ಜಿಲ್ಲಾ ಸುದ್ದಿ
ಆಳುವ ಸರ್ಕಾರಕ್ಕೆ ಅವಕಾಶ ವಂಚಿತರ ಪರ ಕಾಳಜಿಯಿರಬೇಕು: ಪ್ರಿಯಾಂಕ್ ಖರ್ಗೆ
ಆಳುವ ಸರ್ಕಾರಕ್ಕೆ ಸಾಮಾಜಿಕ ಬದ್ದತೆ ಇರಬೇಕು. ಅವಕಾಶವಂಚಿತರಿಗ ಬಗ್ಗೆ ಕಾಳಜಿ ತೋರಿಸಿ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಅದಕ್ಕೆ ಆಳುವವರಿಗೆ ಶ್ರೀಮಂತ ಹೃದಯವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು. ಕಲಬುರಗಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಒಟ್ಟು 499 ಫಲಾನುಭವಿಗಳಿಗೆ ರೂ 263.58 ಲಕ್ಷ ವೆಚ್ಚದಲ್ಲಿ ವಿಕಲಚೇತನರಿಗೆ ಥ್ರಿ ಚಕ್ರವಾಹನ, ಬುದ್ದಿ ಮಾಂದ್ಯ
ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಕೇರಳ ಬಾಲಕಿ ಶ್ರೀನಂದಾ ಮೃತದೇಹ ಪ್ರಪಾತದಲ್ಲಿ ಪತ್ತೆ
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. 40 ಜನರ ಪ್ರವಾಸಿ ತಂಡದಲ್ಲಿ ಕುಟುಂಬದೊಂದಿಗೆ ಚಾರಣಕ್ಕೆ ಬಂದಿದ್ದ ಆಕೆ
ಚಳ್ಳಕೆರೆಯಲ್ಲಿ ಶಿಕ್ಷಕನಿಂದ ಅತ್ಯಾಚಾರ, ಬಾಲಕಿಗೆ ಗರ್ಭಪಾತ: ಶಿಕ್ಷಕ, ವೈದ್ಯೆ ವಿರುದ್ಧ ಪೋಕ್ಸೊ ದಾಖಲು
ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ
ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲು
ಉಪನ್ಯಾಸಕಿ ಇತರ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸುಭಾಷನಗರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಸುಭಾಷನಗರ ನಿವಾಸಿ ಎಸ್. ಗೌತಮಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೋಷಕರು
ಹುಲಿಕಲ್ ಘಾಟ್ ಗುಡ್ಡ ಕುಸಿತ: ಮೂವರು ಕಾರ್ಮಿಕರ ಶವಗಳೂ ಪತ್ತೆ
ಶಿವಮೊಗ್ಗದ ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿದು ಮೃತಪಟ್ಟಿದ್ದವರಲ್ಲಿ ಮತ್ತೊಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ. ಇಬ್ಬರ ಶವ ಈಗಾಗಲೇ ಪತ್ತೆಯಾಗಿತ್ತು. ಶುಕ್ರವಾರ ಮುಂಜಾನೆ 3 ಗಂಟೆ ಕಾರ್ಮಿಕ ಶಬ್ಬೀರ್ (40) ಮೃತದೇಹ ಸಿಕ್ಕಿದೆ. ಘಾಟ್‌ನ ಹೇರ್ ಪಿನ್ ಕ್ರಾಸ್ ನಲ್ಲಿ ಕಾಂಕ್ರೀಟ್ ವಾಲ್
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಂಚ ಪಡೆದು ಪರಾರಿ ಯತ್ನ: ಬೆನ್ನಟ್ಟಿ ಹಿಡಿದ ಲೋಕಾಯುಕ್ತ
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಒಂದು ಲಕ್ಷ ರೂ. ಲಂಚ ಪಡೆಯುತ್ತಿದ್ದಂತೆಯೇ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿ, ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿಯಲ್ಲಿ ನಡೆದಿದೆ. ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರನೇ ಕ್ಲಾಸ್ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ
ಶಿವಮೊಗ್ಗ ನಗರದ ಬೊಮ್ಮನ ಕಟ್ಟೆ ಬಡಾವಣೆಯ ಎ- ಬ್ಲಾಕ್‌ನಲ್ಲಿ ಆರನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೋಷಕರೊಂದಿಗೆ ವಾಸ ಮಾಡುತ್ತಿದ್ದ 12 ವರ್ಷದ ಜೀವಿತಾ ಮೃತಪಟ್ಟವಳು. ಆಕೆ ಬೊಮ್ಮನ ಕಟ್ಟೆಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ
ಯೋಗೇಶ್ ಗೌಡ ಕೊಲೆ ಕೇಸ್: ಏಪ್ರಿಲ್ 15ಕ್ಕೆ ತೀರ್ಪು ಪ್ರಕಟ
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 15ಕ್ಕೆ ಮುಂದೂಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ
ಮಗ ಬೆಂಗಳೂರಲ್ಲಿ, ಮಗಳು ದುಬೈನಲ್ಲಿ: ಮೂಡಿಗೆರೆಯಲ್ಲಿ ಪತಿ ಶವದೊಂದಿಗೆ 10 ದಿನ ಕಳೆದ ಅಸ್ವಸ್ಥ ಪತ್ನಿ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದು, ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿ 10 ದಿನ ಕಳೆದಿದ್ದಾರೆ. ಪತಿ ಸತ್ತಿರುವುದೇ ಪತ್ನಿಗೆ ತಿಳಿದಿಲ್ಲ. 77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಮಾನಸಿಕ ಅಸ್ವಸ್ಥ ಪತ್ನಿಯು ಪತಿ
ಬೆಂಗಳೂರಿನ ಮೂವರು ವಿಜಯಪುರ ಕೆರೆಯಲ್ಲಿ ಮುಳುಗಿ ಸಾವು
ಬೆಂಗಳೂರಿನಿಂದ ವಿಜಯಪುರ ಪ್ರವಾಸಕ್ಕೆ ಬಂದಿದ್ದವರಲ್ಲಿ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಜಯಪುರ ನಗರ ಹೊರವಲಯದ ಭೂತನಾಳ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಆರ್.ಟಿ ನಗರದ ಬಾಲಕ ಮಹಮ್ಮದ್ ಹಯಾತ್, ಅಬ್ದುಲ್ ಖುದ್ದುಸ್ ಹಾಗೂ ಹೈದರ್ ಪಾಶಾ ಎಂದು ಗುರುತಿಸಲಾಗಿದೆ.




