Thursday, October 01, 2026
Menu

ಮೋದಿ ಮಿನಿಸ್ಟ್ರಿ ವಿಸ್ತರಣೆಗೆ ರಣತಂತ್ರ

ಇಬ್ಭಾಗಗೊಂಡ ಶಿವಸೇನೆಯ ಒಂದು ಬಣ ಮತ್ತು ಎರಡು ಬಣವಾಗಿರುವ ಶರತ್ ಪವಾರ್ ಸ್ಥಾಪಿತ ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮೊನ್ನೆಯಷ್ಟೆ ದೂರ ಸರಿದ ಡಿಎಂಕೆ  ನಾಯಕರನ್ನು ಎನ್‌ಡಿಎ ಕೂಟದತ್ತ ತಿರುಗಿಸಿಕೊಳ್ಳಲು ದಿಲ್ಲಿ ಬಿಜೆಪಿ ಅಗ್ರ ನಾಯಕರು ರಣತಂತ್ರ ರೂಪಿಸಿರುವುದು ಕುತೂಹಲಕರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿ ಮಂಡಲ ಪುನಾರಚನೆಯ ಸಮಯ ಸನ್ನಿಹಿತವಾಗಿದೆ. ಬಿಜೆಪಿ ಮತ್ತು ಮಿತ್ರಕೂಟದ ಕೆಲ ಹಿರಿ, ಕಿರಿಯರಿಗೆ ಮಂತ್ರಿಮಂಡಲದಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳಿವೆ.

ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಡಿಕೆಶಿ ಹೋರಾಟಗಳು

 ರಾಜ್ಯದ ಸಮಗ್ರ ಹಿತರಕ್ಷಣೆಗಾಗಿ ಮುಖ್ಯಮಂತ್ರಿಯಾದ ಬಳಿಕ ಡಿಕೆ ಶಿವಕುಮಾರ್‌ ಹಲವು ಪರಿಣಾಮಕಾರಿ ಕ್ರಮಗಳೊಂದಿಗೆ ಹೋರಾಟ ನಡೆಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ, ದೆಹಲಿಯಲ್ಲಿ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳ ತಂಡ ರಚನೆಗೆ ನಿರ್ಧಾರ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ನಿರ್ವಹಣೆ

ಪ್ಲೈಓವರ್ ಬೈಕ್- ಆಟೋ ಸಂಚಾರ ನಿಷೇಧ ಸರಿಯೇ ?

ಬೆಂಗಳೂರಿನ ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಹಾಗು ಆಟೋ ಸಂಚಾರವನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನೇ ಕತ್ತರಿಸುವ ಆಲೋಚನೆ ಸರಿಯೇ ? ಇಂದು ಬೆಂಗಳೂರಿನ ಮಧ್ಯಮ ವರ್ಗದ

ಸಿಎಂ ಆಗಿ ಡಿಕೆ ಶಿವಕುಮಾರ್‌ ಕೈಗೊಂಡ ಮಹತ್ತರ ತೀರ್ಮಾನಗಳು

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿಕೆ ಶಿವಕುಮಾರ್ ಅವರು ಕೈಗೊಂಡ ಮಹತ್ವದ ತೀರ್ಮಾನಗಳು ಹೀಗಿವೆ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್,  ಎಲ್ಲಾ ಪಂಚಾಯಿತಿ, ವಾರ್ಡ್ ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ. ತಲಾ 10 ಲಕ್ಷ ರೂ.

ಚಿತ್ರದುರ್ಗ ಆಸ್ಪತ್ರೆಯಲ್ಲಿ ಅಹವಾಲು ಸ್ವೀಕರಿಸದೆ ನಡೆದ ಡಿಸಿ: ತಡೆದ ರೋಗಿಗಳ ಸಂಬಂಧಿಕರು

ಚಿತ್ರದುರ್ಗ ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ರೋಗಿಗಳ ಸಂಬಂಧಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಸ್ಪತ್ರೆ ಪರಿಶೀಲನೆಗೆ ಆಗಮಿಸಿದ್ದ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿ ಎಸ್. ರಮ್ಯ ರೋಗಿಗಳ ಅಹವಾಲುಗಳನ್ನು ಕೇಳದೆ ಕಾರಿನ

ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ: ಸಿಎಂ ಡಿಕೆ ಶಿವಕುಮಾರ್

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸೂಚಿಸಿದರು.

ಮನೆ ಹಂಚಿಕೆ ಸಿಎಂ‌ ವಿವೇಚನೆಗೆ ಬಿಟ್ಟ ವಿಚಾರ: ಸಚಿವ ಬೈರತಿ ಸುರೇಶ್‌

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ. ಸರ್ಕಾರದ ವಸತಿ ಗೃಹದ ಹಂಚಿಕೆ ವಿಚಾರದಲ್ಲಿ ತಪ್ಪು ಮಾಹಿತಿ ಹೇಗೆ ಹೋಗಿದೆಯೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ

ರೈತರ ವಿಮೆ ಹಣ ಕಟ್ಟದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಸೂಚನೆ

ದೇವರ ಹಿಪ್ಪರಗಿ ತಾಲೂಕಿನ ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕಿಗೆ ಪಾವತಿ ಮಾಡದ ಕಾರಣ 93 ರೈತರ ವಿಮೆ ತಿರಸ್ಕಾರಗೊಂಡಿದ್ದು, ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ಸ್ವಸಹಾಯ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಡಿಕೆ ಶಿವಕುಮಾರ್‌ ಸೂಚನೆ ನೀಡಿದರು.

ಕಸ್ತೂರಿರಂಗನ್ ವರದಿ ಅನುಷ್ಠಾನ ಸಾಧ್ಯವೇ ?

ಗಿಡಮರಗಳನ್ನು ಕಡಿಯದೆ ಯಾವ ಹೊಸ ಯೋಜನೆಯೂ ಸಾಧ್ಯವಿಲ್ಲ. ಕೇಂದ್ರ ಪರಿಸರ ಇಲಾಖೆ ಈಗ ಹಲವಾರು ರಾಜ್ಯದ ಯೋಜನೆಗಳಿಗೆ ಪರಿಸರದ ನೆಪವೊಡ್ಡಿ ಅನುಮತಿ ನೀಡಿಲ್ಲ. ಹೀಗಾದರೆ ಜನತೆಗಿಂದು ಅನಿವಾರ್ಯವಾದ ವಿದ್ಯುತ್ ಮತ್ತು ರೈಲು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಯಾವ ಸರ್ಕಾರದಿಂದಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ

ನೈಸ್ ಯೋಜನೆ: ಕಾನೂನಿನ ಚೌಕಟ್ಟಿನಲ್ಲೇ ಕ್ರಮವೆಂದ ಸಿಎಂ ಡಿಕೆ ಶಿವಕುಮಾರ್ 

ನೈಸ್ ಯೋಜನೆ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕೈಗೊಳ್ಳಲಿದೆಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ನೈಸ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿ ಸಂಪುಟ ತೀರ್ಮಾನ ಕೈಗೊಂಡಿದೆ