಂದ ಇರಾನ್ ಬಂದರು ತಲುಪಲು ಬಿಡುವುದಿಲ್ಲ ಎಂದು ಅಮೆರಿಕ ಸೇನೆ ಹೇಳಿತ್ತು. ಇರಾನ್‌ನಿಂದ ಚೀನಾವು ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುತ್ತದೆ. ಜಲಸಂಧಿಗೆ ದಿಬ್ಬಂಧನ ಹಾಕುವ ಮೂಲಕ ಚೀನಾದ ಮೇಲೆ ಒತ್ತಡ ಹೇರುವುದು, ಆ ಮೂಲಕ ಇರಾನ್‌ನ ಮೇಲೆ ಒತ್ತಡ ಬರುವಂತೆ ಮಾಡುವುದು ಅಮೆರಿಕದ ಯೋಜನೆ ಎನ್ನಲಾಗಿದೆ. ಅಮೆರಿಕ ದಿಗ್ಬಂಧನ ವಿಧಿಸಿದ್ದರಿಂದ ಇರಾನ್‌ಗೆ ಒಂದೇ ದಿನ ಸಾವಿರಾರು ಕೋಟಿ ರೂ. ನಷ್ಟವಾಗಿದೆ.

ಜಲಸಂಧಿಗೆ ದಿಗ್ಬಂಧನ ಹಾಕುವ ಅಮೆರಿಕದ ಕ್ರಮಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಜಲಸಂಧಿ ನಮ್ಮ ನಿಯಂತ್ರಣದಲ್ಲೇ ಇದೆ, ನಮ್ಮ ಅಸ್ತಿತ್ವ ಕಡೆಗಣಿಸಿ ಜಲಸಂಧಿಯನ್ನು ದಾಟಲು ಮುಂದಾದರೆ ಗಂಭೀರ ಮತ್ತು ಅಪಾಯಕಾರಿ ಪರಿಸ್ಥಿತಿ ಎದುರಾಗಲಿದೆ. ಸೇನಾ ಹಡಗುಗಳು ಇಲ್ಲಿ ಇರುವಂತಿಲ್ಲ. ಒಂದು ವೇಳೆ ಅಂಥ ಹಡಗುಗಳು ಕಂಡರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಇರಾನ್‌ನ ಐಆರ್‌ಜಿಸಿ ಹೇಳಿದೆ.

Related Posts

Leave a Reply

Your email address will not be published. Required fields are marked *