ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಭಾರತೀಯ ಅರ್ಬನ್ ಇಂದು ಉತ್ತರ ಬೆಂಗಳೂರಿನಲ್ಲಿ ತನ್ನ ನೂತನ ಜೀವನಶೈಲಿ ಆಧಾರಿತ ವಸತಿ ಯೋಜನೆಯಾದ ನಿಕೂ ಹೋಮ್ಸ್ 8 ಉದ್ಘಾಟಿಸಿದೆ.
ಪರಿಪೂರ್ಣ ವಿನ್ಯಾಸ, ಉತ್ತಮ ಸಮುದಾಯಗಳು ಹಾಗೂ ಜನರ ಯೋಗಕ್ಷೇಮ, ಪರಸ್ಪರ ಬಾಂಧವ್ಯ ಮತ್ತು ಉನ್ನತ ಜೀವನಮಟ್ಟವನ್ನು ಉತ್ತೇಜಿಸುವ ಸುಂದರ ಉದ್ಯಾನವನಗಳು ಮತ್ತು ಹಸಿರು ಜಾಗಗಳ ಮೂಲಕ ನಗರ ಜೀವನವನ್ನು ಮರುರೂಪಿಸುವ ಭಾರತೀಯ ಅರ್ಬನ್ ನ ಬದ್ಧತೆಯನ್ನು ನಿಕೂ ಹೋಮ್ಸ್ 8 ಪ್ರತಿಬಿಂಬಿಸುತ್ತದೆ. ಈ ಪರಿಸರವು ಕೇವಲ ಒಂದು ವಸತಿ ಸಮುಚ್ಚಯ ಅನಿಸದೆ ಮಾನವ ಯೋಗಕ್ಷೇಮ, ಒಗ್ಗಟ್ಟು ಮತ್ತು ಶ್ರೀಮಂತ ಜೀವನಮಟ್ಟಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ಜೀವಂತ ಮತ್ತು ಉಸಿರಾಡುವ ಪರಿಸರ ವ್ಯವಸ್ಥೆಯಂತೆ ಮೂಡಿಬಂದಿದೆ.
ನಿಕೂ ಹೋಮ್ಸ್ 8 ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ ಭಾರತೀಯ ಅರ್ಬನ್ ಸಂಸ್ಥೆಯ ಸಿಗ್ನೇಚರ್ ಶೈಲಿಯ ಗಾರ್ಡನ್ ಲಿವಿಂಗ್ ತತ್ವ. ಮನೆಗಳು ಉದ್ಯಾನವನದ ನಡುವೆ ಮೂಡಿಬರಬೇಕೇ ವಿನಃ, ಉದ್ಯಾನವನಗಳು ಮನೆಗಳ ನಡುವೆ ಅಲ್ಲ ಎಂಬ ಬಲವಾದ ನಂಬಿಕೆಯೊಂದಿಗೆ ಈ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಪ್ರಕೃತಿಯನ್ನು ದೈನಂದಿನ ಜೀವನದ ಕೇಂದ್ರಬಿಂದುವಾಗಿಸುವ ಮೂಲಕ, ನಿವಾಸಿಗಳು ಪ್ರತಿದಿನ ಹಕ್ಕಿಗಳ ಕಲರವ, ಆಯಾ ಕಾಲಕ್ಕೆ ಅರಳುವ ಹೂವುಗಳು ಮತ್ತು ಜೀವವೈವಿಧ್ಯತೆಯನ್ನು ಹತ್ತಿರದಿಂದ ಅನುಭವಿಸಲು ಈ ಯೋಜನೆ ಅನುವು ಮಾಡಿಕೊಡುತ್ತದೆ.
ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಥಣಿಸಂದ್ರ–ಉತ್ತರ ಬೆಂಗಳೂರು ಕಾರಿಡಾರ್ ನಲ್ಲಿ ಈ ಯೋಜನೆ ತಲೆಎತ್ತಿದೆ. 11 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ ನಿಕೂ ಹೋಮ್ಸ್ 8, ಎರಡು ಹಂತಗಳಲ್ಲಿ ಒಟ್ಟು ಆರು ಗೋಪುರಗಳನ್ನು ಹೊಂದಿರಲಿದ್ದು, ಇದರಲ್ಲಿ 1,000ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಯಿಂದ ₹2,000 ಕೋಟಿಗೂ ಅಧಿಕ ವಹಿವಾಟು ಸಾಮರ್ಥ್ಯ ನಿರೀಕ್ಷಿಸಲಾಗಿದೆ. ಸ್ಟುಡಿಯೋ ಅಪಾರ್ಟ್ ಮೆಂಟ್ ಗಳಿಂದ ಹಿಡಿದು 4 ಬೆಡ್ ರೂಮ್ ಮನೆಗಳು, ಲಾಫ್ಟ್ ಗಳು ಮತ್ತು ಐಷಾರಾಮಿ ವಿಲ್ಲಾಗಳವರೆಗೆ ಬೆಂಗಳೂರಿನಲ್ಲೇ ಅತ್ಯಂತ ವ್ಯಾಪಕ ಶ್ರೇಣಿಯ ವಸತಿ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಮನೆಗಳ ಬೆಲೆ 68 ಲಕ್ಷದಿಂದ ₹6 ಕೋಟಿ ರೂ.ವರೆಗೆ ಇರಲಿದೆ.
ಯೋಜನೆಯ ಬಿಡುಗಡೆ ಕುರಿತು ಮಾತನಾಡಿದ ಭಾರತೀಯ ಅರ್ಬನ್ ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಪ್ರಗತಿ ಅಧಿಕಾರಿ ರಾಜನ್ ಅಗರ್ವಾಲ್, ನಿಕೂ ಹೋಮ್ಸ್ 8 ಮಾರುಕಟ್ಟೆಗೆ ಪರಿಚಯಿಸಲು ಅತ್ಯಂತ ಸಂತೋಷವಾಗುತ್ತಿದೆ. ನಮ್ಮ ವಸತಿ ಉದ್ಯಮದ ಪ್ರಗತಿಯ ಕಾರ್ಯತಂತ್ರದ ಭಾಗವಾಗಿ, ಮುಂದಿನ ವರ್ಷದಲ್ಲಿ 5 ರಿಂದ 6 ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. ಇದರೊಂದಿಗೆ ವಿವಿಧ ಸ್ಥಳಗಳಲ್ಲಿ ₹9,000 ಕೋಟಿಗೂ ಅಧಿಕ ಮೌಲ್ಯದ ಹೊಸ ಇನ್ವೆಂಟರಿಯನ್ನು ಸೇರ್ಪಡೆಗೊಳಿಸಲಾಗುವುದು. ಭಾರತೀಯ ಅರ್ಬನ್ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ವೇಗವು ಮುಂಬರುವ ಕೆಲವು ವರ್ಷಗಳಲ್ಲಿ ನಮ್ಮನ್ನು ಬೆಂಗಳೂರಿನ ಮೊದಲ ಮೂರು ಪ್ರಮುಖ ಡೆವಲಪರ್‌ಗಳ ಸಾಲಿನಲ್ಲಿ ನಿಲ್ಲಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿ ಅತ್ಯಾಧುನಿಕ ಬ್ಲಾಕ್ ಸ್ವಾನ್ ಕ್ಲಬ್ ತಲೆಎತ್ತಲಿದೆ. 40,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಲೈಫ್ ಸ್ಟೈಲ್ ತಾಣವು, ಸಮುದಾಯದ ಸಾಮಾಜಿಕ, ಮನರಂಜನಾ ಮತ್ತು ಆರೋಗ್ಯದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಒಂದು ಕ್ಲಬ್ ಹೌಸ್ ಎನ್ನುವುದಕ್ಕಿಂತ ಮಿಗಿಲಾಗಿ, ನಿವಾಸಿಗಳು ಆರೋಗ್ಯ, ಸೃಜನಶೀಲತೆ, ಮನರಂಜನೆ ಮತ್ತು ಒಟ್ಟಾರೆ ಅನುಭವಗಳನ್ನು ಹಂಚಿಕೊಳ್ಳುವ ರೋಮಾಂಚಕ ಸ್ಥಳವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಆರ್ಗ್ಯಾನಿಕ್ ಅಡಿಗೆಮನೆಗಳು, ಕಮ್ಯುನಿಟಿ ಗಾರ್ಡನ್ ಗಳು, ಗ್ರೀನ್ ಬೆಲ್ಟ್, ಕೆಫೆಗಳು ಹಾಗೂ ಆರ್ಟ್ ಸ್ಟುಡಿಯೋಗಳಂತಹ ವಿವಿಧ ಸೌಲಭ್ಯಗಳನ್ನು ಒಂದೆಡೆ ಕಲ್ಪಿಸುವ ಮೂಲಕ, ಈ ಕ್ಲಬ್ ಇಡೀ ನೆರೆಹೊರೆಯ ಪ್ರಮುಖ ಆಕರ್ಷಣಾ ಕೇಂದ್ರವಾಗಲಿದೆ.
ನಿಕೂ ಹೋಮ್ಸ್ 8 ಯೋಜನೆಯು ಬೆಂಗಳೂರಿನ ಅತ್ಯಂತ ಭರವಸೆಯ ಪ್ರಗತಿಯ ಕಾರಿಡಾರ್ ಗಳಲ್ಲಿ ಒಂದಾದ ಆಯಕಟ್ಟಿನ ಸ್ಥಳದಲ್ಲಿದ್ದು, ನಗರದ ಪ್ರಮುಖ ತಾಣಗಳಿಗೆ ಸುಲಭ ಸಂಪರ್ಕವನ್ನು ಒದಗಿಸುತ್ತದೆ. ಭಾರತೀಯ ಸಿಟಿ ಮತ್ತು ಪ್ರಮುಖ ಟೆಕ್ ಪಾರ್ಕ್ ಗಳಿಂದ 7 ನಿಮಿಷಗಳ ಪ್ರಯಾಣ. ನಾಗವಾರ ಮೆಟ್ರೋ ನಿಲ್ದಾಣದಿಂದ 15 ನಿಮಿಷಗಳ ಅಂತರ. ಯಲಹಂಕ ಮೆಟ್ರೋ ನಿಲ್ದಾಣದಿಂದ 10 ನಿಮಿಷಗಳ ದೂರ. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 25 ನಿಮಿಷ ಪ್ರಯಾಣ.
ನಿಕೂ ಹೋಮ್ಸ್ 8ರ ನಿವಾಸಿಗಳು ಭಾರತೀಯ ಅರ್ಬನ್ ನ ಸಮೃದ್ಧವಾದ ಪರಿಸರ ವ್ಯವಸ್ಥೆಯನ್ನು ಸುಲಭವಾಗಿ ಪಡೆಯಬಹುದು. ಭಾರತೀಯ ಸಿಟಿ-ಸಿಟಿ ಆಫ್ ಜಾಯ್, ದಿ ಲೀಲಾ ಹೋಟೆಲ್ & ರೆಸಿಡೆನ್ಸಸ್, ಭಾರತೀಯ ಮಾಲ್ ಆಫ್ ಬೆಂಗಳೂರು, ಚಮನ್ ಭಾರತೀಯ ಶಾಲೆ, ಬಿಸಿಐಟಿ, ಸೆಂಟ್ರಲ್ ಪಾರ್ಕ್ ಮತ್ತು ಈಗಾಗಲೇ ನೆಲೆನಿಂತಿರುವ ಇತರ ನಿಕೂ ಹೋಮ್ಸ್ ಸಮುದಾಯಗಳು ಸೇರಿವೆ. ಇವೆಲ್ಲಸೇರಿ ವಸತಿ, ಶಿಕ್ಷಣ, ಉದ್ಯೋಗ ಮತ್ತು ಬಿಡುವಿನ ಸಮಯ ಕಳೆಯಲು ಹೇಳಿಮಾಡಿಸಿದಂತಹ ಒಂದು ಅತ್ಯುತ್ತಮ ನಗರ ಪರಿಸರವನ್ನು ಸೃಷ್ಟಿಸುತ್ತವೆ.
ನಿಕೂ ಹೋಮ್ಸ್ 8 ಮೂಲಕ ಭಾರತೀಯ ಅರ್ಬನ್ ಸಂಸ್ಥೆಯು ವಿನ್ಯಾಸ-ಚಿಂತನೆಯ ನೆರವಿನಿಂದ ನಗರ ಜೀವನವನ್ನು ಮರುರೂಪಿಸುವುದನ್ನು ಮುಂದುವರಿಸಿದೆ. ಇದು ವಾಸಿಸುವ, ಕೆಲಸ ಮಾಡುವ ಮತ್ತು ಮನರಂಜನೆಯ ಸ್ಥಳಗಳಷ್ಟೇ ಆಗಿರದೆ, ಹೆಚ್ಚು ಸಂತೋಷದಾಯಕ ಜೀವನವನ್ನು ಒದಗಿಸುವ ಹಾಗೂ ಸಮಗ್ರ ಸಮುದಾಯಗಳನ್ನು ರೂಪಿಸುವ ತಾಣವಾಗಲಿದೆ.
ಭಾರತೀಯ ಗ್ರೂಪ್ ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ವೈವಿಧ್ಯಮಯ ಜಾಗತಿಕ ಸಂಸ್ಥೆಯಾಗಿದೆ. ಮಿಲನ್, ಲಂಡನ್ ಮತ್ತು ಚೀನಾದಲ್ಲಿ ಜಾಗತಿಕ ಕಚೇರಿಗಳನ್ನು ಹೊಂದಿರುವ ಈ ಸಮೂಹವು, ವಿನ್ಯಾಸ-ಚಿಂತನೆಯ ತತ್ವದ ಆಧಾರದ ಮೇಲೆ ರಿಯಲ್ ಎಸ್ಟೇಟ್, ನಗರ ಅಭಿವೃದ್ಧಿ, ಫ್ಯಾಷನ್, ಆತಿಥ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ರಿಯಲ್ ಎಸ್ಟೇಟ್ ವಿಭಾಗವಾದ ಭಾರತೀಯ ಅರ್ಬನ್ ಮೂಲಕ ಈ ಸಮೂಹವು ಸಮಗ್ರ ಟೌನ್ ಶಿಪ್ ಗಳು ಮತ್ತು ವಸತಿ ಸಮುದಾಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಪ್ರಮುಖ ವಸತಿ ಬ್ರ್ಯಾಂಡ್ ಆದ ನಿಕೂ ಹೋಮ್ಸ್, ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೋಮ್ ಬ್ರ್ಯಾಂಡ್ ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಲಾಭದೊಂದಿಗೆ ಸಮಾಜದ ಮೇಲಿನ ಸಕಾರಾತ್ಮಕ ಪ್ರಭಾವ, ಹೊಸತನ ಮತ್ತು ವಿನ್ಯಾಸ-ಚಿಂತನೆಯು ಭಾರತೀಯ ಗ್ರೂಪ್ ನ ನಾಯಕತ್ವದ ತತ್ವಗಳನ್ನು ಪ್ರತಿಬಿಂಬಿಸುತ್ತವೆ.


