Menu

ವರ್ಕ್ ಫ್ರಂ ಹೋಂ ಆಮಿಷವೊಡ್ಡಿ ಕೋಟ್ಯಾಂತರ ರೂ. ವಂಚಿಸಿದ ದಂಪತಿ ಅರೆಸ್ಟ್‌

ವರ್ಕ್ ಫ್ರಂ ಹೋಂ ಉದ್ಯೋಗದ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ದಂಪತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಿರಣ್‌ ಮತ್ತು ಆತನ ಪತ್ನಿ ಆರತಿ ಬಂಧಿತ ವಂಚಕರು. ಇವರು ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಎಂಬ ನಕಲಿ ಸಂಸ್ಥೆ ಸ್ಥಾಪಿಸಿ ಇನ್ಸ್ಟಾ ಗ್ರಾಂ ರೀಲ್ಸ್‌ ಮೂಲಕ ಜನರಿಗೆ ಉದ್ಯೋಗದ ಹೆಸರಿನಲ್ಲಿ ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಯಾವುದೇ ಅನುಬವ ಇಲ್ಲದೆಯೂ ಮನೆಯಲ್ಲೇ ಕುಳಿತು ಉತ್ತಮ ಆದಾಯ ಗಳಿಸಬಹುದು

ರೀಲ್ಸ್‌ ಹುಚ್ಚಿನಲ್ಲಿದ್ದ ಪತ್ನಿ ಊಟ ಹಾಕುತ್ತಿಲ್ಲವೆಂದು ಕೊಲೆಗೈದ ಪತಿ ಅರೆಸ್ಟ್‌

ಬೆಂಗಳೂರಿನ ಕುಂಬಳಗೋಡು ಬಳಿ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಧೀರಜ್ ಕುಮಾರ್ (24)ನನ್ನು ಬಿಹಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂಬಳಗೋಡು ಗೇರುಪಾಳ್ಯದಲ್ಲಿ ಜುಲೈ 27ರಂದು ಪತ್ನಿ ರೀಮಾ ಕುಮಾರಿಯನ್ನು ಕೊಲೆ ಮಾಡಿ

ಗೋಕಾಕ್‌ನಲ್ಲಿ ಬೈಕ್‌ಗೆ ಬಸ್‌ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದು ತಂದೆ, ಮಗಳು ಸೇರಿ ಸ್ಥಳದಲ್ಲೇ ಮೂವರು ಅಸು ನೀಗಿದ್ದಾರೆ.  ಸೈಫ್ ಮುಲ್ಲಾ(29), ಪುತ್ರಿ ಸಿಜಾ ಮುಲ್ಲಾ‌(4) ಮತ್ತು ಗೆಳೆಯ ಇಮ್ತಿಯಾಜ್ ಬಡಗಾಂವ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಗು ಸಿಹಾನ್

20 ಲಕ್ಷ ರೂ. ವಾಪಸ್‌ ಆಮಿಷ: ವ್ಯಕ್ತಿಗೆ 12 ಲಕ್ಷ ರೂ. ನಾಮ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ವ್ಯಕ್ತಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ೧೨ ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. 500 ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಮೊತ್ತದ 100 ಮುಖಬೆಲೆಯ ನೋಟಗಳನ್ನು ವಾಪಸ್‌ ನೀಡುವುದಾಗಿ ವಂಚಕರು ಸಿವಿಲ್ ಕಾಂಟ್ರಾಕ್ಟರ್‌

ಬ್ಯಾಂಕ್‌ ಸಿಬ್ಬಂದಿ ವಂಚನೆ: 1.5 ಕೋಟಿ ರೂ. ಕಳೆದುಕೊಂಡ ಉದ್ಯಮಿ

ಬೆಂಗಳೂರಿನ ಪೀಣ್ಯದಲ್ಲಿರುವ ಬ್ಯಾಂಕ್‌ ಶಾಖೆಯ ಉದ್ಯೋಗಿ ಎಸಗಿದ ವಂಚನೆಯಲ್ಲಿ ಸಿಲುಕಿಕೊಂಡ ಉದ್ಯಮಿಯೊಬ್ಬರು 1.5 ಕೋಟಿ ರೂ. ಕಳೆದುಕೊಂಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್‌ನಲ್ಲಿ ಅಪ್ರೈಸರ್‌ ಆಗಿ ಕೆಲಸ ಮಾಡಿಕೊಂಡಿದ್ದ ನಾಗೇಶ್‌ ವಂಚನೆಯ ಆರೋಪಿ. ಆತ ಸ್ನೇಹಿತರ ಮೂಲಕ ನಕಲಿ

