Menu

ಪ್ರೀತಿ ನಿರಾಕರಣೆ, ಪ್ರಿಯತಮೆ ಕುಟುಂಬದಿಂದ ಹಲ್ಲೆ: ವಿಷ ಸೇವಿಸಿ ಯುವಕ ಸುಸೈಡ್‌

ಪ್ರಿಯತಮೆಯಿಂದ ಪ್ರೀತಿ ನಿರಾಕರಣೆ ಹಾಗೂ ಆಕೆಯ ಕುಟುಂಬದವರಿಂದ ಹಲ್ಲೆಗೆ ಒಳಗಾಗಿ ನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರ ನಿವಾಸಿ ಶಬರೀಶ್ (28) ಆತ್ಮಹತ್ಯೆ ಮಾಡಿಕೊಂಡವ. ರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಮನೆಯವರು ವಿರೋಧಿಸಿದ್ದರು.

ಯುವತಿ ಶಬರೀಶ್‌ಗೆ ಕರೆ ಮಾಡಿ, ನಿನ್ನ ಬಳಿ ಮಾತನಾಡಬೇಕು. ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಾ ಎಂದಿದ್ದಳು. ಶಬರೀಶ್ ಹೋದಾಗ ಮಾತಿನ ಜಗಳ ನಡೆದಿದ್ದು, ಸಂಬಂಧಿಕರೊಂದಿಗೆ ಸೇರಿ ಶಬರೀಶ್ ಮೇಲೆ ಯುವತಿ ಹಲ್ಲೆ ನಡೆಸಿದ್ದಾಳೆ.

ನೊಂದ ಶಬರೀಶ್, ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿದ್ದ. ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ಜೈಲಿನಲ್ಲಿ ಕೈದಿ ಆತ್ಮಹತ್ಯೆ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಂತೇಶ್ ಕುಂಬಾರ್ (29) ಆತ್ಮಹತ್ಯೆ ಮಾಡಿಕೊಂಡ ಕೈದಿ. ಪೋಕ್ಸೋ ಪ್ರಕರಣದಡಿ ಆತ ಆರೋಪಿಯಾಗಿ ಜೈಲು ಸೇರಿದ್ದ.

ಜೈಲಿನಲ್ಲಿದ್ದ ಮಹಾಂತೇಶ್ ಕುಂಬಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಹಿತಿ ತಿಳಿದು ಧಾರವಾಡ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆತ್ಮಹತ್ಯೆಗೆ ಕಾರಣ ಎನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಾರಾಗೃಹದ ಒಳಾಂಗಣ ಸ್ಥಿತಿ ಗತಿ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಆತ್ಮಹತ್ಯೆಗೆ ಸಂಬಂಧಿಸಿಂತೆ ಹೆಚ್ಚಿನ ವಿವರಗಳು ಲಭ್ಯವಾಗಲಿವೆ. ಪ್ರಕರಣದ ಕುರಿತು ಪೊಲೀಸ್‌ ತನಿಖೆ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *