Featured
ದೇಗುಲದಿಂದ ವಾಪಸಾಗುತ್ತಿದ್ದಾಗ ವಾಹನ ತೆರೆದ ಬಾವಿಗೆ ಉರುಳಿ ಎಂಟು ಮಂದಿ ಸಾವು
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್‌ನಲ್ಲಿ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅಪಘಾತದಲ್ಲಿ ಏಳು ಜನರು ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಢರಪುರ ಮೂಲದ 15 ಜನರು ಮಾಸ್ವಾಡ್‌ನ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸಾಗುತ್ತಿರುವಾಗ ತಂಡುಲ್ವಾಡಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಪಿಕಪ್‌ನಲ್ಲಿ ಇದ್ದವರು ಹೆಚ್ಚಿನವರು ಸಂಬಂಧಿಕರು ಮತ್ತು ಅಕ್ಕಪಕ್ಕದ ನಿವಾಸಿಗಳು
ಪತಿ ಮಗುವನ್ನು ಅಪಹರಿಸಿರುವುದಾಗಿ ಪತ್ನಿ ದೂರು
ನನ್ನ ಪತಿಯೇ ಐದು ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡುವಿನಲ್ಲಿ ನಡೆದಿದೆ. ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಮಹಿಳೆ ಆರು ತಿಂಗಳ
ಜಾಗತಿಕ ತೈಲ ಬೆಲೆ ಗಣನೀಯ ಕುಸಿತ, ಪೆಟ್ರೋಲ್, ಡಿಸೇಲ್ ದರ ಇಳಿಕೆ?
ಯುದ್ಧ ವಿರಾಮ ಘೋಷಣೆಯೊಂದಿಗೆ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಜಾರಿ ನೀರಿಕ್ಷೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನದ ಹಾದಿಯಲ್ಲಿದೆ, ಈ ಹಿನ್ನೆಲೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ
ಪ್ರತಿಪಕ್ಷಗಳ ವದಂತಿಗಳಿಗೆ ಕಿವಿಗೊಡಬೇಡಿ, ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ
ಕಾಂಗ್ರೆಸ್ ಸರಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ “ಗೃಹಲಕ್ಷ್ಮಿ” ಮತ್ತು “ಗೃಹಜ್ಯೋತಿ” ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರು ಸತ್ತವರ
ಬಾಲ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ ಭವಿಷ್ಯ ರೂಪಿಸಬೇಕಿದೆ
ದೇಶದಲ್ಲಿಂದು ಬಾಲ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ. ಯಾವಾಗ ಸರ್ಕಾರಗಳು ಇದನ್ನು ತಾತ್ಸಾರದಿಂದ ಕಾಣುವುದೋ ಅಂತಹ ಸಮಯದಲ್ಲಿ ಈ ದೇಶದ ಎನ್‌ಜಿಓಗಳು ಮತ್ತು ಸಂವಿಧಾನದ ನಾಲ್ಕನೆ ಆಯಾಮ ಎನಿಸಿಕೊಂಡಿರುವ ಮಾಧ್ಯಮವು ಬಾಲ ಕಾರ್ಮಿಕರ ನಿಜವಾದ ಹಕ್ಕುಗಳನ್ನು ರಕ್ಷಿಸುವ ಗುರುತರವಾದ
ಶಿವಮೊಗ್ಗದಲ್ಲಿ ರೌಡಿಶೀಟರ್ ಮುಖ ಗುರುತು ಸಿಗದಂತೆ ಕೊಚ್ಚಿ ಕೊಲೆಗೈದ ಐವರ ಬಂಧನ
ಶಿವಮೊಗ್ಗ ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹ (39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್,
ಬಾಲಕಿಯ ಅತ್ಯಾಚಾರವೆಸಗಿ ವೀಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಫುಟ್ಬಾಲ್ ಕೋಚ್
ಫುಟ್ಬಾಲ್ ಪಟುವಾಗಿರುವ ಬಾಲಕಿಯ ಮೇಲೆ ತರಬೇತುದಾರ ಮೂರು ವರ್ಷ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೊ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯಾಗಿರುವ ಖಾಸಗಿ ಫುಟ್‌ಬಾಲ್ ತರಬೇತುದಾರ 36 ವರ್ಷದ ಅಭಿಜಿತ್ ಮೆಂಡಲ್ ಎಂಬಾತನನ್ನು ಪೊಲೀಸರು
ಭಾರತದ ಸೇನಾ ಮುಖ್ಯಸ್ಥರಾಗಿ ಲೆ.ಜ ಧೀರಜ್ ಸೇಠ್
ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಕಗೊಳಿಸಿ ಕೇಂದ್ರ ಸರ್ಕಾರ ದೇಶ ಪ್ರಕಟಿಸಿದೆ. ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ನಿವೃತ್ತಿ ಬಳಿಕ ಧೀರಜ್ ಸೇಠ್ ಜೂನ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಧೀರಜ್ ಸೇಠ್ ಸೇನಾ
ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಭಸ್ಮವಾಗಲಿದೆ: ಆರ್ ಅಶೋಕ
ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ Commission Minister @DKShivakumar ಅವರೇ, ಅನ್ನದಾತರ ಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಬೇಕಾಗುತ್ತದೆ, ಎಚ್ಚರಿಕೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಜಮೀನಿನ
ಕಾಲೇಜು ಫೀಸ್ ಹಣವನ್ನು ಸಾಲ ನೀಡಿದ ವಿದ್ಯಾರ್ಥಿನಿ ವಾಪಸ್ ಸಿಗದೆ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಕಾಲೇಜು ಶುಲ್ಕ ಕಟ್ಟಲು ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿ, ಆ ಹಣ ಮರಳಿ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭಟ್ಕಳದಲ್ಲಿ ಬಿಸಿಎ ವ್ಯಾಸಂಗ




