Menu

ಬಳ್ಳಾರಿಯಲ್ಲಿ ಮತಗಳ ಡಿಲೀಟ್‌ಗೆ ಯತ್ನ: ಬಿಜೆಪಿ ಮುಖಂಡ,ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು

ಬಳ್ಳಾರಿಯಲ್ಲಿ ಮತಗಳ ಡಿಲೀಟ್‌ಗೆ ಯತ್ನ: ಬಿಜೆಪಿ ಮುಖಂಡ,ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು

ಬಳ್ಳಾರಿ: ನಗರದಲ್ಲಿ ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಪರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲು ಷಡ್ಯಂತ್ರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಬೂತ್ ಮಟ್ಟದ ಏಜೆಂಟ್ (BLA-1) ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.

ಕಾಂಗ್ರೆಸ್ ಬಿಎಲ್‌ಎ ಗೌತಮ್ ನೀಡಿದ ದೂರಿನ ಮೇರೆಗೆ, ಬಿಜೆಪಿಯ BLA-1 ಶ್ರೀನಿವಾಸ ಮೋತ್ಕರ್, ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ (AC) ನಂದೀಶ್, ಬಿಎಲ್‌ಒಗಳಾದ (BLO) ಸುಮಲತಾ ಮತ್ತು ಶರಣಬಸವ ಸೇರಿದಂತೆ ಇತರರ ವಿರುದ್ಧ ಬಿಎನ್‌ಎಸ್ (BNS 2023) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (ಯು/ಎಸ್ 363(2), 61(2), 217, 3(5)) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಂಗ್ರೆಸ್ ತೀವ್ರ ಆಕ್ರೋಶ ಹಾಗೂ ಗಂಭೀರ ಆರೋಪ

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಪರಿಶೀಲನೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ಬಿಜೆಪಿಯ BLA-1 ಶ್ರೀನಿವಾಸ ಮೋತ್ಕರ್ ಚುನಾವಣಾಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಈ ಪಟ್ಟಿಯಲ್ಲಿ ಶೇ. 98ರಷ್ಟು ಮುಸ್ಲಿಂ ಸಮುದಾಯದವರ ಹಾಗೂ ಕಾಂಗ್ರೆಸ್ ಪರ ಒಲವು ಇರುವ ಮತದಾರರ ಹೆಸರುಗಳಿವೆ. ಅಷ್ಟೇ ಅಲ್ಲದೆ ನನ್ನ ಸ್ವಂತ ಸಹೋದರನ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಹಿಂದೆ ಕೋಮು ಉದ್ದೇಶ ಹಾಗೂ ಕಾಂಗ್ರೆಸ್ ಮತಗಳನ್ನು ಕಡಿಮೆ ಮಾಡುವ ಸ್ಪಷ್ಟ ಷಡ್ಯಂತ್ರವಿದೆ” ಎಂದು ಅವರು ದೂರಿದ್ದಾರೆ.

#Ballari #BallariNews #VotersListControversy #CongressVsBJP #KarnatakaPolitics #FIR #UdayakalaNews #ElectionCommission

Related Posts

Leave a Reply

Your email address will not be published. Required fields are marked *