Menu

ಮದುವೆಗೆ ಐದು ದಿನ ಬಾಕಿ: ಮಂಡ್ಯದಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೈದ ಅಣ್ಣ

ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣನೊಬ್ಬ ಸದ್ಯದಲ್ಲೇ ಮದುವೆಯಾಗಲಿದ್ದ ತಮ್ಮನನ್ನು ಇರಿದು ಕೊಂದಿರುವ  ಘಟನೆ ನಡೆದಿದೆ.  ಯೋಗೇಶ್ (30) ಅಣ್ಣ ಮತ್ತು ಆತನ ಮಕ್ಕಳಿಂದ ಕೊಲೆಯಾದವರು. ಯೋಗೇಶ್‌ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮವಿತ್ತು. ಸಂಬಂಧಿಕರಿಗೆಲ್ಲ ಲಗ್ನಪತ್ರಿಕೆ ಹಂಚಿ ಮದುವೆಯ ತಯಾರಿಯಲ್ಲಿದ್ದ ಯೋಗೇಶ್, ಆಸ್ತಿ ಕಿತ್ತುಕೊಂಡರೂ ದ್ವೇಷ ಸಾಧಿಸದೆ ತನ್ನ ಅಣ್ಣ ಲಿಂಗರಾಜು ಮೇಲಿನ ಗೌರವಕ್ಕೆ ಲಗ್ನಪತ್ರಿಕೆಯಲ್ಲಿ ಆತನ ಹೆಸರನ್ನೂ ಹಾಕಿಸಿದ್ದರು. ಆದರೆ ಅಣ್ಣ

ತುಮಕೂರಿನಲ್ಲಿ ಬಾಲಕಿ ಎದುರೇ ತಂದೆಯ ಕೊಲೆಗೈದಿದ್ದ ಕಳ್ಳರು ಅರೆಸ್ಟ್‌

ತುಮಕೂರಿನಲ್ಲಿ ಮಗಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿಯನ್ನು ಅಪರಿಚಿತ ಮುಸುಕುಧಾರಿಗಳು ಕೊಲೆಗೈದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಮಗನೂ ಭಾಗಿ ಎಂದ ಇಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶದಿಂದ ಪಲಾಯನ ಮಾಡಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಚೋಕ್ಸಿ ಮಗ ರೋಹನ್ ಚೋಕ್ಸಿ ಕೂಡ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯ ಭಾಗಿ ಎಂದು

ಮುಖ್ಯಮಂತ್ರಿ ಸ್ಥಾನ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ: ಡಿಕೆ ಶಿವಕುಮಾರ್

“ಮುಖ್ಯಮಂತ್ರಿ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಸ್ಪಷ್ಟಪಡಿಸಿದ್ದದಾರೆ. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ

ಬೆಂಗಳೂರು ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಪ್ರಧಾನಿ ಸೂಚನೆ

ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದ್ದು, ತ್ವರಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇತ್ತೀಚೆಗೆ ನಡೆಸಿದ ಪ್ರಗತಿ ಸಭೆಯಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎರಡು ಮೆಗಾ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಈ ಸೂಚನೆ

ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಮಗು ಕೊಂದು ಸುಸೈಡ್‌ ಮಾಡಿಕೊಂಡ ತಾಯಿ

ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಜಗಳವಾದ ಬಳಿಕ ಪತ್ನಿಯು ಬೆಂಕಿ ಹಚ್ಚಿ ನಾಲ್ಕು ವರಚದ ಮಗಳನ್ನು ಕೋಮದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಸೀತಾ (29), ಮಗಳು ಸೃಷ್ಟಿ (4) ಮೃತಪಟ್ಟವರು. ಗುರುವಾರ

ಚೀನಾ ಯುದ್ಧ ವೇಳೆ ದೇಶಕ್ಕೆ 600 ಕೆಜಿ ಚಿನ್ನ, 3 ವಿಮಾನ, 90 ಎಕರೆ ಭೂಮಿ ನೀಡಿದ್ದ ರಾಣಿ ಕಾಮಸುಂದರಿ ದೇವಿ ಇನ್ನಿಲ್ಲ

1962ರಲ್ಲಿ ಭಾರತ- ಚೀನಾ ಯುದ್ಧ ನಡೆಯುವ ವೇಳೆ ದೇಶದ ರಕ್ಷಣೆಗಾಗಿ 600 ಕೆಜಿ ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ. ಮಹಾರಾಜ ದಿ. ಕಾಮೇಶ್ವರ ಸಿಂಗ್‌ ಅವರ

ಹುಡುಗರಂತೆ ಡ್ರೆಸ್‌ ಮಾಡಿ ಮನೆ ಕಳವು ಮಾಡುತ್ತಿದ್ದ ಯುವತಿಯರಿಬ್ಬರು ಅರೆಸ್ಟ್‌

ಹುಡುಗರ ಸ್ಟೈಲ್‌ನಲ್ಲೇ ಶರ್ಟ್​, ಪ್ಯಾಂಟ್ ಧರಿಸಿ ಹಗಲು ವೇಳೆಯೇ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಯುವತಿಯರಿಬ್ಬರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಅವರನ್ನು ಬಂಧಿಸಿದ ಬಳಿಕವೇ ಅವರು ಹುಡುಗರಲ್ಲ ಹುಡುಗಿಯರು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಈ ಯುವತಿಯರು ವೇಷ ಬದಲಿಸಿಕೊಂಡು ಬೆಂಗಳೂರು ಹೊರವಲಯದ

ಎರಡು ವರ್ಷ ರಾಜ್ಯದಲ್ಲಿ ವಾಸವಿದ್ರೆ ಹೊರ ರಾಜ್ಯದವರಿಗೂ ಬಿಡಿಎ ಮನೆ, ಫ್ಲ್ಯಾಟ್‌, ಸೈಟ್‌ ?

ನಿವೇಶನ, ಮನೆ, ಪ್ಲ್ಯಾಟ್ ಹಂಚಿಕೆಯ ನಿಯಮಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಾವಣೆ ಮಾಡಿದ್ದು, ಎರಡು ವರ್ಷ ರಾಜ್ಯದಲ್ಲಿ ವಾಸವಿದ್ದರೆ ಇನ್ನು ಮುಂದೆ ಹೊರ ರಾಜ್ಯದವರೂ ಬಿಡಿಎ ಸೈಟ್‌, ಮನೆ, ಫ್ಲ್ಯಾಟ್‌ ಪಡೆಯಬಹುದಾಗಿದೆ. ಈ ಹಿಂದೆ ಬಿಡಿಎ ಸೈಟ್‌ ಪಡೆಯಬೇಕಾದರೆ 10 ವರ್ಷ

ರಾಸಾಯನಿಕ ಬೆರಸಿ ನಕಲಿ ಹಾಲು ತಯಾರಿ: ಐವರ ಬಂಧನ

ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಕೆಜಿಎಫ್ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಬಂಧಿತರು ಎಂದು ಗುರುತಿಸಲಾಗಿದೆ. ಈ ಗ್ಯಾಂಗ್‌ ಕೆಜಿಎಫ್ ತಾಲೂಕಿನ