Friday, September 18, 2026
Menu

ಚಿಕ್ಕಮಗಳೂರಿನಲ್ಲಿ ಕೊರಳಿಗೆ ಸುತ್ತಿಕೊಂಡ ಜೋಕಾಲಿ ಸೀರೆ: ಬಾಲಕಿ ಸಾವು

ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮನೆಯೊಂದರಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು ಹತ್ತು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲೇಖನಾ ಮೃತಪಟ್ಟ ಬಾಲಕಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಈ ದುರಂತ ನಡೆದಿದೆ. ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಳುಗುತ್ತಿದ್ದ ಮಕ್ಕಳ ರಕ್ಷಿಸಲು ಹೋಗಿ ಮಹಿಳೆಯರಿಬ್ಬರ ಸಾವು ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ

ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡಿರುವ ನಡುವೆಯೇ  ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ. ಸಭೆಯಲ್ಲಿ 15 ಟ್ರಸ್ಟಿಗಳಲ್ಲಿ 13 ಮಂದಿ ಭಾಗವಹಿಸಿ ನಿರ್ಣಯ ಈ ಕೈಗೊಂಡಿದ್ದಾರೆ. ಮಠದ ಟ್ರಸ್ಟಿಗಳು ನಿರ್ಣಯ ಕೈಗೊಂಡು ಸ್ವಾಮೀಜಿಗಳನ್ನು

ಗಂಡ, ಮಗು ತೊರೆದು ಕಾರಲ್ಲಿ ಪ್ರಿಯಕರನ ಮದುವೆಯಾದ ಹಾಸನದ ಮಹಿಳೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಪತಿ ಹಾಗೂ ಚಿಕ್ಕ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿರುವ  ಪ್ರಕರಣ ನಡೆದಿದೆ. ಎಂಟು ವರ್ಷಗಳ ದಾಂಪತ್ಯ, ಏಳು ವರ್ಷದ ಮಗನನ್ನು ತೊರೆದು ಹರ್ಷಿತಾ ಎಂಬಾಕೆ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲೇ ಮದುವೆಯಾಗಿದ್ದಾಳೆ. ಹರ್ಷಿತಾಗೆ

ಪ್ರಿಯಕರನಿಂದ ಖಾಸಗಿ ಪೋಟೊ ವೈರಲ್‌: ಮದುವೆ ನಿಗದಿಯಾಗಿದ್ದ ಸಿಂದಗಿ ಯುವತಿ ಸುಸೈಡ್‌

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಪ್ರಿಯಕರನೊಬ್ಬ ಯುವತಿಯ ಖಾಸಗಿ ಪೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದರಿಂದ ಯುವತಿಗೆ ನಿಗದಿಯಾಗಿದ್ದ ಮದುವೆ ಮುರಿದು ಬಿದ್ದಿದೆ. ಘಟನೆಯಿಂದ ಮನನೊಂದ ಯುವತಿ ಅವಮಾನವನ್ನು ಸಹಿಸಲಾಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಂದಾಳ ಗ್ರಾಮದ ಜಯಶ್ರೀ

ಸಂಪುಟ ಪುನಾರಚನೆ ಹೈಕಮಾಂಡ್ ಗೆ ಬಿಟ್ಟಿದ್ದು: ಸಿಎಂ ಸಿದ್ದರಾಮಯ್ಯ

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಎನ್.ಆರ್.ಪುರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು.‌ ಈಗ ನನ್ನ

ಸತ್ತವರ ಹೆಸರಲ್ಲಿ ಸರ್ಕಾರದ 4.27 ಕೋಟಿ ರೂಪಾಯಿ ಅಕ್ರಮ: ಮಧುಗಿರಿ ತಾ.ಪಂ ಕ್ಲರ್ಕ್‌, ಕಾಂಗ್ರೆಸ್‌ ಮುಖಂಡನ ವಿರುದ್ಧ ಎಫ್‌ಐಆರ್‌

ನಿವೃತ್ತರಾಗಿರುವ ಮತ್ತು ಮೃತಪಟ್ಟಿರುವ ಸರ್ಕಾರಿ ನೌಕರರ ಹೆಸರಿನಲ್ಲಿ ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ್ದಾರೆ.  4.27 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇದೆ. ಸೌಮ್ಯಾ ,  ಕಾಂಗ್ರೆಸ್ ಜಿಲ್ಲಾ

ಸಿಬಿಐ ಸೋಗಿನಲ್ಲಿ ಡಿಜಿಟಲ್‌ ಅರೆಸ್ಟ್‌: ಬೆಳಗಾವಿ ವ್ಯಕ್ತಿಗೆ 15 ಕೋಟಿ 45 ಲಕ್ಷ ರೂ. ವಂಚನೆ

ಬೆಳಗಾವಿಯಲ್ಲಿ ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ 45 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉದ್ಯಮಿಗೆ ಫೋನ್ ಮಾಡಿದ ವಂಚಕರು, ತಾವು ಸಿಬಿಐ

ಸಂವಿಧಾನದ ಆಶಯ ಜಾರಿಗೆ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಸ್ವಯಂ ಪ್ರಶ್ನಿಸಿಕೊಳ್ಳಿ: ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಲವ್‌, ಸೆಕ್ಸ್‌, ಮದುವೆ ಹೆಸರಲ್ಲಿ ವಂಚನೆ: ಇಂಜಿನಿಯರ್‌ ವಿರುದ್ಧ ಶಿಕ್ಷಕಿ ದೂರು

ಲವ್‌, ಸೆಕ್ಸ್‌, ಮದುವೆ ಎಂದು ನಂಬಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬವರು ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಅತಿಥಿ ಶಿಕ್ಷಕಿ

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನಿಂದ ಗಂಡನ ಕೊಲ್ಲಿಸಿದ ಎರಡು ಮಕ್ಕಳ ತಾಯಿ

ಬೆಳಗಾವಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಎರಡು ಮಕ್ಕಳ ತಾಯಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಅಂಗೋಲ್‌ನ ಬಬಲೆ ಗಲ್ಲಿ ನಿವಾಸಿ ಆಯುರ್ವೇದ ಥೆರಾಪಿಸ್ಟ್ ಅವಿನಾಶ್ ಅಶೋಕ್ ಸುಪ್ಪಣ್ಣ (40)