Menu

ಮಾಲೂರಿನಲ್ಲಿ ಪ್ರೀತಿಸಿ ಮದುವೆಯಾದ ಪತ್ನಿಯ ಕೊಂದಾತನ ಬಂಧನ

ಎರಡು ವರ್ಷದ ಪ್ರೀತಿ ಬಳಿಕ ಮದುವೆಯಾಗಿದ್ದ ವ್ಯಕ್ತಿ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಪ್ರಕರಣ ಮಾಲೂರು ತಾಲೂಕಿನ ಮಿಂಡಹಳ್ಳಿ ಕೆರೆ ಬಳಿ ನಡೆದಿದೆ. ಚಿಂತಾಮಣಿಯ ಯೋಗಿನಿ (21) ಕೊಲೆಯಾದ ಮಹಿಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿಯ ಗಣೇಶ್ ಕೊಲೆ ಆರೋಪಿ. ಎಂಬಾತನಿಂದ ಕೊಲೆಯಾಗಿದೆ.

ಯೋಗಿನಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಹೆಂಡತಿ ಮೇಲೆ ಅನುಮಾನಪಟ್ಟು ಗಣೇಶ್ ಗಲಾಟೆ ಮಾಡಿಕೊಂಡಿದ್ದ. ಇದೇ ಹಿನ್ನೆಲೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕ್ಷುಲ್ಲಕ ಜಗಳದಲ್ಲಿ ಸ್ನೇಹಿತನ ಇರಿದು ಕೊಂದ

ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರಿಬ್ಬರ ನಡುವೆ ಜಗಳ ನಡೆದಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ನಿಮ್ಹಾನ್ಸ್ ಲೇಔಟ್‌ನಲ್ಲಿ ನಡೆದಿದೆ. ಸೈಯದ್ ಕೊಲೆ ಆರೋಪಿ. ವಾಸಿಂ ಕೊಲೆಯಾದವ. ಇವರಿಬ್ಬರು ಸ್ನೇಹಿತರು, ಮಾತಿಗೆ ಮಾತು ಬೆಳೆದು ಹೊಡೆದಾಡಿ ಸೈಯದ್ ಚಾಕು ಇರಿದಿದ್ದರಿಂದ ವಾಸಿಂ ಮೃತಪಟ್ಟಿದ್ದಾನೆ.

ವಾಸಿಂ ಸ್ನೇಹಿತನಾದ ಸೈಯದ್‌ನ ತಾಯಿ ಹಾಗೂ ಅಕ್ಕನ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸೈಯದ್ ವಾಸಿಂ ಮೇಲೆ ದಾಳಿ ಮಾಡಿದ್ದು, ವಾಸಿಂ ಕೂಡ ಸೈಯದ್ ಮೇಲೆ ಹಲ್ಲೆ ಮಾಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗಿ ಸೈಯದ್ ಚಾಕುವಿನಿಂದ ಮನಬಂದಂತೆ ವಾಸಿಂಗೆ ಇರಿದಿದ್ದಾನೆ. ಗಂಭೀರ ಗಾಯಗೊಂಡ ವಾಸಿಂನನ್ನು ಸೈಯದ್ ಆಸ್ಪತ್ರೆಗೆ ಕರೆದೊಯ್ಯದಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ವಾಸಿಂ ಮೃತಪಟ್ಟಿದ್ದಾನೆ.

Related Posts

Leave a Reply

Your email address will not be published. Required fields are marked *