Featured
ದುಬಾರೆಯಲ್ಲಿ ಸಾಕಾನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿ
ಕುಶಾಲನಗರದಲ್ಲಿರುವ ದುಬಾರೆ ಶಿಬಿರದಲ್ಲಿ ಸಾಕಾನೆಗಳ ಮಧ್ಯೆ ನಡೆದ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿಯಾಗಿರುವ ದಾರುಣ ಘಟನೆಯೊಂದು ನಡೆದಿದೆ. ಚೆನ್ನೈನ ಜಿನ್ಮು (33) ಮೃತಪಟ್ಟ ಮಹಿಳೆ. ಸೋಮವಾರ (ಇಂದು) ಬೆಳಗ್ಗೆ ಮಹಿಳೆ ಹಾಗೂ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಬಂದಿದ್ದರು. ಸಾಕಾನೆಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದಾಗ ಕೆಲವು ಪ್ರವಾಸಿಗರು ಸ್ನಾನ ಮಾಡಿಸಲು ಮುಂದಾಗಿದ್ದಾರೆ. ಜಿನ್ಮು ದಂಪತಿ ಕೂಡ ಸಾಕಾನೆಗಳಿಗೆ
ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ನಮಗೆ ಕೊಡಿ: ಇರಾನ್‌ಗೆ ಟ್ರಂಪ್ ವಾರ್ನ್
ಇರಾನ್ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯುವುದಿಲ್ಲ, ನಿಮ್ಮಲ್ಲಿರುವ ಯುರೇನಿಯಂ ನಮಗೆ ಕೊಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನ್ ಮಾಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಸಂಘರ್ಷ ಮುಂದುವರಿಯುತ್ತಿರುವಂತೆ ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ
ಕೆಲಸ ಮಾಡದಿದ್ರೆ ಸಾರಿಗೆ ನೌಕರರಿಗೆ ವೇತನವೂ ಇಲ್ಲ: ಕೆಎಸ್ಸಾರ್ಟಿಸಿ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಒಕ್ಕೂಟಗಳು ಸಿದ್ಧತೆ ನಡೆಸುತ್ತಿರುವಂತೆಯೇ ಕೆಎಸ್ಸಾರ್ಟಿಸಿ ಕೆಲಸವಿಲ್ಲದಿದ್ದರೆ ವೇತನವಿಲ್ಲ ಎಂಬ ನಿಯಮವನ್ನು ತಕ್ಷಣದಿಂದ ಜಾರಿಗೊಳಿಸಿ ಆದೇಶ ಹೊರಡಿಸುವ ಮೂಲಕ ನೌಕರರಿಗೆ ಬಿಸಿ ಮುಟ್ಟಿಸಿದೆ. ಸಾರಿಗೆ ನೌಕರರ ಸಂಘಟನೆಗಳು ವೇತನ ಪರಿಷ್ಕರಣೆ, ಸೇವಾ ಶರತ್ತುಗಳ ಸುಧಾರಣೆ ಸೇರಿದಂತೆ
ಕೇರಳ ಸಿಎಂ ಆಗಿ ವಿಡಿ ಸತೀಶನ್ ಪ್ರಮಾಣವಚನ
ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದು, 20 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿಡಿ ಸತೀಶನ್ ಹಾಗೂ 20 ಮಂದಿ ಸಚಿವರಿಗೆ ರಾಜ್ಯಪಾಲ ಆರ್.ವಿ. ರಾಜೇಂದ್ರ ವಿಶ್ವನಾಥ್
ಮನೆ ಮುಂದೆ ನಿಂತಿದ್ದ ಶಿಕ್ಷಕ ಗುಡುಗು ಸಿಡಿಲಿನ ಅಬ್ಬರಕ್ಕೆ ಬೆಚ್ಚಿ ಹೃದಯಾಘಾತಕ್ಕೆ ಬಲಿ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಏಕಾಏಕಿ ಆರಂಭಗೊಂಡ ಗುಡುಗು ಸಿಡಿಲಿನ ಅಬ್ಬರಕ್ಕೆ ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ (56) ಮೃತಪಟ್ಟವರು. ಅವರು
ದಾವಣಗೆರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ: ಅತ್ಯಾಚಾರಿ ಅರೆಸ್ಟ್
ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೋಗಳೆರಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ
ಮನೆ ಲೀಸ್ ಆಫರ್ ಮುಂದಿಟ್ಟು ಗ್ರಾಹಕರಿಗೆ 200 ಕೋಟಿ ರೂ. ವಂಚನೆ
ಬೆಂಗಳೂರಿನಲ್ಲಿ ಮನೆ ಲೀಸ್ಗೆ ನೀಡುವುದಾಗಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕಂಪೆನಿಯೊಂದು 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಜಾನ್ಸ್ ಅಸೆಟ್ ಹೆಸರಿನ ಮಿಡಿಯೇಟರ್ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ಮಾಲೀಕ ಪರಾರಿಯಾಗಿದ್ದಾನೆ. ಕಂಪನಿ
ಶಿರಾದಲ್ಲಿ ಯುವಕನೊಂದಿಗೆ ಮಗಳ ಪ್ರೀತಿ ಒಪ್ಪದೆ ಕೊಲೆಗೈದ ತಂದೆ
ಮಗಳು ಯುವಕನೊಬ್ಬನನ್ನು ಪ್ರೀತಿಸಿ ಮನೆತನದ ಗೌರವಕ್ಕೆ ಕುಂದು ಮಾಡುತ್ತಿದ್ದಾಳೆಂದು ಸಿಟ್ಟಿಗೆದ್ದ ತಂದೆ ಆಕೆಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.’ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿ
ತೈಲ ಸಂಕಷ್ಟ: ಜನತೆಗೆ ಕೇಂದ್ರ ನೆರವಾಗಲಿ
ತೈಲ ಸಂಕಷ್ಟದ ಈ ವೇಳೆಯಲ್ಲಿ ಯಾವ ರಾಜ್ಯದ ಸಾಮಾನ್ಯನಿಗೂ ಹೊರೆಯಾಗದ ರೀತಿಯಲ್ಲಿ ಒಂದಷ್ಟು ಪರಿಹಾರದ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸುವುದು ಅನಿವಾರ್ಯ. ಈ ದಿಶೆಯಲ್ಲಿ ಜನತೆ ತ್ಯಾಗ ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ತ್ಯಾಗವು ಮಂತ್ರಿ, ಮಹೋದಯರು, ಅಧಿಕಾರಿಗಳು, ಮತ್ತು
ದರ್ಶನ್ ವಿರುದ್ಧ ಮಾಧ್ಯಮ ವಿಚಾರಣೆ: ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಚಿತ್ರದುರ್ಗದ ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ ನೀಡಿದೆ. ಮಾಧ್ಯಮಗಳು ನ್ಯಾಯಾಧೀಶರಾಗಲು, ತೀರ್ಪುಗಾರರಾಗಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು




