ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿಕೆ ಶಿವಕುಮಾರ್ ಅವರು ಕೈಗೊಂಡ ಮಹತ್ವದ ತೀರ್ಮಾನಗಳು ಹೀಗಿವೆ,
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಎಲ್ಲಾ ಪಂಚಾಯಿತಿ, ವಾರ್ಡ್ ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ. ತಲಾ 10 ಲಕ್ಷ ರೂ. ನೀಡುವ ನಿರ್ಣಯ.
2500 ಅಡಿವರೆಗಿನ ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ, ರಾಜ್ಯದೆಲ್ಲೆ ‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆ. ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರೂ. ಯೋಜನೆ.
ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ತೀರ್ಮಾನ, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡುವು. ಸಾರ್ವಜನಿಕರ ಕುಂದುಕೋರತೆ, ಅಹವಾಲು ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯ. ಶಾಸಕರು, ಮಂತ್ರಿಗಳ ಒತ್ತಡಕ್ಕೆ ಮಣಿಯದೇ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ.
ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದವರಿಗೆ ಮಾತ್ರ ಸಿಗಬೇಕು ಹಾಗೂ ಸೋರಿಕೆ ತಪ್ಪಿಸಲು ಕ್ರಮ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಕಣಕ್ಕಿಳಿಸಿ ಗೆಲುವು. ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆಗೆ ಸೂಚನೆ.
ಕೇಂದ್ರದ ನೀತಿ ಆಯೋಗ ಸಭೆಯಲ್ಲಿ ಭಾಗಿ ಕರ್ನಾಟಕದ ಬೇಡಿಕೆಗಳ ಪ್ರಸ್ತಾಪ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ಸಿ.ಆರ್ ಪಾಟೀಲ್, ನಿರ್ಮಲಾ ಸೀತರಾಮನ್, ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳು, ಬೆಂಗಳೂರಿನ ಮೆಟ್ರೋ, RRTS ರೈಲು ಹಾಗೂ ಪೋಲೀಸ್ ಇಲಾಖೆಗಳ ಯೋಜನೆಗಳು ಹಾಗೂ ವಿಶೇಷ ಅನುದಾನಗಳ ಬಗ್ಗೆ ಚರ್ಚೆ.
ದೆಹಲಿಯಲ್ಲಿರುವ ರಾಜ್ಯದ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ಸಭೆ ಮಾಡಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲು ಕರೆ. ಕಾಲೇಜು ಚುನಾವಣೆಗಳನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಚಿಂತನೆ. ಎಲ್ಲಾ ತಾಲೂಕುಗಳಲ್ಲಿ ರಿಂಗ್ ರಸ್ತೆ ಗ್ರಿಡ್ ಗುರುತಿಸಲು ನಿರ್ದೇಶನ.
ಭ್ರಷ್ಟಾಚಾರ ವಿರುದ್ಧ ದೂರು ನೀಡಲು ದೂರವಾಣಿ ಸಂಖ್ಯೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ತಂತ್ರಾಂಶದ ಸಿಬ್ಬಂದಿ ಹಾಜರಾತಿಗೆ ಸೂಚನೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ನಿರ್ದೇಶನ.
ನೂತನ ಸಿಎಸ್ಆರ್ ನೀತಿ ತರಲು ಅಧಿಕಾರಿಗಳಿಗೆ ಸೂಚನೆ, ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಭೆ, ಮಾವು ಬೆಳೆಗಾರರಿಗೆ ಕಳೆದ ವರ್ಷದಂತೆ ಪ್ರೋತ್ಸಾಹ ಧನ ಮುಂದುವರಿಸಲು ತೀರ್ಮಾನ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ನಿರ್ದೇಶನ. ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮ. ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ತೀರ್ಮಾನ.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧಾರ. ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕಗಳ ಸಂರಕ್ಷಣೆಗೆ 5 ಕೋಟಿ ರೂ ಹಾಗೂ 2 ಎಕರೆ ಜಾಗ ನೀಡಲು ತೀರ್ಮಾನ. ತುಂಗಭದ್ರಾ ಅಣೆಕಟ್ಟು ನೂತನವಾಗಿ ಅಳವಡಿಸಲಾಗಿರುವ ಸ್ಪಿಲ್ ಗೇಟ್ ಗಳ ಉದ್ಘಾಟನೆ.
ಬಡವರ ವಸತಿ ಯೋಜನೆಗಳ ಮಂದಗತಿಗೆ ಅಸಮಾಧಾನ, ಆದಷ್ಟು ಬೇಗ ವಸತಿ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ. ಬಡವರಿಗೆ ನಿವೇಶನ ಬದಲು ಮನೆ ಕಟ್ಟಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ. ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ ಕೃಷ್ಣ ರಸ್ತೆ ಉದ್ಘಾಟನೆ.
ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ತೀರ್ಮಾನ. ಬಂಡೀಪುರ, ನಾಗರಹೊಳೆ ಹುಲಿ ಸಫಾರಿ ಪುನರಾರಂಭ. ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಗಿನ್ನೀಸ್ ದಾಖಲೆ ನಿರ್ಮಾಣ. ಸಾರ್ವಜನಿಕ ಯೋಜನೆಗಳಿಗೆ ಭೂಮಿ ಕೊಡುವ ರೈತರು, ಭೂಮಾಲೀಕರಿಗೆ ಗೌರವ ನೀಡಲು ವಾಲ್ ಆಫ್ ಗ್ರ್ಯಾಟಿಟ್ಯೂಡ್ ನಿರ್ಮಾಣಕ್ಕೆ ನಿರ್ಧಾರ.
2028ಕ್ಕೆ ನಶೆ ಮುಕ್ತ ಕರ್ನಾಟಕ ನಿರ್ಮಾಣದ ಗುರಿ. ಅಮಲು ಬೆರೆಸುವ ಪಾನ್ ಮಸಾಲ, ಗುಟ್ಕಾಗಳ ನಿಷೇಧಿಸುವ ಎಚ್ಚರಿಕೆ. ಡ್ರಗ್ಸ್ ಜಾಲ ನಿಗ್ರಹಕ್ಕೆ ಸುಳಿವು ನೀಡಿದವರಿಗೆ ಬಹುಮಾನ ನೀಡಲು ತೀರ್ಮಾನ.


