Wednesday, September 23, 2026
Menu

ದಾವಣಗೆರೆಯಲ್ಲಿ ಮಗುವಿಗೆ ಜನ್ಮ ನೀಡಿ ತಾಯಿ ಸಾವು

ದಾವಣಗೆರೆಯ ನ್ಯಾಮತಿ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಮೃತಪಟ್ಟಿರುವ ಘಟನೆ ನಡೆದಿದೆ. ಮಲ್ಲಿಗೆಹಳ್ಳಿ ಗ್ರಾಮದ ಗುಣವತಿ (36) ಮೃತಪಟ್ಟ ತಾಯಿ.

ಗುಣವತಿ ನ್ಯಾಮತಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ತೊಂದರೆ ಕಾಣಿಸಿತ್ತು, ಆಕೆಯನ್ನು ಶಿವಮೊಗ್ಗದ ಮೆಗ್ಗನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸುವ ವೇಳೆಗೆ ಮೃತಪಟ್ಟಿದ್ದರು.ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳ್ಳದ ನೀರಲ್ಲಿ ಮುಳುಗಿ ಮಕ್ಕಳ ಸಾವು

ಕನಕಪುರ ತಾಲೂಕಿನ ಗುಣಗನಹಳ್ಳಿ ಗ್ರಾಮದಲ್ಲಿ ಆಟವಾಡಲೆಂದು ತೋಟಕ್ಕೆ ಹೋಗಿದ್ದ ಮಕ್ಕಳಿಬ್ಬರು ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮದ ಶ್ರೀನಿವಾಸ್ ಹಾಗೂ ಪದ್ಮಾವತಿ ಪುತ್ರ ಮಧು (14) ಹಾಗೂ ನಾರಾಯಣ್-ಮಾಧುರಿ ಪುತ್ರ ಶ್ರೀಹರಿ (8) ಮೃತಪಟ್ಟ ಮಕ್ಕಳು.

ಮಳೆಯಿಂದ ಗ್ರಾಮದ ಹೊರವಲಯದ ಹಳ್ಳ ತುಂಬಿತ್ತು. ತೋಟಕ್ಕೆ ಆಟವಾಡಲು ಹೋಗಿದ್ದ ಮಕ್ಕಳು ಹಳ್ಳದಲ್ಲಿ ಈಜಾಡುವಾಗ ಮುಳುಗಿದ್ದಾರೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *