Menu

ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಮುಂಬೈನಲ್ಲಿ ಭಾನುವಾರ ನಿಧನರಾದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಸೋಮವಾರ (ಇಂದು) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ  ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಮೂರರವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 92 ವರ್ಷದ ಆಶಾ ಭೋಸ್ಲೆ ಅನಾರೋಗ್ಯದಿಂದಾಗಿ ಏಪ್ರಿಲ್ 11ರ ಶನಿವಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದು, ಅಂಗಾಗ ವೈಫಲ್ಯದಿಂದ ಭಾನುವಾರ ನಿಧನರಾದರು. ಹಾಡುತ್ತಾ ಹಾಡುತ್ತಲೇ ನಾನು ಹೊರಟು ಹೋಗಿಬಿಡಬೇಕು.

ಬೂದಿಯಿಂದ ಎದ್ದೇಳುತ್ತಾ ಜೆಡಿಎಸ್ ?

ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳವು. ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಹಾಗೆ ಕರ್ನಾಟಕದಲ್ಲಿ ಸಿಂಹಗರ್ಜನೆ ಮಾಡುವ ಹಂತದಲ್ಲಿರುತ್ತಿತ್ತು. ಜನತಾದಳ ವಿಭಜನೆ ಆಗಬಾರದಿತ್ತೇನೋ.. !! ಎಚ್ ಡಿ ದೇವೇಗೌಡರು ಈ ದೇಶದ ಪ್ರಧಾನಿ

ಸತ್ತವರ ಹೆಸರಲ್ಲಿ ಸರ್ಕಾರದ 4.27 ಕೋಟಿ ರೂಪಾಯಿ ಅಕ್ರಮ: ಮಧುಗಿರಿ ತಾ.ಪಂ ಕ್ಲರ್ಕ್‌, ಕಾಂಗ್ರೆಸ್‌ ಮುಖಂಡನ ವಿರುದ್ಧ ಎಫ್‌ಐಆರ್‌

ನಿವೃತ್ತರಾಗಿರುವ ಮತ್ತು ಮೃತಪಟ್ಟಿರುವ ಸರ್ಕಾರಿ ನೌಕರರ ಹೆಸರಿನಲ್ಲಿ ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ್ದಾರೆ.  4.27 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇದೆ. ಸೌಮ್ಯಾ ,  ಕಾಂಗ್ರೆಸ್ ಜಿಲ್ಲಾ

ಟ್ರಾಫಿಕ್‌ ಉಲ್ಲಂಘನೆ: ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸುವ ಶಿಕ್ಷೆ ವಿಧಿಸಿದ ಹೈಕೋರ್ಟ್‌

ಬೆಂಗಳೂರಿನಲ್ಲಿ ಅತಿವೇಗವಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹೈಕೋರ್ಟ್‌ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ ಅದೇ ಕಾರಲ್ಲಿ ವಾಪಸ್ ಬರುವಂತೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದೆ. ಮೈಸೂರು ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಕಾರು ಓಡಿಸಿದ ಆರೋಪದಡಿ

ಸಿಬಿಐ ಸೋಗಿನಲ್ಲಿ ಡಿಜಿಟಲ್‌ ಅರೆಸ್ಟ್‌: ಬೆಳಗಾವಿ ವ್ಯಕ್ತಿಗೆ 15 ಕೋಟಿ 45 ಲಕ್ಷ ರೂ. ವಂಚನೆ

ಬೆಳಗಾವಿಯಲ್ಲಿ ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ 45 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉದ್ಯಮಿಗೆ ಫೋನ್ ಮಾಡಿದ ವಂಚಕರು, ತಾವು ಸಿಬಿಐ

ಸಂವಿಧಾನದ ಆಶಯ ಜಾರಿಗೆ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಸ್ವಯಂ ಪ್ರಶ್ನಿಸಿಕೊಳ್ಳಿ: ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಲವ್‌, ಸೆಕ್ಸ್‌, ಮದುವೆ ಹೆಸರಲ್ಲಿ ವಂಚನೆ: ಇಂಜಿನಿಯರ್‌ ವಿರುದ್ಧ ಶಿಕ್ಷಕಿ ದೂರು

ಲವ್‌, ಸೆಕ್ಸ್‌, ಮದುವೆ ಎಂದು ನಂಬಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬವರು ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಅತಿಥಿ ಶಿಕ್ಷಕಿ

ಮದುವೆ ನಿರಾಕರಿಸಿದಾಕೆಗೆ ಹೆಚ್‌ಐವಿ ಪಾಸಿಟಿವ್‌ ಇಂಜೆಕ್ಟ್‌, ಯುವತಿ ಸುಸೈಡ್‌

ಮದುವೆಗೆ ನಿರಾಕರಿಸಿದ್ದ ಯುವತಿಗೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ ಇಂಜೆಕ್ಟ್‌ ಮಾಡಿದ್ದು, ಇದರಿಂದ ಭಯಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್‌ ಮಾಡಿ ಪರಾರಿಯಾಗಿದ್ದ.

ವಂಡರ್‌ಲಾ ಮನರಂಜನೆಗೆ ‘ಗರುಡ ಗ್ಲೈಡ್’ ರೈಡ್ ಸೇರ್ಪಡೆ

ರಾಮನಗರದಲ್ಲಿರುವ  ಮನರಂಜನೆ ತಾಣ ವಂಡರ್‌ಲಾದಲ್ಲಿ ಹೊಸತಾಗಿ ‘ಗರುಡ ಗ್ಲೈಡ್’ ಅತ್ಯಾಧುನಿಕ ರೋಲರ್ ಕೋಸ್ಟರ್ ಸೇರ್ಪಡೆಯಾಗಿದೆ. ಮಹಿಳಾ ಆರ್‌ಸಿಬಿ ತಂಡ ಶ್ರೇಯಾಂಕ ಪಾಟೀಲ್‌ ಹಾಗೂ ಖ್ಯಾತ ಯೂಟ್ಯೂಬರ್ ಡಾ.ಬ್ರೋ ಗಗನ್  ಚಾಲನೆ ನೀಡಿದ್ದಾರೆ. ಯುವಜನರು ಮತ್ತು ಮಕ್ಕಳ ನೆಚ್ಚಿನ ಮನರಂಜನಾ ತಾಣವಾದ ವಂಡರ್‌ಲಾ

ಪ್ರಿಯಕರನೊಂದಿಗೆ ಸೇರಿ ಆರು ವರ್ಷದ ಮಗುವನ್ನು ಕೊಂದ ತಾಯಿ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯು ಪ್ರಿಯಕನ ಜೊತೆ ಸೇರಿ ತನ್ನ ಆರು ವರ್ಷದ ಮಗನನ್ನು ಬಕೆಟ್‌ನಲ್ಲಿದ್ದ ಮುಳುಗಿಸಿ ದೇಹವನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಗ ಸತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ನೆಲಕ್ಕೆ ಅಪ್ಪಳಿಸಿದ್ದಾರೆಂದು ಹೇಳಲಾಗಿದೆ. ಬಾಲಕ