Menu

ಮಗನ ಸಾಧನೆಯ ಸಂಭ್ರಮಕ್ಕೆ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಅಪಘಾತಕ್ಕೆ ಬಲಿ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ಮಗ ಚಿನ್ನದ ಪದಕ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲೆಂದು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಆಟೊ ಉರುಳಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ.

ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ತಂದೆ ಶಿವಕುಮಾರ್ ಶರ್ಮಾ (59) ಸಾವು ಆಘಾತ ನೀಡಿದೆ. ಉಜ್ಜಯಿನಿಯ ಶಿವಕುಮಾರ್ ಶರ್ಮಾ ಪುತ್ರ ದಿವ್ಯಾಂಶು ಸಕ್ಸೇನಾ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡು ಚಿನ್ನದ ಪದಕ ಗಳಿಸಿದ್ದಾರೆ.

ಏಪ್ರಿಲ್ 22ರಂದು ನಡೆದ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಪದಕಗಳನ್ನು ಸ್ವೀಕರಿಸಿದ್ದಾರೆ. ಮಗನ ಈ ಸಾಧನೆ ನೋಡಲೆಂದು ತಂದೆ ಶಿವಕುಮಾರ್ ಮಧ್ಯಪ್ರದೇಶದಿಂದ ಕಲಬುರಗಿಗೆ ಆಗಮಿಸಿದ್ದರು. ಘಟಿಕೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿಯಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಶಿವಕುಮಾರ್ ಶರ್ಮಾ ಆಟೊದಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆಟೊ ಉರುಳಿದೆ, ಶಿವ ಕುಮಾರ್ ಶರ್ಮಾ ಸ್ಥಳದಲ್ಲೇ ಮೃತಪಟ್ಟರೆ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದಿವ್ಯಾಂಶು ವೇದಿಕೆಯ ಮೇಲೆ ಪದಕ ಸ್ವೀಕರಿಸಬೇಕಾದರೆ, ತಂದೆಯ ಶವವಾಗಿ ಪಕ್ಕದ ಆಸ್ಪತ್ರೆಯಲ್ಲಿದ್ದರು. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *