Menu

ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ನಮಗೆ ಕೊಡಿ: ಇರಾನ್‌ಗೆ ಟ್ರಂಪ್‌ ವಾರ್ನ್‌

ಇರಾನ್‌ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯುವುದಿಲ್ಲ, ನಿಮ್ಮಲ್ಲಿರುವ ಯುರೇನಿಯಂ ನಮಗೆ ಕೊಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನ್‌ ಮಾಡಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಸಂಘರ್ಷ ಮುಂದುವರಿಯುತ್ತಿರುವಂತೆ ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಸಮಯ ವೇಗವಾಗಿ ಮುಗಿಯುತ್ತಿದೆ. ಅವರು ಬೇಗ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವರಿಂದ ಏನೂ ಉಳಿಯುವುದಿಲ್ಲ ಎಂದು ಟ್ರಂಪ್ ಬರೆದಿದ್ದಾರೆ.

ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಹಲವು ಪ್ರದೇಶಗಳ ಮೇಲೆ ದಾಳಿ ಆರಂಭಿಸಿದ ಬಳಿಕ ಸಂಘರ್ಷ ತೀವ್ರಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಹೆಚ್ಚಿದ್ದು, ಜಾಗತಿಕ ಇಂಧನ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಶಾಶ್ವತ ಶಾಂತಿ ಒಪ್ಪಂದಕ್ಕೆ ಅಮೆರಿಕ ನಡೆಸುತ್ತಿರುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಸಂಘರ್ಷದ ಪರಿಣಾಮ ತಂತ್ರಜ್ಞಾನಾತ್ಮಕವಾಗಿ ಹರ್ಮುಜ್‌ ಜಲಸಂಧಿ ಕೂಡ ಜಾಗತಿಕ ಮಟಟ್ಟದ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.

ಸಂಘರ್ಷದ ಪರಿಣಾಮ ಇಸ್ರೇಲ್ ಮತ್ತು ಲೆಬನಾನ್‌ಗಳಲ್ಲೂ ಗಡಿ ಸಮರ ಹೆಚ್ಚಾಗಿವೆ. ಇರಾನ್ ಬೆಂಬಲಿತ ಸಂಘಟನೆ ಹಿಜ್ಬುಲ್ಲಾ, ಲೆಬನಾನ್‌ನಲ್ಲಿ ಶಾಶ್ವತ ಯುದ್ಧ ವಿರಾಮ ಜಾರಿಯಾಗುವವರೆಗೆ ಟ್ರಂಪ್ ಜೊತೆ ಶಾಂತಿ ಒಪ್ಪಂದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಇರಾನ್ ಹೇಳಿದೆ.

ಇರಾನ್‌ ಅತ್ಯಧಿಕವಾಗಿ ಸಂಸ್ಕರಿಸಿರುವ ಯುರೇನಿಯಂ ಸಂಗ್ರಹವನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯೂ ಟ್ರಂಪ್‌ ಮಂಡಿಸುವ ಶಾಂತಿ ಪ್ರಸ್ತಾವನೆಯಲ್ಲಿದೆ.

Related Posts

Leave a Reply

Your email address will not be published. Required fields are marked *