Featured
ತಮಿಳುನಾಡಿಗೆ ಕಾವೇರಿ: ಸುಪ್ರೀಂನಿಂದ ಅರ್ಜಿ ವಿಚಾರಣೆ ಮುಂದೂಡಿಕೆ
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ತಮಿಳುನಾಡು ಪರ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕ ನಮಗೆ ಹರಿಸಭೇಕಿರುವ ಪರಮಾಣದಲ್ಲಿ ನೀರು ಹರಿಸುತ್ತಿಲ್ಲ,
ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ ವೆಂಟಿಲೇಟರ್ ಸ್ಫೋಟ: ಬೆಂಕಿಗೆ ಮೂರು ಶಿಶುಗಳು ಬಲಿ
ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾ ರಬೆಳಗಿನ ಜಾವ ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿವೆ. ಚಿಕಿತ್ಸೆ ಪಡೆಯುತ್ತಿದ್ದ ಹಲವು ಶಿಶುಗಳನ್ನು ಸ್ಥಳಾಂತರಿಸಲಾಗಿದೆ. ಬೆಳಗಿನ ಜಾವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. 39
ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ: ಏಳು ಆರೋಪಿಗಳು ಅರೆಸ್ಟ್
ಕೊಲ್ಲಾಪುರದ ಚಂದಗಡ ತಾಲೂಕಿನಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ಜಾಲವನ್ನು ಬಯಲಿಗೆಳೆದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಇಪ್ಪತ್ತು ಕಿ.ಮೀ ದೂರದ ಚಂದಗಡದ ರಾಜಗೋಳಿ ಗ್ರಾಮದಲ್ಲಿ ಆರೋಪಿಗಳು ಕೋಳಿ ಫಾರಂ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದರು.
ಹಣಿಗೇರಿ ವನ್ಯಜೀವಿ ವಲಯದಲ್ಲಿ ಬೇಟೆಗಾರರ ಬಂಧನ
ಶಿವಮೊಗ್ಗ ತಾಲೂಕಿನ ಹಣಿಗೇರಿ ವನ್ಯಜೀವಿ ವಲಯದ ಸಿರಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಸಂಚು ರೂಪಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಚೋರಡಿ ವಡೆಯರಕೊಪ್ಪ ಗ್ರಾಮದ ಲೋಕೇಶ್ ಎಸ್‌ಡಿ, ಸಚಿನ್ ಎಂ, ಅರುಣ್ ಕುಮಾರ್ ಹಾಗೂ ಸುಬ್ಬರಾಯ ಬಂಧಿತ ಆರೋಪಿಗಳು.
ದೇಶದಲ್ಲಿ ಎಷ್ಟು ಸಚಿವರ ವಿರುದ್ಧ ಮೊಕದ್ದಮೆಗಳಿವೆ ಹೇಳಿ: ಪ್ರತಿಪಕ್ಷಗಳಿಗೆ ಸಿಎಂ ಸವಾಲು
ದೇಶದಲ್ಲಿ ಎಷ್ಟು ಸಚಿವರ ವಿರುದ್ಧ ಮೊಕದ್ದಮೆಗಳಿವೆ ಎಂಬುದನ್ನು ಪ್ರತಿಪಕ್ಷಗಳು ಹೇಳಲಿ, ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಶಕ್ತಿಯಿಲ್ಲದ ಕಾರಣ, ಅಧಿವೇಶನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು, ಸಚಿವ ನಾಗೇಂದ್ರ
ಗೋಣಿಕೊಪ್ಪದಲ್ಲಿ ಕಾಡಾನೆ ದಾಳಿಗೆ ಪ್ರವಾಸಿ ಬಲಿ
