Thursday, October 01, 2026
Menu

ಬಿಜೆಪಿ ಶುದ್ಧ ಮಾಡ್ಬೇಕಿರೋದು ಪ್ರತಿದಿನ ಸುಳ್ಳು ಹೇಳೋರನ್ನು, ಅವಾಚ್ಯ ಪದ ಬಳಸೋರನ್ನು: ನಟ ಪ್ರಕಾಶ್‌ ರೈ

ನೀವು ಶುದ್ಧ ಮಾಡ್ಬೇಕಿರೋದು ಪ್ರತಿದಿನ ಸುಳ್ಳು ಹೇಳೋರನ್ನು, ಅವಾಚ್ಯ ಪದ ಬಳಸೋರನ್ನು ಎಂದು ನಟ ಪ್ರಕಾಶ ರೈ ಹೇಳಿದರು. ಕಲಬುರಗಿ ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಕಾಶ ರಾಜ್‌ರನ್ನ ಕರಾವಳಿಗೆ ಹಾಕಿ ಅಂತ ಹೇಳಿದ್ದಾರೆ.ಆದರೆ ಅದೇ ಕರಾವಳಿ ಮಂದಿ ಆ ಸಮುದ್ರದ ಮೀನು ತಿಂದು ನನ್ನ ಹಾಗೇ ಆದರೆ? ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರಲ್ಲ.  ಅವರಿಗೆ

ಔಷಧ ಘಟಕ ಸ್ಫೋಟಕ್ಕೆ ಇಬ್ಬರು ಬಲಿ, ಉಕ್ಕು ಕಾರ್ಖಾನೆ ಸ್ಫೋಟದಲ್ಲಿ ಮೂವರ ಸಾವು

ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಇಂಜಿನಿಯರ್‌ಗಳು ಅಸು ನೀಗಿದ್ದಾರೆ. ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟಕ್ಕೆ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ,

ಹೊಸ ಮೊಬೈಲ್‌ಗಾಗಿ ಜಗಳ: ಪ್ರಪಾತಕ್ಕೆ ಜಿಗಿದ ಮಗನ ರಕ್ಷಿಸಲು ಹೋದ ತಂದೆಯೂ ಸಾವು, ಪ್ರತ್ಯಕ್ಷದರ್ಶಿ ತಾಯಿ ಆತ್ಮಹತ್ಯೆ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ  ಮಾಥೇರಾನ್‌ ಬೆಟ್ಟದಿಂದ ಯುವಕನೊಬ್ಬ ಪ್ರಪಾತಕ್ಕೆ ಹಾರಿದ್ದು, ರಕ್ಷಿಸಲು ಹೋದ ತಂದೆಯೂ ಬಿದ್ದು ಮೃತಪಟ್ಟರೆ, ಇದನ್ನು ಕಣ್ಣಾರೆ ಕಂಡ ತಾಯಿ ಕೂಡ ಅದೇ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೯ ವರ್ಷದ ಯುವಕ ಕುನಾಲ್‌ ಎಂಬಾತ ಹೊಸ ಮೊಬೈಲ್‌

ಪಾಕ್‌ ಜೊತೆ ಸಂಪರ್ಕ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿಯ ಬಂಧನ

ಪಾಕಿಸ್ತಾನದವರ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆ ದೊಡ್ಡಬಳ್ಳಾಪುರದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( 28 ) ಬಂಧಿತ ಆರೋಪಿ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ

ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಗುರುವಾರ ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಅವರ ನಾಪತ್ತೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಜ್ಞಾನೇಂದ್ರ ಕುಮಾರ್‌ ದೆಹಲಿಗೆ ಹೋಗಲೆಂದು ವಿಮಾನ

ಪ್ರವಾಸಕ್ಕೆ ಬಂದಿದ್ದ ತಾಯಿ ಮಗಳು ಹಂಪಿಯಲ್ಲಿ ನದಿಪಾಲು

ವಿಜಯನಗರದ ಹೊಸಕೋಟೆ ತಾಲೂಕಿನಲ್ಲಿರುವ ಹಂಪಿ ಪ್ರವಾಸಕ್ಕೆ ಬಂದಿದ್ದ ತಾಯಿ ಮತ್ತು ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಆಂಧ್ರ ಪ್ರದ್ರೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದಿಂದ ಸಂಬಂಧಿಕರೊಂದಿಗೆ ಬಂದಿದ್ದ ಯಾಸ್ಮೀನ್(13) ಹಾಗೂ ತಾಯಿ ಶಾಹೀನ್(38) ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾದವರು. ಅಡುಗೆ

