ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದಾಗಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ, 25 ಮಾರ್ಕ್ಸ್‌ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಕೆಎಎಸ್ 384 ಹುದ್ದೆಗೆ ಹಣ ನೀಡಿರುವ ಅಭ್ಯರ್ಥಿ ಹೆಸರು ಸಮೇತ ಕಾಂತಕುಮಾರ್ ಎಂಬವರು ದೂರು ದಾಖಲಿಸಿದ್ದಾರೆ. ಈ ಅಭ್ಯರ್ಥಿ ಕೆಪಿಎಸ್ಸಿ ಸದಸ್ಯರೊಬ್ಬರ ಜೊತೆ ಸಂಪರ್ಕದಲ್ಲಿದ್ದ ಎಂದು ಆರೋಪಿಸಿದ್ದಾರೆ.
ಸಂದರ್ಶನದಲ್ಲಿ 25 ಮಾರ್ಕ್ಸ್‌ಗೆ ಕೆಪಿಎಸ್ಸಿ ಸದಸ್ಯರೊಬ್ಬರಿಗೆ ಒಂದೂವರೆ ಕೋಟಿ ರೂಪಾಯಿ ನೀಡಲಾಗಿದೆ ಎಂದು ಕಾಂತಕುಮಾರ್ ಆರೋಪಿಸಿದ್ದಾರೆ.
ಆರೋಪಕ್ಕೆ ಪೂರಕವಾಗಿ ಎಷ್ಟು ಸಲ ಅಭ್ಯರ್ಥಿ ಹಾಗೂ ಕೆಪಿಎಸ್ಸಿ ಸದಸ್ಯ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಡಿಆರ್‌ನಲ್ಲಿ ಲಭಿಸಿದೆ. ಎರಡು ತಿಂಗಳ ಹಿಂದೆ ನಡೆದಿದ್ದ ಸಂದರ್ಶನದಲ್ಲಿ ನಾಲ್ಕು ಜನ ಪ್ಯಾನಲ್‌ನಲ್ಲಿ ಇದ್ದರು. ಒಬ್ಬ ಸದಸ್ಯೆ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಪಶುವೈದ್ಯಾಧಿಕಾರಿ ನೇಮಕ ಹಗರಣ ಸಂಬಧ ಸಿಐಡಿ ತನಿಖೆ ತೀವ್ರಗೊಳಿಸಿದೆ. ಸಿಐಡಿ ದಾಳಿ ವೇಳೆ ಪರೀಕ್ಷಾ ದಾಖಲಾತಿ, ಒಎಂಆರ್ ಶೀಟ್, ಸಿಸಿಟಿವಿ ವಶಕ್ಕೆ ಪಡೆಯಲಾಗಿತ್ತು. ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆಂಬ ಆರೋಪ ಹಿನ್ನೆಲೆ ಶೀಟ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ದೂರುದಾರ ಮಂಜುನಾಥ್ ಹೇಳಿಕೆ ದಾಖಲಿಸಿರುವ ಸಿಐಡಿ, ಮಂಜುನಾಥ್ ಮಾಡಿರುವ ಆರೋಪಡಿ ಎಲ್ಲಾ ದಾಖಲಾತಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.


