Breaking
ಹಾಸನದಲ್ಲಿ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕ ಕುಸಿದು ಸಾವು
ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಮುಖ್ಯಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ವೇಳೆ ಸತೀಶ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು ನೆರವಿಗೆ ಬಂದು ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಶಿಕ್ಷಣ
ಚಿತ್ತೂರಿನಲ್ಲಿ ಲಾರಿಗೆ ಕಾರು ಡಿಕ್ಕಿ: ರಾಜ್ಯದ ಐವರು ಸ್ಥಳದಲ್ಲೇ ಸಾವು
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಕರ್ನಾಟಕದ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ತಿರುಪತಿ ಕಡೆಗೆ ತೆರಳುತ್ತಿದ್ದ ಕಾರು ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ
ಮಾಧ್ಯಮ ಅಕಾಡೆಮಿಯಿಂದ ಪತ್ರಕರ್ತೆಯರಿಗೆ ತರಬೇತಿ
ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿಎಸ್ಆರ್ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯು ಮಾರ್ಚ್ 25 ರಿಂದ 27ರ ವರೆಗೆ ಮೈಸೂರಿನ ಇನ್‌ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ
ಪ್ರಕರಣದಲ್ಲಿ ಬಿ ರಿಪೋರ್ಟ್‌ಗಾಗಿ ಲಂಚ: ಪೊಲೀಸರಿಬ್ಬರು ಲೋಕಾಯುಕ್ತ ಬಲೆಗೆ
ಜಮೀನು ವಿವಾದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಬಂಧಿತ ಆರೋಪಿಗಳು. ಮೊಟ್ಲೂರು ಗ್ರಾಮದ ರಘು ಎಂಬವರ ಜಮೀನು ವಿವಾದಕ್ಕೆ ಸಂಬಂಧಿಸಿದ
ನಾನು ಸ್ಟ್ರೀಟ್ ಫೈಟರ್, ಪ್ರಯತ್ನ ಮಾಡಬೇಕಿಲ್ಲ, ಬರಬೇಕಾದದ್ದು ಬರುತ್ತದೆ ಅಂದ್ರು ಡಿಸಿಎಂ
“ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕು ಎಂದು ನನಗೆ ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ. ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ
ಡಿಸಿಎಂ ಮೇಲೆ ನಿಗಾಕ್ಕೆ ಸಿಎಂ ತಂಡ ರಚನೆ: ವರದಿ ಪ್ರಕಟಿಸಿದ ಮಾಧ್ಯಮ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಆರ್ ಅಶೋಕ
ಸಿಎಂ @siddaramaiah ಅವರೇ, ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಈ ವರದಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ
ಜಿಎಸ್‌ಟಿ ಕಾಯ್ದೆ ದೇಶದ ಸಾರ್ವಭೌಮತೆ ಭಂಗಗೊಳಿಸುವಂತಿರಬಾರದು: ಸ್ಟಾಲಿನ್ ಪತ್ರಕ್ಕೆ ಸಿಎಂ ಪ್ರತಿಕ್ರಿಯೆ
ತಮಿಳುನಾಡು ಸರ್ಕಾರ ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಅಧ್ಯಯನಕ್ಕಾಗಿ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ. ಜಿಎಸ್‌ಟಿ ಕಾಯ್ದೆ ದೇಶದ ಸಾರ್ವಭೌಮತೆ ಭಂಗಗೊಳಿಸುವ ರೀತಿ ಕಾರ್ಯನಿರ್ವಹಿಸಬಾರದು ಎಂದು ಅದರಲ್ಲಿ
ಬೇಹುಗಾರಿಕೆ ವರದಿ: ಪರಿಣಾಮ ಶೂನ್ಯ
ಇಂದಿನ ಗೂಗಲ್ ಮತ್ತು ಎಐ ಯುಗದಲ್ಲಿ ಪರಮ ರಹಸ್ಯ ಎಂಬುದೇ ಬೊಗಳೆ ! ಯಾರು ಏನೇ ಮಾಡಿದರೂ, ಎಲ್ಲೇ ಇದ್ದರೂ ಈ ಮಾಹಿತಿ ಬಹಿರಂಗವಾಗಲು ಕೆಲವೇ ನಿಮಿಷಗಳು ಸಾಕು. ಹೀಗಿರುವಾಗ ಇಂಟಲಿಜೆನ್ಸ್ ರಿಪೋರ್ಟ್‌ಗಳ ಬಗ್ಗೆ ಕಾಂಗ್ರೆಸ್ ಶಾಸಕರು ಬೆದರಿ ಕಂಗಾಲಾಗುವರೆಂಬುದು ಅರ್ಥರಹಿತ
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕುಮಾರಸ್ವಾಮಿ ನೇರ ಕಾರಣ: ಶಾಸಕ ಕದಲೂರು ಉದಯ್
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕೇಂದ್ರ ಸಚಿವರಾಗಿರುವ ಹೆಚ್‌ಡಿ ಕುಮಾರಸ್ವಾಮಿಯವರೇ ಕಾರಣ, ಸಿಡಿ ಹೊರತಂದಿದ್ದೇ ಅವರು. ಷಡ್ಯಂತ್ರ ಮಾಡಿ ಪ್ರಜ್ವಲ್‌ನ ಜೈಲಿಗೆ ಹಾಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ. ಮನಸ್ಸು ಮಾಡಿದ್ದರೆ ದೇವೇಗೌಡರೇ ತಮ್ಮ ಮೊಮ್ಮಗನನ್ನು
ಇರಾನ್‌ನಲ್ಲಿ ದಾಳಿಗೆ ಬಲಿಯಾದ 165 ವಿದ್ಯಾರ್ಥಿನಿಯರ ಅಂತ್ಯಸಂಸ್ಕಾರ
ಇರಾನ್‌ನಲ್ಲಿ ಅಮೆರಿಕ- ಇಸ್ರೇಲ್ ಜಂಟಿ ದಾಳಿಗೆ ಬಲಿಯಾಗಿರುವ 165 ಶಾಲಾ ಬಿದ್ಯಾರ್ಥಿನಿಯರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಘರ್ಷದಿಂದಾಗಿ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದ ನಷ್ಟದೊಂದಿಗೆ




