Sunday, September 13, 2026
Menu

ಬೆಳಗಾವಿಯಲ್ಲಿ ಮಗು ಜೊತೆ ತಾಯಿ ಆತ್ಮಹತ್ಯೆ: ಗಂಡನ ಮನೆಯವರ ಕಿರುಕುಳ ಆರೋಪ

ಬೆಳಗಾವಿಯ ಪೀರನವಾಡಿಯಲ್ಲಿ ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತ ತಾಯಿ ತನ್ನ ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯ ನಿವಾಸಿ ಪ್ರೇಮಾ ನಾಗೇಶ ತಳವಾರ (28) ತನ್ನ ಮೂರು ವರ್ಷದ ಮಗ ಭುವನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಮನೆಯವರು ಮಾಡಿದ್ದ ಸಾಲವನ್ನು ತೀರಿಸುವಂತೆ ಪ್ರೇಮಾ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವಿದೆ. ಗಂಡ, ಅತ್ತೆ

ಕುಡಿಯುವ ನೀರು: ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ.

ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ  ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ

ಕಿತ್ತೂರು ಕಸದ ತಿಪ್ಪೆಯಲ್ಲಿ ಹಸುಗೂಸು ಪತ್ತೆ

ತಾಯಿ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದು ಪರಾರಿಯಾಗಿರುವ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆಯ ಕೆಳಭಾಗದಲ್ಲಿ ಅನಾಥವಾಗಿ ಬಿದ್ದಿದ್ದ ಗಂಡು ಮಗುವಿನ ಅಳುವಿನ ಧ್ವನಿ ಕೇಳಿ, ಕುರಿಗಾಹಿಯೊಬ್ಬರು ಸ್ಥಳಕ್ಕೆ ಬಂದು ಮಗುವನ್ನು ರಕ್ಷಿಸಿದ್ದಾರೆ.

ಯುಟ್ಯೂಬರ್‌ಗಳಿಂದ ಬ್ಲ್ಯಾಕ್‌ಮೇಲ್ : ರೌಡಿ ಶೀಟರ್‌ಗೆ ಸೇರಿಸುವ ಎಚ್ಚರಿಕೆಯಿತ್ತ  ಬೆಳಗಾವಿ ಎಸ್ಪಿ ಕೆ. ರಾಮರಾಜನ್

ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ರೈತರು ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕರಪ್ಟ್ ಜಾಲಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕೇವಲ

ಮಳೆ ಕೊರತೆ: ಪ್ರತಿ ಜಿಲ್ಲೆಗೆ ಐದು ಕೋಟಿ ರೂ. ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ

ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಪ್ರತಿ ಜಿಲ್ಲೆಗೆ ೫ ಕೋಟಿ ರೂ.  ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ಹೇಳಿದ್ದಾರೆ. ಬೆಳಗಾವಿಯಲ್ಲಿ

ವಿವಾಹಿತೆಯೊಂದಿಗೆ ಪರಾರಿಯಾದ ಯುವಕನ ಮನೆಗೆ ದಾಳಿ, ಲೂಟಿ

ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪರಾರಿಯಾಗಿದ್ದು, ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಲ್ಲದೆ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಕುರಿಗಳನ್ನು ಹೊತ್ತೊಯ್ದಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಯುವಕನ ಕುಟುಂಬವು ಬೆಳಗಾವಿ ನಗರ

ನಡತೆ ಶಂಕಿಸಿ ನಿದ್ದೆಯಲ್ಲಿದ್ದಾಗ ಪತ್ನಿಯ ಕೊಲೆಗೈದ ಪತಿ

ವ್ಯಕ್ತಿಯೊಬ್ಬ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.  ಅಥಣಿ ತಾಲೂಕಿನ ಖಾವತ್‌ಖೋಪ್ ಗ್ರಾಮದ ಮೂಲದ ಶೋಭಾ ಪರಗೊಂಡ ಸರ್ವಾಡ್ ಕೊಲೆಯಾದ ಮಹಿಳೆ, ಪರಗೊಂಡ ಸರ್ವಾಡ್ ಕೊಲೆ ಆರೋಪಿ ಪತಿ. ಆರೋಪಿಯನ್ನು

5% ಬಡ್ಡಿಯ ಆಮಿಷ, ಕೋಟ್ಯಂತರ ರೂ.ವಂಚನೆ: ಆದಿತ್ಯರಾಜ್‌ ಕ್ಯಾಪಿಟಲ್ ಮೇಲೆ ಪೊಲೀಸ್‌ ದಾಳಿ

ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ,  ಬೆಳಗಾವಿಯ ಭಾಗ್ಯನಗರದಲ್ಲಿರುವ ‘ಆದಿತ್ಯರಾಜ್‌ ಕ್ಯಾಪಿಟಲ್ ಸಂಸ್ಥೆಯ ಕಚೇರಿಯ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡ  ದಾಳಿ ನಡೆಸಿದೆ. ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ

ಸಾಲ ವಾಪಸ್‌ ಬರದೆ ಸಂಕಷ್ಟ, ನ್ಯಾಯ ಕೇಳಿದ್ರೆ ಪೊಲೀಸರಿಂದ ಬೆದರಿಕೆ: ಡಿವೈಎಸ್‌ಪಿ, ಪಿಎಸ್‌ಐ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಕೊಟ್ಟ ಸಾಲದ ಹಣ ವಾಪಸ್ ಬಾರದೆ ಸಂಕಷ್ಟ ಒಂದೆಡೆಯಾದರೆ, ಅತ್ತ ನ್ಯಾಯ ಕೇಳಲು ಹೋದಾಗ ಪೊಲೀಸರಿಂದಲೇ ಬೆದರಿಕೆ ಎದುರಿಸಿ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ನಲ್ಲಿ ಡಿವೈಎಸ್‌ಪಿ ಹಾಗೂ ಪಿಎಸ್‌ಐ ಹೆಸರನ್ನುಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ  ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.

ವೈದ್ಯ ದಂಪತಿ ಮನೆಯಲ್ಲಿ ಚಿನ್ನ, ಹಣ ಕಳವು: ಕೇರ್‌ಟೇಕರ್‌ ಸೇರಿ ಇಬ್ಬರ ಬಂಧನ

ಬೆಳಗಾವಿ ನಗರದ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರ್‌ ಟೇಕರ್‌ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಬಂಧಿತ ಆರೋಪಿಗಳು. ಪೊಲೀಸರು