Menu

ಕೇರಳ ಲಾಟರಿ ಹೆಸರಿನಲ್ಲಿ ಇಬ್ಬರಿಗೆ 13.71 ಲಕ್ಷ ರೂ. ವಂಚನೆ

Cyber fraud

ಕೇರಳ ಲಾಟರಿ ಹೊಡೆದಿದೆ ಎಂದು ನಂಬಿಸಿದ ವಂಚಕರು ಬೆಂಗಳೂರಿನ ವಲಗೇರಹಳ್ಳಿ ಮತ್ತು ಮಾರುತಿ ನಗರದ ಇಬ್ಬರಿಗೆ 13.71 ಲಕ್ಷ ರೂ. ನಾಮ ಹಾಕಿದ್ದಾರೆ.

ವಲಗೇರಹಳ್ಳಿಯ 60 ವರ್ಷದ ಎನ್‌ಜಿಒ ಉದ್ಯೋಗಿ 7.45 ಲಕ್ಷ ರೂಪಾಯಿ ಮತ್ತು ಮಾರುತಿ ನಗರದ 52 ವರ್ಷದ ರೈತ 6.26 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವೆಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೇರಳ ಸ್ಟೇಟ್ ಲಾಟರಿ ಪ್ರತಿನಿಧಿಗಳೆಂದು ಹೇಳಿಕೊಂಡ ಸೈಬರ್ ವಂಚಕರು, ಇಬ್ಬರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ ನಿಮಗೆ 8 ಲಕ್ಷ ರೂಪಾಯಿ ಲಾಟರಿ ಜ್ಯಾಕ್‌ಪಾಟ್ ಬಂದಿದೆ ಎಂದು ನಂಬಿಸಿದ್ದಾರೆ. ವಂಚಕರು thekeralajackpotresult.online ಎಂಬ ನಕಲಿ ವೆಬ್‌ಸೈಟ್ ಲಿಂಕ್ ಕಳುಹಿಸಿದ್ದರು. ಸಂತ್ರಸ್ತರು ಲಿಂಕ್ ತೆರೆದಾಗ ಅವರ ಹೆಸರು ಮತ್ತು ಲಾಟರಿ ಗೆದ್ದ ಮೊತ್ತವನ್ನು ತೋರಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಿನ ನಕಲಿ ಪತ್ರಗಳನ್ನೂ ಕಳುಹಿಸಿದ್ದರು.

ವಂಚಕರು ಬಹುಮಾನ ಪಡೆಯಲು ಪ್ರೊಸೆಸಿಂಗ್ ಶುಲ್ಕ, ಟ್ಯಾಕ್ಸ್, ಖಾತೆ ವಿವರ ಎಂದು ಹೇಳಿ ಹಣ ವಸೂಲಿ ಮಾಡಿದ್ದಾರೆ. ಹಣ ಪಾವತಿಯ ನಂತರ ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ.   ಸೈಬರ್ ಕ್ರೈಮ್ ಪೊಲೀಸರು ಆರೋಪಿಗಳ ಫೋನ್ ಸಂಖ್ಯೆ, ಬ್ಯಾಂಕ್ ಖಾತೆಗಳು ಮತ್ತು ಐಪಿ ವಿಳಾಸಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಈ ವಂಚನೆಯ ಹಿಂದೆ ಗ್ಯಾಂಗ್ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *