Thursday, September 17, 2026
Menu

ಕೃಷ್ಣಾ ನದಿಗೆ ಉರುಳಿದ್ದ ಟಿಪ್ಪರ್‌ ಒಳಗೆ ಚಾಲಕನ ಶವ ಪತ್ತೆ

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜ್ಯದ ಅತಿ ಉದ್ದದ ಕೊರ್ತಿ–ಕೋಲ್ಹಾರ ಸೇತುವೆ ಮೇಲೆ ಮೂರು ದಿನಗಳ ಹಿಂದೆ  ಟಿಪ್ಪರ್ ಮತ್ತು ಕಾರು ಡಿಕ್ಕಿಯಾಗಿ  ನಿಯಂತ್ರಣ ತಪ್ಪಿದ ಟಿಪ್ಪರ್  ಕೃಷ್ಣಾ ನದಿಗೆ ಬಿದ್ದಿತ್ತು.  ಆ ಟಿಪ್ಪರ್‌ ಅನ್ನು ಕ್ರೇನ್‌  ಮೂಲಕ ಮೇಲಕ್ಕೆ ಎತ್ತಲಾಗಿದ್ದು, ಒಳಭಾಗದಲ್ಲಿ ಚಾಲಕನ ಶವ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ  ಬಾಗಲಕೋಟೆ ಜಿಲ್ಲೆಯ ಬೀಳಗಿಯಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್‌ ನದಿಗೆ ಉರುಳಿದ್ದು,  ಪೋಲಿಸರು ಮತತು ಅಗ್ನಿಶಾಮಕ ದಳದ ಸಿಬ್ಬಂದಿ  ಶೋಧ

ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ನೋಂದಣಿ ಸಮಸ್ಯೆ ದೊಡ್ಡದಾಗಿದೆ: ಎಂಎಲ್ಸಿ ರವಿಕುಮಾರ್ ಕಿಡಿ

ರಾಜ್ಯದಲ್ಲಿ ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ರಿಜಿಸ್ಟ್ರೆಷನ್ ಸಮಸ್ಯೆ ದೊಡ್ಡದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ರೆಜಿಸ್ಟ್ರೆಷನ್ ದೇಶದಲ್ಲಿ ನಂ 1 ಸಮಸ್ಯೆ ಆಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬರಗಾಲ ಆವರಿಸಿದೆ,

ಪೆರೇಸಂದ್ರ ಕ್ವಾರಿಯಲ್ಲಿ ಡ್ರಿಲ್ಲಿಂಗ್ ವೇಳೆ ಸ್ಫೋಟಕ್ಕೆ ಕಾರ್ಮಿಕ ಬಲಿ

ಚಿಕ್ಕಬಳ್ಳಾಪುರದ ಪೆರೇಸಂದ್ರ ಸಮೀಪದ ಹಿರೇನಗವಳ್ಳಿ ಬೆಟ್ಟದಲ್ಲಿರುವ ಎಕೋ ಸ್ಯಾಂಡ್ ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಧರ್ಮಾವರಂನ 35 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕಾರ್ಯ ನಡೆಯುತ್ತಿದ್ದ ವೇಳೆ

ರೈತರ ಸಾಂಪ್ರದಾಯಿಕ ಕೃಷಿಜ್ಞಾನಕ್ಕೆ ವಿವಿ ಸರ್ಟಿಫಿಕೇಟ್, ದೇಶದಲ್ಲೇ ಮೊದಲ ಪ್ರಯೋಗ: ಸದ್ಗುರು ಶ್ರೀ ಮಧುಸೂದನ ಸಾಯಿ 

ಸಾಂಪ್ರದಾಯಿಕ ಕೃಷಿಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಆಧರಿಸಿ ರಾಜ್ಯದ ರೈತರಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂಲಕ ಪ್ರಮಾಣಪತ್ರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ‘ಒಂದು ಜಗತ್ತು ಒಂದು ಕುಟುಂಬ’ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ

ಅನೈತಿಕ ಸಂಬಂಧ ಶಂಕೆ: ಪತ್ನಿಯ ಕೊಲೆಗೈದ ಪತಿ

ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ಪತ್ನಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ರಶ್ಮಿ ಕೊಲೆಯಾದ ಮಹಿಳೆ, ಆಕೆಯ ಪತಿ ಆಲಗೂಡು ಗ್ರಾಮದ ರಮೇಶ್ ಕೊಲೆ ಆರೋಪಿ, ಕಳೆದ ಕೆಲವು

ಯುಟ್ಯೂಬರ್‌ಗಳಿಂದ ಬ್ಲ್ಯಾಕ್‌ಮೇಲ್ : ರೌಡಿ ಶೀಟರ್‌ಗೆ ಸೇರಿಸುವ ಎಚ್ಚರಿಕೆಯಿತ್ತ  ಬೆಳಗಾವಿ ಎಸ್ಪಿ ಕೆ. ರಾಮರಾಜನ್

ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ರೈತರು ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕರಪ್ಟ್ ಜಾಲಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕೇವಲ

ಉಗಾಂಡಾದಲ್ಲಿ ವಿಜಯನಗರದ ಮಹಿಳೆ ಆತ್ಮಹತ್ಯೆ: ಮೃತದೇಹ ತರಿಸಲು ನೆರವಾದ ಸಿರಿಗೆರೆ ಶ್ರೀ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಮಹಿಳೆ ಉಗಾಂಡಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಂದು ಎಚ್. ಅಜ್ಜೋಳ (22) ಆತ್ಮಹತ್ಯೆ ಮಾಡಿಕೊಂಡವರು. ಬಿಂದು ಮತ್ತು ಚಂದ್ರಶೇಖರ್ ಪ್ರೀತಿಸಿ 2025ರ ಜೂನ್ 7 ರಂದು ಮದುವೆಯಾಗಿದ್ದರು. ಬಳಿಕ ಉಗಾಂಡದ ಖಾಸಗಿ

ತಾವರೆಕೆರೆ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರ ಸಾವು

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರದ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಕಾವೇರಿ ಕ್ರಷರ್​​ನಲ್ಲಿ ಈ ದುರಂತ ಸಂಭವಿಸಿದ್ದು, ಬಂಡೆ ಕೆಳಗೆ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.  ಬೆಳಗ್ಗೆ

ಮಳೆ ಕೊರತೆ: ಪ್ರತಿ ಜಿಲ್ಲೆಗೆ ಐದು ಕೋಟಿ ರೂ. ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ

ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಪ್ರತಿ ಜಿಲ್ಲೆಗೆ ೫ ಕೋಟಿ ರೂ.  ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ಹೇಳಿದ್ದಾರೆ. ಬೆಳಗಾವಿಯಲ್ಲಿ

ದಪ್ಪಗಿದ್ದಾಳೆ, ಮಗುವಾಗಲ್ಲವೆಂದು ನವಲಗುಂದದಲ್ಲಿ ಪತ್ನಿಯ ಕೊಲೆಗೈದ ಪತಿ

ದಪ್ಪಗಿದ್ದಾಳೆಂಬ ಕಾರಣಕ್ಕೆ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಧಾರವಾಡ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಪತಿ ಬಸವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ದಪ್ಪಗಿದ್ದಾಳೆ, ಆಕೆಗೆ ಮಗು ಆಗಲ್ಲ ಎಂದು ದೂಷಿಸುತ್ತಿದ್ದ ಪತಿ ವರದಕ್ಷಿಣೆ