ಮೈಸೂರು ಮಹಿಳೆಯ ಮಂತ್ರದಂಡಕ್ಕೆ ಮರುಳಾಗಿ 31 ಲಕ್ಷ ರೂ. ಕಳಕೊಂಡ ಉದ್ಯಮಿ

ಪತ್ರಿಕೆಯೊಂದರಲ್ಲಿ “ನನ್ನ ಬಳಿ ಮಂತ್ರದಂಡ ಇದೆ, ನಿಮ್ಮನ್ನು ಕೋಟ್ಯಾಧಿಪತಿ ಮಾಡುತ್ತೇನೆ” ಎಂದು ಮೈಸೂರಿನ ಮಹಿಳೆ ನೀಡಿದ್ದ ಜಾಹೀರಾತು ನಂಬಿ ಆಸೆಗೆ ಬಿದ್ದ ಮಂಗಳೂರಿನ ಸುಶಿಕ್ಷಿತ ಉದ್ಯಮಿ 31 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮಂಗಳೂರಿನ ಕೃಷಿಕ ಹಾಗೂ ಸೆರಾಮಿಕ್ಸ್ ಕಂಪನಿ ಉದ್ಯೋಗಿ ಸೂರಜ್

ಬೆಂಗಳೂರಿನಲ್ಲಿ ಒಂದೇ ಮರಕ್ಕೆ, ಒಂದೇ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇಬ್ಬರು ಯುವತಿಯರು

ಬೆಂಗಳೂರಿನ ಜಕ್ಕೂರು ಕೃಷ್ಣ ರೆಸ್ಟೋರೆಂಟ್‌ ಬಳಿಯ ಮರವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನೇಪಾಳದ ಯುವತಿಯರಿಬ್ಬರು ಪತ್ತೆಯಾಗಿದ್ದಾರೆ.  ನೇಪಾಳ ಮೂಲದ ಸಿರ್ಜನಾ (22), ರಿತಾ (23) ಶವವಾಗಿ ಪತ್ತೆಯಾಗಿರುವ ಯುವತಿಯರು. ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಬಂದಾಗ ಈ ದುರಂತ ಬೆಳಕಿಗೆ ಬಂದಿದೆ. ಯಲಹಂಕ

ರೇಣುಕಾಸ್ವಾಮಿ ಕೊಲೆ ಕೇಸ್‌: ಮಾಫಿ ಸಾಕ್ಷಿಯಾಗಲು ಪ್ರದೋಶ್‌ ಅರ್ಜಿ, ದರ್ಶನ್‌ಗೆ ಸಂಕಷ್ಟ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ಎ-14 ಪ್ರದೋಶ್‌, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.  ಈ ಬೆಳವಣಿಗೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ಗೆ ದೊಡ್ಡ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ನಾನು

ಮಾಜಿ ಪ್ರಿಯಕರನ ಕಾಟ: ಮದುವೆ ಸಿದ್ಧತೆಯಲ್ಲಿದ್ದ ಯುವತಿ ಸುಸೈಡ್‌

ಮದುವೆ ಸಿದ್ಧತೆಯಲ್ಲಿದ್ದ ಯುವತಿ ಮಾಜಿ ಪ್ರಿಯಕರನ ಕಿರುಕುಳ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೌಲ್‌ ಬಜಾರ್‌ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಫಿರ್ದೋಸ್‌ ಕೌಲ್ ಬಜಾರ್ ನಿವಾಸಿ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನ ವರ್ತನೆಯಿಂದ ಬೇಸತ್ತು ಬಳಿಕ

ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ಆರೋಪ: 25 ಮಾರ್ಕ್ಸ್‌ಗೆ ಒಂದೂವರೆ ಕೋಟಿ ರೂ. ಬೇಡಿಕೆ

ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದಾಗಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ, 25 ಮಾರ್ಕ್ಸ್‌ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಕೆಎಎಸ್ 384 ಹುದ್ದೆಗೆ ಹಣ ನೀಡಿರುವ ಅಭ್ಯರ್ಥಿ ಹೆಸರು ಸಮೇತ ಕಾಂತಕುಮಾರ್ ಎಂಬವರು ದೂರು ದಾಖಲಿಸಿದ್ದಾರೆ.