Menu

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಏರಿಕೆ

ಅಮೆರಿಕ ಮತ್ತು ಇರಾನ್‌ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿರುವ ಮಧ್ಯೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಏರಿಕೆ ಕಂಡಿದೆ.

ಬ್ರೆಂಟ್ ಕಚ್ಚಾ ತೈಲ ಬೆಲೆಯು 1.2% ಕ್ಕೂ ಹೆಚ್ಚು ಹೆಚ್ಚಳಗೊಂಡು ಪ್ರತಿ ಬ್ಯಾರಲ್‌ ಬೆಲೆ 92.09 ಡಾಲರ್‌ ತಲುಪಿದ್ದು, ಜೂನ್ ತಿಂಗಳ ಬಳಿಕ ದಾಖಲಾದ ಅತಿ ಹೆಚ್ಚಿನ ಬೆಲೆ. ಅಮೆರಿಕದ ಕಚ್ಚಾ ತೈಲ ಡಬ್ಲೂಟಿಐ ದರ 1.1%ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ 85.23 ಡಾಲರ್‌ ಆಗಿದೆ.

ಜಾಗತಿಕವಾಗಿ ಶೇ ಇಪ್ಪತ್ತರಷ್ಟು ತೈಲ ಸಾಗಣೆಯಾಗುವ ಹರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ತೈಲ ಟ್ಯಾಂಕರ್‌ಗಳ ಸಂಚಾರವನ್ನು ನಿರ್ಬಂಧಿಸಿದ್ದು, ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಅಮೆರಿಕದ ಸೇನಾ ನೆಲೆಗಳು ಹಾಗೂ ರೇಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸರಣಿ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕ ಕೂಡ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಭೀತಿ ಉಂಟಾಗಿದೆ.
ಕಚ್ಚಾ ತೈಲ ಬೆಲೆ ಏರಿಕೆತಿಂದ ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಹಣದುಬ್ಬರ ಏರಿಕೆಯಾಗುವ ಆತಂಕವಿದೆ. ಇಂಧನ ಬೆಲೆ ಗಿ 90 ಡಾಲರ್‌ ದಾಟಿ ಮುನ್ನುಗುತ್ತಿರುವುದು ಭಾರತ ಸೇರಿದಂತೆ ಪ್ರಮುಖ ಆಮದುದಾರ ದೇಶಗಳಿಗೆ ಆರ್ಥಿಕ ಹೊರೆ ಹೆಚ್ಚಲಿದೆ.

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಸುಂಕ ಹೆಚ್ಚಳದ ಹೊಸ ಯೋಜನೆ ಪ್ರಕಟಿಸಿದ್ದಾರೆ. 2028ರ ತನಕ ಯಾವುದೇ ಸುಂಕ ಇರುವುದಿಲ್ಲ. ಬಳಿಕ ಒಂದು ವರ್ಷ 100% ಮತ್ತು ನಂತರ 200% ಸುಂಕ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಂಪೆನಿಗಳು ಅಮೆರಿಕದಲ್ಲೇ ಔಷಧ ಉತ್ಪಾದನೆ ಘಟಕಗಳನ್ನು ಸ್ಥಾಪಿಸಲು ಈ ಕ್ರಮ ನೆರವಾಗಲಿದೆ. ಔಷಧ ಆಮದು ಬದಲು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *