Wednesday, September 09, 2026
Menu

ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಡಿಕೆಶಿ ಹೋರಾಟಗಳು

 ರಾಜ್ಯದ ಸಮಗ್ರ ಹಿತರಕ್ಷಣೆಗಾಗಿ ಮುಖ್ಯಮಂತ್ರಿಯಾದ ಬಳಿಕ ಡಿಕೆ ಶಿವಕುಮಾರ್‌ ಹಲವು ಪರಿಣಾಮಕಾರಿ ಕ್ರಮಗಳೊಂದಿಗೆ ಹೋರಾಟ ನಡೆಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ,

ದೆಹಲಿಯಲ್ಲಿ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳ ತಂಡ ರಚನೆಗೆ ನಿರ್ಧಾರ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ನಿರ್ವಹಣೆ ಮತ್ತು ತ್ವರಿತ ಇತ್ಯರ್ಥಕ್ಕೆ ವಕೀಲರ ತಂಡ ಸದೃಢಗೊಳಿಸಲು ತೀರ್ಮಾನ.

ತುಂಗಾಭದ್ರ ಪಾತ್ರದ ರೈತರ ರಕ್ಷಣೆಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಒಗ್ಗಟ್ಟಾಗಿ ಸೇರಿ ಒಮ್ಮತದ ತೀರ್ಮಾನ. ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಕೇಂದ್ರದಿಂದ ಯೋಜನೆ.

ತೆರಿಗೆ ವಂಚನೆ ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ. ಖಾಸಗೀಕರಣ ವಿರೋಧಿಸುತ್ತಿದ್ದ ಎಸ್ಕಾಂ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ. ಹಾಸನದ ಐಐಟಿಗೆ ಭೂಸ್ವಾಧೀನದಿಂದ ಸರಿಯಾದ ಪರಿಹಾರ ಸಿಗದೆ ನೊಂದ ಹಾಸನದ ರೈತರಿಗೆ 2013ರ ಕೋರ್ಟ್ ಆದೇಶ ಅನ್ವಯ ಪರಿಹಾರ ನೀಡುವ ಭರವಸೆ.

ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಜನರ ಮತದಾನದ ಹಕ್ಕು ರಕ್ಷಣೆಗೆ ನಿವಾಸ ದೃಢೀಕರಣ ಪತ್ರ ಸೇರಿದಂತೆ ಸರ್ಕಾರದಿಂದ ಅಗತ್ಯ ನೆರವು. ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಅರಣ್ಯ ಅನುಮತಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಜು.15ರ ಒಳಗೆ ಇತ್ಯರ್ಥಕ್ಕೆ ಸೂಚನೆ. ಗಣಿಗಾರಿಕೆ ಸೇರಿ ನಾನಾ ಚಟುವಟಿಕೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಆ ಭೂಮಿ ಹಿಂಪಡೆಯಲು ಸೂಚನೆ.

ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಭೂಕಂಪನ ಅಧ್ಯಯನಕ್ಕೆ ಮಣ್ಣು ಪರೀಕ್ಷೆಗೆ ಹಾಗೂ ಸಮೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಿದ್ದು, ಇದರ ಮುಂದುವರಿದ ಭಾಗವಾಗಿ ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿ ಕೋರಿ ಶಿಫಾರಸು. ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ 2-3ನೇ ಹಂತದ ನಗರಗಳಲ್ಲಿ ಉದ್ಯಮಗಳ ಆಕರ್ಷಣೆ, 2-3 ಹಂತದ ನಗರಗಳಲ್ಲಿ ಡಬಲ್ ಎಫ್ಎಆರ್ ನೀಡಲು ತೀರ್ಮಾನ, ಬರ ಪರಿಸ್ಥಿತಿ ಎದುರಿಸಲು ತೀರ್ಮಾನ.

ಕಲಬುರ್ಗಿಯಲ್ಲಿ 320 ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್, ಬೆಳೆ ವಿಮೆ ಬಾಕಿ ಬಿಡುಗಡೆ, ರೈತರಿಗೆ ಆಸರೆ, ಬೆಂಗಳೂರಿನಾಚೆ ಹೊಸ ಬೆಗಳೂರು ನಿರ್ಮಾಣಗಳ ಘೋಷಣೆ, ಬೆಳಗಾವಿಯಲ್ಲಿ ವಿಭಾಗ ಮಟ್ಟದ ಪರಿಶೀಲನೆ, ಕುಡಿಯುವ ನೀರು ಪೂರೈಕೆಗೆ ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ತಲಾ 1 ಕೋಟಿ ಅನುದಾನ.
ರಾಮಮಂದಿರ ಲೂಟಿ ಹಿನ್ನೆಲೆ ರಾಜ್ಯದ ಮುಜರಾಯಿ ದೇಗುಲಗಳ ಹುಂಡಿಗಳ ರಕ್ಷಣೆಗೆ ಸಿಸಿಟಿವಿ ಕಣ್ಗಾವಲು.

ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ, ದಸರಾದಲ್ಲಿ ಏರ್ ಶೋ ನಡೆಸಲು ಕೇಂದ್ರಕ್ಕೆ ಮನವಿ. ದಸರಾದಲ್ಲಿ ಕಂಬಳ ಸೇರಿ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳ ಸೇರ್ಪಡೆ. ಒಎಸ್ ಟಿ ಮರು ಜಾರಿ ಬಗ್ಗೆ ಪರಿಶೀಲನೆಯ ಭರವಸೆ. ತಿರುಮಲ ದೇಗುಲ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿ, ಗಣ್ಯರಿಗೆ ಅವಕಾಶ.

ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿವಿ ಸ್ಥಾಪನೆ ಘೋಷಣೆ, ರಾಜ್ಯದ ಬರ ಅದ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಮಂತ್ರಿಗಳಿಗೆ ಪತ್ರ. ಕರ್ನಾಟಕ ಅಪಾರ್ಟ್ ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ಕುರಿತು ಸಂವಾದ. ಆಗಸ್ಟ್ 6ರವರೆಗೆ ಸಲಹೆ ಸೂಚನೆಗೆ ಅವಕಾಶ.

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ಎಂದು ಘೋಷಣೆ. ರೈತರ ಅಹವಾಲು, ಅಭಿಪ್ರಾಯ ಕೇಳಲು ಸಮಿತಿ ರಚನೆ. ಬರ ಪರಿಸ್ಥಿತಿ ಬಗ್ಗೆ ಡಿಸಿ ಮತ್ತು ಸಿಇಒಗಳ ಸಭೆ, ಟೀಮ್ ಕರ್ನಾಟಕವಾಗಿ ಕೆಲಸ ಮಾಡಲು ಕರೆ, ಕೆಪಿಎಸ್ ಸಿ ಅಕ್ರಮ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ಸಂಪುಟದ ಒಪ್ಪಿಗೆ.

15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮೋದನೆ, ಎಸ್ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹಕ್ಕು ಉಳಿಸಲು ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಹಾಗೂ ನಿವಾಸ ದೃಢೀಕರಣ ಪತ್ರ. ರಾಜ್ಯದಲ್ಲಿ ಸಿಎಸ್ಆರ್ ನಿಧಿಯ ಪ್ರತಿ ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಲು ತೀರ್ಮಾನ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಖಾಸಗಿ ಶಾಲೆಗಳು ದತ್ತು ಪಡೆಯಲು ಸೂಚನೆ.

ಹಿರಿಯೂರಿನ ಕೆರೆಗಳಿಗೆ ನೀರು ತುಂಬಿಸಲು ತೀರ್ಮಾನ, 244 ಕೋಟಿ ರೂ ಮೊತ್ತದ ಯೋಜನೆಗಳಿಗೆ ಒಪ್ಪಿಗೆ, ನವದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ. ರಾಜ್ಯದ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡಲು ಕರೆ, ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಸಹಕಾರ ನೀಡುವಂತೆ ಒತ್ತಡ ಹೇರಲು ಮನವಿ. ಕಾವೇರಿ ವಿಚಾರದಲ್ಲಿ ತಿಮಿಳುನಾಡು ಸಿಎಂ ಜೊತೆ ಚರ್ಚೆಗೆ ಸಿದ್ಧತೆ.

ಪರಿಸ್ಥಿತಿ ತಿಳಿಯಾದ ಬಳಿಕ ಚರ್ಚೆ ನಡೆಸಲು ಸಭೆ ಮುಂದೂಡಿಕೆ, ನೇಮಕಾತಿಗಳಿಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ. ಕೆಪಿಎಸ್ ಸಿ ಹಾಗೂ ಕೆಇಎ ನೇಮಕಾತಿಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲು ಸೂಚನೆ. ಬೆಂಗಳೂರಿನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಚಾಲನೆ.

ಸರ್ಕಾರ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ 5 ವರ್ಷಗಳಲ್ಲಿ ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ಪಡೆಯುವ ಘೋಷಣೆ, ಕರ್ನಾಟಕಕ್ಕೆ ಹೃದಯ ವೈಶಾಲ್ಯತೆಯಿಂದ ನೆರವು ನೀಡಲು ಪ್ರಧಾನಿಗೆ ಮನವಿ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸರ್ವಪಕ್ಷ ಸಭೆ ನಡೆಸಿ ಎಲ್ಲರ ವಿಶ್ವಾಸ, ಅಭಿಪ್ರಾಯ ಸಂಗ್ರಹ. ಎಲ್ಲಾ ಸಚಿವರು ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ.

ಪ್ರತಿಭಟನಾ ನಿರತ ಕೃಷಿ ಪದವೀಧರರ ಸಮಸ್ಯೆ ಆಲಿಸಿದ ಸಿಎಂ, ಕೃಷಿ ಅಧಿಕಾರಿ ನೇಮಕಾತಿ ಗೊಂದಲ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಪರೀಕ್ಷೆ ಮುಂದೂಡಲು ಸರ್ಕಾರ ನಿರ್ಧಾರ. ಆಡಳಿತ ಕೌಶಲ್ಯಾಭಿವೃದ್ಧಿ ಮತ್ತು ಡೀಪ್ ಟೆಕ್ ಪ್ರಗತಿಗಾಗಿ ಕರ್ನಾಟಕ ಮತ್ತು ಆಂಥ್ರೋಪಿಕ್ ಸಂಸ್ಥೆ ನಡುವೆ ಎಐ ಸಹಭಾಗಿತ್ವ, ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿ 3 ಉದ್ಯಾನವನ ನಿರ್ಮಾಣಕ್ಕೆ ತೀರ್ಮಾನ.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಜಾರಿಗೆ ತಂದು ಸಾಮಾಜಿಕ ನ್ಯಾಯ ಒದಗಿಸಲು ಬದ್ಧ ಎಂದು ಘೋಷಣೆ. ರಾಜ್ಯದಲ್ಲಿ ಸಿಎಸ್ ಆರ್ ನಿಧಿ ಬಳಕೆ ಮೇಲೆ ಪ್ರತ್ಯೇಕ ನಿಗಾ ವಹಿಸಲು ಪ್ರತ್ಯೇಕ ಐಎಎಸ್ ಅಧಿಕಾರಿ ನೇಮಕಕ್ಕೆ ತೀರ್ಮಾನ, ಅಮೆರಿಕ ರಾಯಭಾರಿ ಸೆರ್ಗಿಯೋ ಗೊರ್ ಭೇಟಿ, ಬೆಂಗಳೂರಿನಲ್ಲಿ ಶಾಶ್ವತ ರಾಯಭಾರಿ ಕಚೇರಿ ಸ್ಥಾಪನೆಗೆ ಮನವಿ.

ಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾ.ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ, 30 ದಿನಗಳಲ್ಲಿ ವರದಿಗೆ ಸೂಚನೆ. ಮಾಲೂರಿನಲ್ಲಿ 3200 ಕೋಟಿ ಮೊತ್ತದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ. ಅಲೆಮಾರಿ ಮತ್ತು ಆದಿವಾಸಿ ಆಯೋಗ ಒಂದು ತಿಂಗಳಲ್ಲಿ ರಚನೆಯ ಭರವಸೆ, ಮೂರೇ ದಿನಗಳಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆಗೆ ಆದೇಶ

ರಾಜ್ಯದ ಎಲ್ಲಾ ಸರ್ಕಾರಿ ನೌಕರರರೊಂದಿಗೆ ಸಂವಾದ ನಡೆಸಿ ಬರ ನಿರ್ವಹಣೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚೆ. ಟೀಮ್ ಕರ್ನಾಟಕವಾಗಿ ಕೆಲಸ ಮಾಡಲು ಕರೆ. ಮೊದಲ ಅಧಿವೇಶನದಲ್ಲಿ ರಾಜ್ಯದ ಪ್ರಗತಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಲು ವಿಪಕ್ಷಗಳಿಗೆ ಕರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಗತಿಯ ನೀಲಿ ನಕ್ಷೆ ಪ್ರಕಟ.

2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ ಕೊಂಡೊಯ್ಯುವ ಗುರಿ. ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದ ಎಐ ಶಿಕ್ಷಣ ಪರಿಚಯ.
‘ಎಐ ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಆರಂಭ. ರಾಜ್ಯದ ವಿವಿಧೆಡೆ ಎಐ ಹಬ್ ಗಳ ಸ್ಥಾಪನೆ, ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆ ಆರಂಭ. ‘ಉದ್ಯೋಗ ನಿಧಿ’ ಯೋಜನೆ ಮೂಲಕ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ. ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ.

ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಹಾಗೂ ನೈಜ ಸಮಯದ ಮಾಹಿತಿ. ಸಣ್ಣ ರೈತರಿಗಾಗಿ ‘ರೈತ ಮಿತ್ರ’ ಕಾರ್ಯಕ್ರಮ. 3 ಎಕರೆ ಅಥವಾ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ 50% ಸಹಾಯಧನ. ದೊಡ್ಡಬಳ್ಳಾಪುರದಲ್ಲಿ ಅಡ್ವಾನ್ಸ್‌ ಮ್ಯಾನುಫ್ಯಾಕ್ಚರ್‌ ಕ್ಲಸ್ಟರ್ ಸ್ಥಾಪನೆ. ₹20,000 ಕೋಟಿ ಹೂಡಿಕೆ ಹಾಗೂ ಸುಮಾರು1 ಲಕ್ಷ ಉದ್ಯೋಗಗಳ ಸೃಷ್ಟಿ ಗುರಿ.

‘ಬಿಯಾಂಡ್‌ ಬೆಂಗಳೂರು’ ಅಡಿಯಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಸಹಾಯ ಹಸ್ತ’ ಯೋಜನೆ. ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಲ್ಲಿ 7.5% ಮೀಸಲಾತಿ. ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರದಲ್ಲಿ ರಿಂಗ್‌ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿ. ಬೆಂಗಳೂರು ಬಿಸಿನೆಸ್ ಕಾರಿಡಾರ್ – 117 ಕಿ.ಮೀ. ರಿಂಗ್ ರಸ್ತೆ ಯೋಜನೆಗೆ ಚಾಲನೆ. ಬೆಂಗಳೂರಿನಲ್ಲಿ ಐದು ಹೊಸ ಕಮಿಷನರೇಟ್ ಗಳ ಸ್ಥಾಪನೆ.

ಬೆಂಗಳೂರಿನಲ್ಲಿ ಐದು ಬೃಹತ್ ವೃಕ್ಷೋಧ್ಯಾನ (ಟ್ರೀ ಪಾರ್ಕ್‌) ನಿರ್ಮಾಣ. ಬೆಂಗಳೂರಿನ ಏಳು ಪ್ರಮುಖ ಕೆರೆಗಳ ಅಭಿವೃದ್ಧಿ. ವಾಹನ ಮಾಲೀಕರಿಗೆ ಸರಳ ವಿಮಾ ಸೇವೆಗಾಗಿ ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪನೆ. ಮೇಕೆದಾಟು ಯೋಜನೆ ಆರಂಭಿಸುವ ಘೋಷಣೆ. 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16,000 ಕೋಟಿ ಅನುಮೋದನೆ.

ಭೂ-ಗ್ಯಾರಂಟಿ ಮೂಲಕ ಆಸ್ತಿ ಮಾಲೀಕತ್ವದ ಗೊಂದಲಕ್ಕೆ ಪರಿಹಾರ. ಇ-ಖಾತಾ ವ್ಯವಸ್ಥೆ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ. ಮೊದಲ ಬಾರಿಗೆ ವಿಧಾನಸೌಧದಲ್ಲಿ ಫ್ರೀಡಂ ಹಬ್ಬ ಆಚರಣೆ. 31ನೇ ದಕ್ಷಿಣ ಮಂಡಳಿ ಸಭೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ಪರವಾಗಿ ಧ್ವನಿ, ನ್ಯಾಯಯುತ ಅನುದಾನ, ನ್ಯಾಯಯುತ ಪ್ರಾತಿನಿದ್ಯಕ್ಕೆ ಆಗ್ರಹ. 1971ರ ಜನಸಂಖ್ಯೆ ಅನುಸಾರ ಕ್ಷೇತ್ರ ಮರುವಿಂಗಡಣೆ ಮಾಡಲು ಒತ್ತಾಯ.

ಲೋಕಸಭೆ ಸ್ಥಾನ ಯತಾಸ್ಥಿತಿಯಲ್ಲಿ ಉಳಿಸಿಕೊಂಡು ಮಹಿಳಾ ಮೀಸಲಾತಿ ಜಾರಿಗೆ ಆಗ್ರಹ, ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಅಗತ್ಯ ಎಂದು ವಾದ ಮಂಡನೆ, 500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋಟಿ ಮೊತ್ತದ ಯೋಜನೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೊಂದಿಗೆ ಒಪ್ಪಂದ. ಸ್ವದೇಶಿ ನಿರ್ಮಿತ ಅಗ್ಗದ ಎಐ ಪಿಸಿ ಲೋಕಾರ್ಪಣೆ.

ಕಸ್ತೂರಿ ರಂಗನ್ ವರದಿ ಕುರಿತು ಅಧ್ಯಯನಕ್ಕೆ ವಿಶೇಷ ಅಧಿವೇಶನ ಕರೆಯಲು ತೀರ್ಮಾನ, ನಿವೇಶನ ರಹಿತರಿಗೆ ಪ್ರತಿ ಜಿಲ್ಲೆಯಲ್ಲಿ 50 ಸಾವಿರದಂತೆ ರಾಜ್ಯದಲ್ಲಿ ಒಟ್ಟು 15 ಲಕ್ಷ ನಿವೇಶನ ಹಂಚಿಕೆ, ಪೊಲೀಸರ ಸಂಕಷ್ಟ ಭತ್ಯೆ 50% ಹೆಚ್ಚಳದ ತೀರ್ಮಾನ, ಕೈಗಾರಿಕಾ ಅಭಿವೃದ್ಧಿಗೆ ಬೆಂಗಳೂರು ಹೊರತಾಗಿ 5 ನಗರ ಗುರುತಿಸಲು ಅಧಿಕಾರಿಗಳಿಗೆ ಸೂಚನೆ.

ರೈತರಿಗಾಗಿ ತೇಗದ ಸಿರಿ ಯೋಜನೆ ಘೋಷಣೆ. ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರಿಡುವುದಾಗಿ ಘೋಷಣೆ, ಶಿವರಾಮ ಕಾರಂತ ಬಡಾವಣೆಗೆ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರ ವಿತರಣೆ. ಮೊದಲ ಪಟ್ಟಿಯಲ್ಲಿ 102 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ. ಗದಗದಲ್ಲಿ ಬರ ಪರಿಸ್ಥಿತಿ ವೀಕ್ಷಣೆ.

ರಾಜ್ಯಕ್ಕೆ ನೀಡಬೇಕಾದ ಅನುದಾನ ಹಂಚಿಕೆ ಪಾಲನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಲಾಹಿರಿ ಮುಂದೆ ಬೇಡಿಕೆ. ರಾಜ್ಯದಲ್ಲಿ 29,679 ಕೋಟಿ ಮೊತ್ತದ 17 ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ, ದಸರಾ ಹಬ್ಬಕ್ಕೆ ದಕ್ಷಿಣ ರಾಜ್ಯಗಳ ಸಿಎಂಗಳಿಗೆ, ವಿದೇಶದ ರಾಯಭಾರಿಗಳಿಗೆ ಆಹ್ವಾನ, ಈ ರಾಜ್ಯಗಳ ಕಲಾ ತಂಡಗಳ ಪ್ರದರ್ಶನಕ್ಕೆ ಅವಕಾಶ, ಏರ್ ಷೋ, ಡ್ರೋನ್ ಶೋ, ದೇಶದ ವಿವಿಧ ಸೇನೆಗಳ ಟ್ಯಾಬ್ಲೋ ಪ್ರದರ್ಶನ ಸೇರಿದಂತೆ ದಸರಾಗೆ ಹೊಸ ಮೆರಗು ನೀಡಲು ತೀರ್ಮಾನ.

ಬಾಗಲಕೋಟೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ, ವಿಜಯನಗರದ ಕೂಡ್ಲಿಗಿಯಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ, ಶಾಲಾ ಶಿಕ್ಷಕರಿಗೆ ಗೌರವಾರ್ಥವಾಗಿ ಹೆಸರಿನ ಮುಂದೆ Tr. ಬರೆದುಕೊಳ್ಳಲು ಅವಕಾಶ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ 7.5% ಮೀಸಲಾತಿ. ರಾಜ್ಯದ 3,145 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ವಿದೇಶದಲ್ಲಿ ಅಧ್ಯಯನ 2026ಕ್ಕೆ ಚಾಲನೆ.

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ, ರೈತರು, ವರ್ತಕರ ಜತೆ ಮಾತುಕತೆ. ಬೆಳೆ ವಿಮೆ ವಿಚಾರದಲ್ಲಿ ನಿರ್ಲಕ್ಷ ವಹಿಸಿದ ಅಧಿಕಾರಿ ಅಮಾನತು ಹಾಗೂ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡವರ ಬಂಧನಕ್ಕೆ ಸೂಚನೆ.

Related Posts

Leave a Reply

Your email address will not be published. Required fields are marked *