ರಾಜ್ಯದಲ್ಲಿ ಡೈರಿಯೇತರ ಪನೀರ್‌ಗೆ ಒಂದು ವರ್ಷ ನಿಷೇಧ

ರಾಜ್ಯದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಡೈರಿಯೇತರ ಕೃತಕ ಪನೀರ್‌ ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದ ಬಳಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆ ಪನೀರ್‌ಗೆ ಒಂದು ವರ್ಷ ನಿಷೇಧ ಹೇರಿ ಅಧಿಕೃತ ಆದೇಶ ಹೊರಡಿಸಿದೆ. ಆಹಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ

ಸತ್ತಿದ್ದ ಚಿರತೆಯನ್ನು ಸುಟ್ಟ ವೀಡಿಯೊ ವೈರಲ್‌: ಮೂವರ ಬಂಧನ

ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗೇಟ್‌ ಬಳಿ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಚಿರತೆಯನ್ನು ಗ್ರಾಮಸ್ಥರು ಸುಟ್ಟು ಹಾಕಿರುವ ಪ್ರಕರಣ ಸಂಬಂಧ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಚಿರತೆಯನ್ನು ಸುಟ್ಟ ವೀಡಿಯೊ ವೈರಲ್‌ ಆದ ಬಳಿಕ ಅರಣ್ಯಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಚಿರತೆ ಸತ್ತಿರುವುದನ್ನು ಅರಣ್ಯ

ಮಕ್ಕಳಿಬ್ಬರ ರಕ್ಷಿಸಲು ಬಾವಿಗೆ ಜಿಗಿದ ತಂದೆಯೂ ನಾಪತ್ತೆ

ವಿಜಯಪುರದ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯೊಂದರ ತೆರೆದ ಬಾವಿಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟಿದ್ದಾರೆ. ಬಾಲಕಿಯರ ರಕ್ಷಣೆಗೆಂದು ಬಾವಿಗಿಳಿದ ತಂದೆಯೂ ನಾಪತ್ತೆಯಾಗಿರುವ ಘಟನೆ ನಡೆದಿದೆ. ೧೫ ವರ್ಷದ ಸಾಕ್ಷಿ ಮತ್ತು ೧೦ ವರ್ಷದ ರಕ್ಷಿತಾ ಬಾವಿಗೆ ಬಿದ್ದ ಬಾಲಕಿಯರು. ಅವರನ್ನು

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ನೋಟಿಸ್ ನೀಡಿ ಚರ್ಚೆಗೆ ಬನ್ನಿ ಎಂದು ವಿಪಕ್ಷಗಳಿಗೆ ಸಿಎಂ ಚಾಟಿ

ಸಚಿವ ನಾಗೇಂದ್ರ ಅವರಿಂದ ಇಂತಹ ಕಾರಣಕ್ಕೆ ರಾಜಿನಾಮೆ ಕೇಳುತ್ತಿದ್ದೇವೆ ಎಂದು ವಿಪಕ್ಷಗಳು ಹೋರಾಟ ಮಾಡಿದರೆ ಅದಕ್ಕೆ‌ ಅರ್ಥವಿರುತ್ತದೆ. ನೋಟಿಸ್ ನೀಡದೆ, ಸದನದ ಬಾವಿಗೂ ಬರದೇ ರಾಜಿನಾಮೆ ಕೊಡಿ ಎಂದರೆ ಅರ್ಥವಿದೆಯೇ ಎಂದು ಸಿಎಂ ಡಿ‌ಕೆ ಶಿವಕುಮಾರ್‌ ಪ್ರತಿಪಕ್ಷಗಳ ನಡೆಗೆ ಚಾಟಿ ಬೀಸಿದರು.