Saturday, September 19, 2026
Menu

ಬಳ್ಳಾರಿಯಲ್ಲಿ ಮಂಗಳಮುಖಿ ಮತ್ತು ಪ್ರಿಯತಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹಣಕಾಸು ವಿಚಾರಕ್ಕೆ ಮಂಗಳಮುಖಿ ಮತ್ತು ಪ್ರಿಯತಮನ ಮಧ್ಯೆ ಶುರುವಾದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳಮುಖಿ ಸುಹಾಸಿನಿ (29) ಹಾಗೂ ಪ್ರಿಯಕರ ಶೇಖರ್ (27) ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದಾಜಿಸಲಾಗಿತ್ತು, ತನಿಖೆ ಮುಂದುವರಿದಂತೆ ಮಂಗಳಮುಖಿ ಸುಹಾಸಿನಿಯನ್ನು ಕೊಲೆ ಮಾಡಿ ನಂತರ ಶೇಖರ್ ಆತ್ಮಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಲ್ಲಿನ ಚಿಕಿತ್ಸೆಗೆಂದು ಜೇವರ್ಗಿಯ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೋಮಾಗೆ

ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಹೋಗಿರುವ ಮಹಿಳೆ ಕೋಮಾ ಸ್ಥಿತಿ ತಲುಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ವೈದ್ಯರ ಯಡವಟ್ಟು ಈ ಸ್ಥಿತಿಗೆ ಕಾರಣವೆಂದು ಕುಟುಂಬ ಹೇಳಿದರೆ, ವೈದ್ಯರ ತಪ್ಪಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಜೇವರ್ಗಿ

ಹಾಸನದಲ್ಲಿ ಎರಡು ಎಕರೆ ಆಸ್ತಿ ವಿವಾದ: ದಾಯಾದಿಗಳಿಂದ ವ್ಯಕ್ತಿ ಕೊಲೆ

ಹಾಸನದ ಆಲೂರು ತಾಲೂಕಿನ ರಾಜನಹಳ್ಳಿ ಸಮೀಪ ಎರಡು ಎಕರೆ ಆಸ್ತಿ ವಿವಾದ ತಾರಕಕ್ಕೆ ಏರಿ, ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ದಾಯಾದಿಗಳು ಸೇರಿ ಹತ್ಯೆ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿದ್ದ ವೀರಪ್ಪ (58) ಹತ್ಯೆಯಾದವರು. ಕೋರ್ಟ್‌ ಕೇಸ್ ಮುಗಿಸಿ ಬಂದ ಬಳಿಕ

ನೌಕಾಪಡೆ ಮಾಹಿತಿ ಪಾಕ್‌ಗೆ ರವಾನೆ: ಉಡುಪಿಯಲ್ಲಿ ಮತ್ತೊಬ್ಬ ಅರೆಸ್ಟ್‌

ಭಾರತೀಯ ನೌಕಾ ಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬನನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆಗಳ ಗೌಪ್ಯ ಮಾಹಿತಿಯನ್ನು

ಕೊಳ್ಳೇಗಾಲದಲ್ಲಿ ಹುಲಿ ಶವ ಪತ್ತೆ: ಉರುಳಿಗೆ ಸಿಲುಕಿ ಸಾವು, ಆರೋಪಿಗಳ ಪತ್ತೆಗೆ ಕ್ರಮ

ಚಾಮರಾಜನಗರದ ಕೊಳ್ಳೇಗಾಲ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಶವ ಪತ್ತೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಹುಲಿಯು ಉರುಳಿಗೆ ಸಿಲುಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸ್ಕೂಟರ್ ಕ್ಲಚ್ ವೈರ್ ಕತ್ತಿಗೆ ಸಿಕ್ಕಿ ಹಾಕಿಕೊಂಡು ಹುಲಿ ಅಸು ನೀಗಿದ್ದು, ಅರಣ್ಯ ಇಲಾಖೆ ಉರುಳು ಹಾಕಿದವರ

ಕೌಟುಂಬಿಕ ಬಿಕ್ಕಟ್ಟು: ಕುಷ್ಟಗಿಯಲ್ಲಿ ಗ್ರಾ. ಪಂ ನೌಕರ ಆತ್ಮಹತ್ಯೆ

ಕೊಪ್ಪಳದ ಕುಷ್ಟಗಿ ತಾಲೂಕಿನ ಜಮಲಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್​ ಡಿ ಗ್ರೂಪ್ ನೌಕರ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ರಮೇಶ್ ದಂಡಿನ (35) ಆತ್ಮಹತ್ಯೆ ಮಾಡಿಕೊಂಡವರು. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರಕ್ಕೆ ಕಳೆದ

400 ಕೋಟಿ ರೂಪಾಯಿಗಳಿದ್ದ ಕಂಟೈನರ್ ಕೇಸ್‌ ಮುಚ್ಚಿ ಹಾಕುವ ಹುನ್ನಾರ?

ಕೆಲವೇ ದಿನಗಳ ಹಿಂದೆ 400 ಕೋಟಿ ರೂಪಾಯಿಗಳ ನೋಟುಗಳಿದ್ದ ಕಂಟೈನರ್ ಬಂದಿದ್ದು ಎಲ್ಲಿಂದ? ಇದರ ವಾರಸುದಾರರು ಯಾರು ? ಇದರಲ್ಲಿದ್ದ ಹಣ ಯಾರಿಗೆ ಸೇರಿದ್ದು ? ಕಂಟೈನರ್‌ನಲ್ಲಿ ಹಣವನ್ನು ರವಾನಿಸಲು ಅನುಮತಿ ಕೊಟ್ಟವರು ಯಾರು ? ಅಸಲಿಗೆ ಇದೊಂದು ಕ್ರಿಮಿನಲ್ ಕೃತ್ಯವಾಗಿದ್ದು

ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ: ಹೆಚ್‌ಡಿಕೆ ಕಿಡಿ

ರಾಜ್ಯದ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿಯನ್ನು ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ  ಕುಮಾರಸ್ವಾಮಿ  ಕಿಡಿ ಕಾರಿದ್ದಾರೆ.  ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ತಮ್ಮ ಕ್ಷೇತ್ರದಲ್ಲಿ 

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್‌ ಆದೇಶ

ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದ್ದು, ಚುನಾವಣಾ ಆಯೋಗ ಹಾಗೂ ವಿಧಾನಸಭೆ ಕಾರ್ಯದರ್ಶಿಗೂ ಈ ಬಗ್ಗೆ ಸೂಚನೆ ನೀಡಿದೆ. 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಎಸ್‌.ಎನ್‌. ಸುಬ್ಬಾರೆಡ್ಡಿ

ಚಿತ್ರದುರ್ಗದ ಶಾಲೆಯಲ್ಲಿ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗದ ಭರಮಸಾಗರದಲ್ಲಿರುವ ಖಾಸಗಿ ವಸತಿ ಶಾಲೆಯೊಂದರ ವಿದ್ಯಾರ್ಥಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ವಸತಿ ಶಾಲೆಯ ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿ 16 ವರ್ಷದ ಕೊಟ್ರೇಶ್ ಆತ್ಮಹತ್ಯೆ ಮಾಡಿಕೊಂಡವ. ಕೊಟ್ರೇಶ್ ಚಿತ್ರದುರ್ಗದ ಕರಿಯಣ್ಣನಹಳ್ಳಿಯವನಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆತ 3ನೇ ಮಹಡಿಯಿಂದ