ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್‌ನಿಲ್ದಾಣದಲ್ಲಿ ತಡರಾತ್ರಿ ಮಂಗಳಮುಖಿಯೊಬ್ಬರನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಾಮಮೂರ್ತಿ ನಗರದ ಗೌತಮ್ (29) ಮಂಗಳಮುಖಿಯನ್ನು ೨೦೦ ರೂಪಾಯಿಗಾಗಿ ಕೊಲೆ ಮಾಡಿದ ಕಿರಾತಕ ಎಂದು ಗುರುತಿಸಲಾಗಿದೆ.
ರಾತ್ರಿ ದರೋಡೆ ಮಾಡುವುದನ್ನೇ ಆತ ಉದ್ಯೋಗವನ್ನಾಗಿಸಿಕೊಂಡ ಆರೋಪಿ ರಾತ್ರಿ ಬೈಕ್‌ನಲ್ಲಿ ಮೆಜೆಸ್ಟಿಕ್ ಬಳಿ ಬಂದಿದ್ದ, ಆಗ ಮಂಗಳಮುಖಿ ಎದುರಾಗಿದ್ದು, ೨೦೦ ರೂಪಾಯಿ ಕೇಳಿದ್ದಾನೆ. ಕೊಡುವುದಿಲ್ಲ ಎಂದಿದ್ದಕ್ಕೆ ತನ್ನಲ್ಲಿದ್ದ ಮಂಗಳಮುಖಿ ದೇವಿಯ ತಲೆಗೆ ಡ್ರ್ಯಾಗರ್‌ನಿಂದ ಹೊಡೆದಿದ್ದಾನೆ. ಮಂಗಳಮುಖಿಯ ಬ್ಯಾಗ್ ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.
ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಬಂದು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರ, ದರೋಡೆಕೋರ ಗೌತಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.


