Menu

ಮಾಂಗಲ್ಯ, ಜನಿವಾರ ತೆಗೆಸುವ ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರ: ಆರ್‌ ಅಶೋಕ ಕಿಡಿ

ಕಳೆದ ವರ್ಷ ಸಿಇಟಿ, ನೀಟ್ ಪರೀಕ್ಷೆಗಳ ಸಂದರ್ಭದಲ್ಲಿ ಜನಿವಾರ ಕತ್ತರಿಸಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಾಂಗಲ್ಯ ತೆಗೆಸಿ ಪರೀಕ್ಷೆ ಬರೆಯುವಂತೆ ಹೇಳಿದ್ದ ಕಾಂಗ್ರೆಸ್‌ ಸರ್ಕಾರ ಈ ವರ್ಷವೂ ತನ್ನ ಹಳೆ ಚಾಳಿ ಮುಂದುವರಿಸಿದೆ. ಬೆಂಗಳೂರಿನ ಕೋರಮಂಗಲದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಮತ್ತೊಮ್ಮೆ ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಒಂದೆಡೆ ಹಿಂದೂಗಳಿಗೆ ರಕ್ಷಣೆಯಿಲ್ಲ, ಇನ್ನೊಂದೆಡೆ ಹೀಗೆ ಹಿಂದೂಗಳ

ಇಸ್ರೇಲ್-ಲೆಬನಾನ್ ಕದನ ವಿರಾಮ ಮೂರು ವಾರ ವಿಸ್ತರಣೆ

ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ಮೂರು ವಾರಗಳವರೆಗೆ ವಿಸ್ತರಣೆಯಾಗಿದೆ. ಎರಡೂ ದೇಶಗಳು ಕದನ ವಿರಾಮ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಶ್ವೇತಭವನದಲ್ಲಿ ಏ.23 ರಂದು ನಡೆದ ಎರಡನೇ ಸುತ್ತಿನ ಮಾತುಕತೆ ಬಳಿಕ ಈ

ವಾಟ್ಸಾಪ್ ಯುನಿವರ್ಸಿಟಿ ಮಾಹಿತಿ ಒಪ್ಪಲಾಗದು: ಸುಪ್ರೀಂಕೋರ್ಟ್‌

ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದ ಮಾಹಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀಕ್ಷ್ಣ ಹೇಳಿಕೆ ನೀಡಿದೆ. ಶಬರಿಮಲೆ ಸೇರಿದಂತೆ ದೇಶದ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ಮಂಡಿಸಿದೆ.

ಭಾಲ್ಕಿಯಲ್ಲಿ ಸಿಡಿಲಿಗೆ ಯುವಕರಿಬ್ಬರು ಬಲಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28) ಸಿಡಿಲಿಗೆ ಬಲಿಯಾವರು. ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಮಳೆ ಶುರುವಾಗಿದೆ.

ಇಂಡಿಯನ್‌ ಬ್ಯಾಂಕ್‌ನಲ್ಲಿ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನ ಕಳವು: ಗ್ರಾಹಕರ ಪ್ರತಿಭಟನೆ

ಬೆಂಗಳೂರಿನ ಗಿರಿನಗರ ಇಂಡಿಯನ್‌ ಬ್ಯಾಂಕ್‌ನಲ್ಲಿ ಇಟ್ಟಿದ್ದ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ಸಂಬಂಧ ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಬ್ಯಾಂಕ್‌ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಗಿರಿನಗರದ ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ವಿರುದ್ಧ ಪ್ರಕರಣ ದಾಖಲಾಗಿ ಮೂರು

ತಾಯಿ, ಪತ್ನಿ, ಮಕ್ಕಳ ಕೊಂದು ವ್ಯಕ್ತಿ ಆತ್ಮಹತ್ಯೆ

ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟಕೃಷ್ಣಪಾಲೆಂ ಪಂಚಾಯತ್‌ನಲ್ಲಿ ಐದು ಜನರ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೋಹನ್ ಎಂಬ ವ್ಯಕ್ತಿ ಪತ್ನಿ ಮತ್ತು ತಾಯಿಯನ್ನು ಕತ್ತು ಹಿಸುಕಿ ಕೊಂದು, ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ, ಹೈಕಮಾಂಡ್ ಭೇಟಿ ಮಾಹಿತಿ ಬಹಿರಂಗ ಮಾಡಲ್ಲ: ಡಿಕೆ ಶಿವಕುಮಾರ್

“ನಾನು ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ನಾನು ನಮ್ಮ ಕೆಲಸ ಮಾಡುತ್ತಿರುತ್ತೇನೆ. ಆದರೆ, ಯಾರನ್ನು ಭೇಟಿಯಾಗಿರುವೆ ಎಂದು ಹೇಳುವುದಿಲ್ಲ. ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನವದೆಹಲಿಯಲ್ಲಿ  ದೆಹಲಿ ನಾಯಕರಿಗೆ ಚುನಾವಣೆ ಕುರಿತು ವರದಿ ನೀಡುತ್ತೀರಾ ಎಂಬ

ಜೆಡಿಎಸ್‌ಗೆ ಸೆಕ್ಯುಲರಿಸಂ ಅನಿವಾರ್ಯವೋ, ಆಯ್ಕೆಯೋ?

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ, ರಾಜ್ಯದಲ್ಲಿ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಎಂಬುದೀಗ ಬಹು ಚರ್ಚಿತ ವಿಷಯವಾಗಿದೆ. ಜಾತ್ಯತೀತ ಜನತಾದಳ, ಬಿಜೆಪಿ ಜೊತೆ ರಾಜಕೀಯವಾಗಿ ಸಾರ್ವಕಾಲಿಕ ರಾಜಿ

ಭಾರತ, ಚೀನಾ ನಾಗರಿಕತೆ ತೊಟ್ಟಿಲುಗಳಲ್ಲ, ನರಕದ ಕೂಪಗಳು: ಹೀಯಾಳಿಸಿದ ಟ್ರಂಪ್‌

ಭಾರತ, ಚೀನಾ ಕೇವಲ ನರಕದ ಕೂಪಗಳು, ಇವುಗಳು ನಾಗರಿಕತೆಯ ತೊಟ್ಟಿಲುಗಳಲ್ಲ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಗ್ಯಾಂಗ್‌ಸ್ಟರ್ಸ್‌ ವಿತ್‌ ಲ್ಯಾಪ್‌ಟಾಪ್‌ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೀಯಾಳಿಸಿದ್ದಾರೆ. ಟ್ರಂಪ್ ಭಾರತ ಮತ್ತು ಚೀನಾ ವಲಸಿಗರ ವಿರುದ್ಧ

ಕೋಲಾರದಲ್ಲಿ ಸ್ನೇಹಿತರ ಜೊತೆ ಈಜಲೆಂದು ಹೋದ ಬಾಲಕ ನೀರುಪಾಲು

ಕೋಲಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್​ ಆದ ಖುಷಿಯಲ್ಲಿದ್ದ ಬಾಲಕ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದಾನೆ. ಕಿರಣ್(15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ರಘುಪತಿ ಎಂಬವರ ಪುತ್ರನಾದ ಕಿರಣ್