Featured
ದಾವಣಗೆರೆ ಉಪ ಚುನಾವಣೆ: ಕೈ ಅಭ್ಯರ್ಥಿ ಉಮೇಶ್ ಮೇಟಿ ಪರ ಜನ ಬೆಂಬಲವೆಂದ ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ಪರವಾಗಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು. ಉಪಚುನಾವಣೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಾತಾವರಣ ಪೂರಕವಾಗಿದೆ. ದಿವಂಗತ ಹೆಚ್.ವೈ.ಮೇಟಿಯವರು ಬಾಗಲಕೋಟೆಯ ಅಭಿವೃದ್ಧಿಗೆ ಶ್ರಮವಹಿಸಿದ್ದರು. ಮೇಟಿಯವರು ಎಲ್ಲ ವರ್ಗದವರ ಏಳಿಗೆಗಾಗಿ ಸೇವೆ ಸಲ್ಲಿಸಿದ ಅಜಾತಶತ್ರುವಾಗಿದ್ದರು. ಸರಳ, ಸಜ್ಜನ ಮೇಟಿಯವರ
ಅತ್ತಿಗೆ ಜತೆ ಅಕ್ರಮ ಸಂಬಂಧ ಶಂಕೆ: ತಮ್ಮನ ಕೊಲೆಗೈದ ಅಣ್ಣ
ತುಮಕೂರು ನಗರದ ಬನಶಂಕರಿಯಲ್ಲಿ ಅತ್ತಿಗೆ ಜತೆ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ತಮ್ಮ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಸೋದರರ ಮಧ್ಯೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೇಂದ್ರದಿಂದ ಸೌದೆ ಒಲೆ ಯೋಜನೆ: ಡಿಸಿಎಂ ವಾಗ್ದಾಳಿ
“ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ? ಎಂದು ಬಿಜೆಪಿ ನಾಯಕರನ್ನು ಕೇಳಬಯಸುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ
ಕುಟುಂಬ ಕಲಹ: ಬೆಂಗಳೂರಿನಲ್ಲಿ ಟೆಕ್ಕಿ ದಂಪತಿ ಸುಸೈಡ್
ಕೌಟುಂಬಿಕ ಕಲಹದಿಂದ ಬೇಸತ್ತು ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನು ಚಂದ್ರ ರೆಡ್ಡಿ ಹಾಗೂ ಸಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೊದಲಿಗೆ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಪತ್ನಿ ಅಪಾರ್ಟ್‌ಮೆಂಟ್‌ನ
ಬಿಹಾರ ಶೀತ್ಲಾ ಮಾತಾ ಮಂದಿರದಲ್ಲಿ ಕಾಲ್ತುಳಿತಕ್ಕೆ ಎಂಟು ಮಂದಿ ಬಲಿ
ಬಿಹಾರದ ನಳಂದ ಶೀತ್ಲಾ ಮಾತಾ ಮಂದಿರದಲ್ಲಿ ಕಾಲ್ತುಳಿತ ಸಂಭವಿಸಿ ಎಂಟು ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ಮಹಿಳೆಯರು. ನಳಂದ ಬಿಹಾರ ಶರೀಫ್‌ನಿಂದ 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತ್ಲಾಷ್ಟಮಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಚೈತ್ರ ಮಾಸದ
ಇರಾನ್-ಇಸ್ರೇಲ್ ಕದನ ವಿರಾಮ: ಮೋದಿಯ ವಿದೇಶಾಂಗ ನೀತಿ ಏನು
ಭಾರತದ ವಸುದೈವ ಕುಟುಂಬಕಂ ಸಿದ್ದಾಂತ ಇಂದಿನದಲ್ಲ.ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದ ಶಾಂತಿ ಪಾಲನೆಯ ಸೂತ್ರಗಳೂ ೧೯೪೭ರ ಬಳಿಕ ಜನಿಸಿದ್ದಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವ ಭಾರತವು, ಇರಾನ್- ಇಸ್ರೇಲ್ ಕದನ ವಿರಾಮದ ವಿಚಾರದಲ್ಲಿ ಪಾಕ್‌ಗಿಂತಲೂ ಮುಂದೆ ಇರಬೇಕಿತ್ತು. ಒಟ್ಟಿನಲ್ಲಿ
ಸಂಕಷ್ಟದಲ್ಲಿ ಸರ್ಕಾರ, ಜಿಲ್ಲಾಡಳಿತ ಜನರ ಜೊತೆಗಿರಲಿದೆ: ಸಚಿವ ಲಾಡ್
ಧಾರವಾಡದ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಹಾನಿಯನ್ನು ಗ್ರಾಮದ ಉದ್ದಗಲಕ್ಕೂ ಸಂಚರಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು. ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ
ತೃತೀಯ ಭಾಷೆಯಾಗಿ ಹಿಂದಿ ರದ್ದು: ಕುಟಿಲ ರಾಜಕಾರಣವೆಂದ ಆರ್ ಅಶೋಕ
ತೃತೀಯ ಭಾಷೆ ಹಿಂದಿಯನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಮಕ್ಕಳ ಬದುಕಿಗೆ ಕಲ್ಲು ಹಾಕಿದೆ. ಕನ್ನಡದ ಮೇಲಿನ ಪ್ರೀತಿಯಿಂದ ಸರ್ಕಾರ ಈ ತೀರ್ಮಾನ ಮಾಡಿಲ್ಲ. ಇದು ಕೇವಲ ಕುಟಿಲ ರಾಜಕಾರಣ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ
ಶಾಸಕರಿಗೆ ಐಪಿಎಲ್ 3 ಟಿಕೆಟ್ ಫ್ರೀ, 2 ಖರೀದಿಗೆ ಅವಕಾಶ: ಡಿಕೆ ಶಿವಕುಮಾರ್
ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಟಿಕೆಟ್ ಉಚಿತವಾಗಿ ನೀಡಲು ಒಪ್ಪಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಹೆಚ್ಚುವರಿ ಟಿಕೆಟ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ
ರಾಯಚೂರಿನಲ್ಲಿ ನಕಲಿ ವೈದ್ಯ ನೀಡಿದ ಇಂಜೆಕ್ಷನ್: ಬಾಲಕಿ ಸಾವು
ರಾಯಚೂರು ಜಿಲ್ಲೆಯಲ್ಲಿ ನಕಲಿ ವೈದ್ಯ ಬಳಿ ಚಿಕಿತ್ಸೆಗೆ ಹೋಗಿ ಇಂಜೆಕ್ಷನ್ ಚುಚ್ಚಿಸಿಕೊಂಡ ಬಾಲಕಿ ಮೃತಪಟ್ಟಿದ್ದಾಳೆ. ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದ ಸಿಂಧೂ (13) ಇಂಜೆಕ್ಷನ್ ಪಡೆದ ನಂತರ ಮೃತಪಟ್ಟಾಕೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯಿಂದ ಬಾಲಕಿ ಮೃತಪಟ್ಟಿದ್ದಾಗಿ