ಕಾಡನೆ ದಾಳಿಗೆ ಪ್ರವಾಸಿಗರೊಬ್ಬರು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ತೆರಲು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಆರ್ ಆರ್ ನಗರದ ಮುರಳಿಕೃಷ್ಣ (40) ಎಂದು ಆನೆ ದಾಳಿಗೆ ಬಲಿಯಾದವರು ಗುರುತಿಸಲಾಗಿದೆ. ಅವರು ಸ್ಥಳೀಯ ಹೋಂಸ್ಟೇಯೊಂದರಲ್ಲಿ ತಂಗಿದ್ದು, ವಿಹಾರಕ್ಕಾಗಿ ತೆರಳಿದ್ದ ವೇಳೆ ಈ
ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಎಸ್ ಎಸ್
ಆರ್ ಎಸ್ ಎಸ್ ಅಂತಹ ಸ್ವಯಂ ಸೇವಾ ಸಂಘಟನೆ ಈಗ ಸಿಜೆಪಿ ಕುರಿತು ವಿವಿಧ ಕೋನಗಳಲ್ಲಿ ಗಂಭೀರವಾಗಿ ಆಲೋಚಿಸುವಂತಾಗಿದೆ. ಒಟ್ಟಿನಲ್ಲಿ ಆಡಳಿತದಲ್ಲಿ ಆಗಿರುವ ವೈಫಲ್ಯವನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಒಪ್ಪಿಕೊಳ್ಳದಿದ್ದಲ್ಲಿ ಇದಕ್ಕೆ ಯಾವುದೇ ಸರ್ಕಾರವಿರಲಿ, ಭಾರಿ ಬೆಲೆ ತೆರಬೇಕಾಗುತ್ತೆ
2028ರಲ್ಲಿ ಮತ್ತೆ ನಾನು ಸಿಎಂ ಆಗುವಂತೆ ಬೆಂಬಲ ನೀಡಿ: ವಾಸವಿ ಸಮುದಾಯಕ್ಕೆ ಡಿಕೆ ಶಿವಕುಮಾರ್ ಮನವಿ
ನಾನು ನಿಮ್ಮೊಂದಿಗಿದ್ದೇನೆ , ನೀವೂ ನನ್ನೊಂದಿಗಿರಬೇಕು. 2028 ರಲ್ಲಿ ಪುನ: ನಾನು ರಾಜ್ಯದ ಮುಖ್ಯಮಂತ್ರಿಯಾಗುವಂತೆ ಬೆಂಬಲ ನೀಡಬೇಕು. ನಿಮ್ಮ ಸಮಸ್ಯೆಗಳಿಂದ ನಿಮಗೆ ಬಿಡುಗಡೆ ನೀಡಲು ನಾನು ಬದ್ಧನಾಗಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ವಾಸವಿ ಸಮುದಾಯವನ್ನು ಉದ್ದೇಶಿಸಿ ಹೇಳಿದರು. ಬೆಂಗಳೂರಿನ ಸ್ವಾತಂತ್ರ್ಯ
200 ರೂ.ಗಾಗಿ ಮಂಗಳಮುಖಿಯ ಕೊಲೆಗೈದು ಪರಾರಿಯಾಗಿದ್ದವ ಅರೆಸ್ಟ್
ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್‌ನಿಲ್ದಾಣದಲ್ಲಿ ತಡರಾತ್ರಿ ಮಂಗಳಮುಖಿಯೊಬ್ಬರನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಾಮಮೂರ್ತಿ ನಗರದ ಗೌತಮ್ (29) ಮಂಗಳಮುಖಿಯನ್ನು ೨೦೦ ರೂಪಾಯಿಗಾಗಿ ಕೊಲೆ ಮಾಡಿದ ಕಿರಾತಕ ಎಂದು ಗುರುತಿಸಲಾಗಿದೆ. ರಾತ್ರಿ ದರೋಡೆ ಮಾಡುವುದನ್ನೇ ಆತ ಉದ್ಯೋಗವನ್ನಾಗಿಸಿಕೊಂಡ
ಮಡಿಕೇರಿಯಲ್ಲಿ ಲಾರಿ ಡಿಕ್ಕಿ ಹೊಡೆದು ಟ್ಯಾಕ್ಸಿ ಚಾಲಕ ಸಾವು
ಮಡಿಕೇರಿ ನಗರದ ತಿಮ್ಮಯ್ಯ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಗಣಪತಿ ಬೀದಿ ನಿವಾಸಿ ಸಾಹಿಲ್ (24) ಎಂದು ಗುರುತಿಸಲಾಗಿದೆ. ಮಂಗಳೂರು ರಸ್ತೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ತಿಮ್ಮಯ್ಯ




