ಶಿವಮೊಗ್ಗದಲ್ಲಿ ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಗರದ ಜೇನು ಕುಮಾರ್ ಮೃತಪಟ್ಟವರು.
ಸೆಪ್ಟಂಬರ್ ಎಂಟರಂದು ಜೇನು ಕುಮಾರ್ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಅಡಿಕೆ ಹೊರತೆಗೆದು ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆ ಏರಿದ್ದಾಗ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದರು.
ಪಕ್ಕದಲ್ಲಿಯೇ ಇದ್ದ ಇತರ ಮೂವರು ಅವರನ್ನು ಮೇಲಕ್ಕೆತ್ತಿದ್ದರು. ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಫಲಿಸದೆ ಅಸು ನೀಗಿದ್ದಾರೆ.
ಪೂಜೆಗಾಗಿ ನೀರು ತರಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಸಾವು
ಕೃಷಿ ವಿಜ್ಞಾನಿ ಡಾ. ಮಂಜುನಾಥ ನಾಯ್ಕ(65) ರು ಗಣೇಶ ಹಬ್ಬದ ಪೂಜೆಗಾಗಿ ನೀರು ತರಲು ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮಂಜುನಾಥ ಅವರು ಗಣೇಶ ಹಬ್ಬಕ್ಕೆ ಊರಿಗೆ ಹೋಗಿದ್ದರು. ಪೂಜೆಗೆ ನೀರು ತರಲೆಂದು ಹೋದಾಗ ಬಾವಿಗೆ ಬಿದ್ದು ಮೃತ ಪಟ್ಟಿದ್ದಾರೆ.
ಉತ್ತನ ಕನ್ನಡದ ಕುಮಟಾ ತಾಲೂಕಿನ ಕೋನಳ್ಳಿ ಗ್ರಾಮದ ಮಂಜುನಾಥ ಅವರು, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿ
ಕಾರ್ಯನಿರ್ವಹಿಸಿದ್ದರು.


