Menu

ಮಗಳ ರೇಪ್‌: ಆರೋಪಿಯ ಜನನಾಂಗ ಕತ್ತರಿಸಿ ಕೊಲೆಗೈದ ತಾಯಿ ನಿರ್ದೋಷಿ ಎಂದ ಕೋರ್ಟ್‌

ಬ್ರೆಜಿಲ್‌ನಲ್ಲಿ ನಡೆದ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು, ಮಗಳ ಮೇಲೆ ಅತ್ಯಾಚಾರಗೈದ ಆರೋಪಿಯನ್ನು ಕೊಂದ ಮಹಿಳೆ ನಿರಪರಾಧಿ ಎಂದು ತೀರ್ಪು ನೀಡಿದೆ.

2025ರ ಮಾರ್ಚ್‌ನಲ್ಲಿ. ಎರಿಕಾ ಪೆರೇರಾ ಡ ಸಿಲ್ವೇರಾ ವಿಸೆಂಟೆ ಎಂಬ ಮಹಿಳೆಯ 11 ವರ್ಷದ ಮಗಳು ಬೆಲೊ ಹೊರಿಜಾಂಟೆಯಲ್ಲಿರುವನ ಅಪಾರ್ಟ್ಮೆಂಟ್ ಒಳಗೆ ಜೋರಾಗಿ ಕಿರುಚಾಡುವುದು ಕೇಳಿದೆ. ಅಲ್ಲಿ ಹೋಗಿ ನೋಡಿದಾಗ ಎರಿಕಾಳ ಗೆಳೆಯ ಎವರ್ಟನ್ ಅಮರೊ ಡ ಸಿಲ್ವಾ ಎಂಬಾತ ಎರಿಕಾಳ ಮಗುವಿನ ಮೇಲೆ ಹತ್ತಿ ಕುಳಿತಿದ್ದ. ಈತನನ್ನು ಉಳಿಸಿದರೆ ತನ್ನ ಮಗಳನ್ನು ಬದುಕುವುದಕ್ಕೆ ಬಿಡುವುದಿಲ್ಲ ಎಂದು ಭಾವಿಸಿ ಎರಿಕಾ ಆತನಿಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ನೀಡಿದ್ದಾಳೆ. ಆತನಿಗೆ ಕೊಲೆ ಮಾಡಿ ಜನನಾಂಗ ಕತ್ತರಿಸಿದ್ದಳು.ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಳು. ಅದೇ ರಾತ್ರಿ ಆಕೆ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಸರ್ಕಾರಿ ಪ್ರಾಸಿಕ್ಯೂಟರ್‌ ಎರಿಕಾ ವಿರುದ್ಧ ನರಹತ್ಯೆಯ ಆರೋಪ ಹೊರಿಸಿ ಕೊಲೆ ಪೂರ್ವಯೋಜಿತ ಎಂದು ವಾದಿಸಿದರು. ಪ್ರತಿವಾದಿ ಆಕೆ ತನ್ನ ಮಗಳ ರಕ್ಷಣೆಗಾಗಿ ಹೀಗೆ ವರ್ತಿಸಿದ್ದಾಳೆ ಎಂದು ವಾದಿಸಿದರು. ನ್ಯಾಯಾಧೀಶರು ಆಕೆಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ತೀರ್ಪಿಗೆ ಜನರಿಂದ ಮಾತ್ರ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Leave a Reply

Your email address will not be published. Required fields are marked *