Menu

ನನ್ನ ಮುಟ್ಟಬೇಕಾದರೆ 90 ಲಕ್ಷ ಕೊಡು ಎಂದ ನವವಧು ಚಿನ್ನಾಭರಣ ದೋಚಿ ಪೋಷಕರೊಂದಿಗೆ ಪರಾರಿ

ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ಪುರದಲ್ಲಿ ಮದುವೆಯಾದ ಮೊದಲ ರಾತ್ರಿ ವಧು ತನ್ನನ್ನು ಮುಟ್ಟಬೇಕಾದರೆ ನೀನು 90 ಲಕ್ಷ ರೂಪಾಯಿ ಕೊಡಬೇಕು ಎಂದು ವರನಲ್ಲಿ ಹಠ ಹಿಡಿದಿದ್ದು ಮಾತ್ರವಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ.

ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟಿದೆ. ಸಂಬಂಧಿಕರು, ನೆರೆಹೊರೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದ್ದು, ಮದುವೆ ಮುಗಿದು ವಧು ವರನ ಮನೆಗೆ ಬಂದಿದ್ದಳು.  ಮೊದಲ ರಾತ್ರಿ ಕೋಣೆಗೆ ಪ್ರವೇಶಿಸಿ, ನನ್ನನ್ನು ಮುಟ್ಟಬೇಕೆಂದರೆ ತಕ್ಷಣವೇ 90 ಲಕ್ಷ ರೂಪಾಯಿ ನೀಡಬೇಕು. 90 ಲಕ್ಷ ಕೊಟ್ಟರೆ ಮಾತ್ರ ಈ ಮದುವೆಗೆ ಮಾನ್ಯತೆ ಎಂದು ಪಟ್ಟು ಹಿಡಿದಳು. ವರ ಮತ್ತು ಆತನ ಕುಟುಂಬದವರು ಇಷ್ಟು ದೊಡ್ಡ ಮೊತ್ತ ನೀಡುವುದು ಅಸಾಧ್ಯವೆಂದು ಹೇಳಿದರು.

ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿ ವಧು ಪೋಷಕರನ್ನು ಕರೆಸಿದಳು. ಆಕೆಯ ಪೋಷಕರು ಮಗಳ ಬೇಡಿಕೆಯನ್ನು ಸಮರ್ಥಿಸಿಕೊಂಡರು. ವರನ ಕುಟುಂಬದವರು ಮನವೊಲಿಸಲು ಪ್ರಯತ್ನಿಸಿದರೂ ವಧು ನಿರ್ಧಾರ ಬದಲಿಸಲಿಲ್ಲ. ವಧು ಮತ್ತು ಆಕೆಯ ಪೋಷಕರು ಮನೆಯಲ್ಲಿದ್ದ ವಸ್ತುಗಳನ್ನು ಪುಡಿಗೈದು, ಅಡುಗೆ ಮನೆಯ ಗ್ಯಾಸ್ ಪೈಪ್ಲೈನ್ ಕಿತ್ತು ಹಾಕಿ, ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹತತಿರವಿದ್ದ ಮನೆಯವರು ಬಂದು ಸೇರಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಗಲಾಟೆ ಜೋರಾದ ಬಳಿಕ ವಧು ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದ ಚಿನ್ನಾಭರಣ, ವರನ ತಾಯಿ ನೀಡಿದ್ದ ಒಡವೆಗಳು ಮತ್ತು ನಗದು ಎತ್ತಿಕೊಂಡು ಪರಾರಿಯಾಗಿದ್ದಾಳೆ.

ವರನ ಕುಟುಂಬ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರು. ಬಳಿಕ ವರನ ಕುಟುಂಬ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.  ನ್ಯಾಯಾಲಯವು ಪೊಲೀಸರಿಗೆ ತಕ್ಷಣ ಪ್ರಕರಣ ದಾಖಲಿಸಲು ಆದೇಶಿಸಿದೆ. ವಧು ಮತ್ತು ಆಕೆಯ ಕುಟುಂಬದವರ ವಿರುದ್ಧ ವಂಚನೆ, ಬೆದರಿಕೆ, ಚಿನ್ನಾಭರಣಗಳ ಕಳ್ಳತನ ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Posts

Leave a Reply

Your email address will not be published. Required fields are marked *