Thursday, October 15, 2026
Menu

ನಾರಾಯಣಪುರ ಡ್ಯಾಂನಿಂದ ಕೃಷ್ಣೆಗೆ 1.40 ಲಕ್ಷ ಕ್ಯೂಸೆಕ್‌ ನೀರು

ನಾರಾಯಣಪುರ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ಕೃಷಾ ನದಿ ತುಂಬಿ ಹರಿಯುತ್ತಿದೆ. ದೇವದುರ್ಗದ ಹೂವಿನಹಡಗಲಿ ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೊಯ್ನಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಒಳಹರಿವು ಇದ್ದು, ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಮ್‌ನಿಂದ ನೀರು ಬಿಡುಗಡೆ ಮಾಡಿರುವುದರಿಂದ

ಬಿಡದಿ ರೈತರ ಒಪ್ಪಿಗೆಯಿದ್ದರೆ ಭೂಮಿ ತೆಗೆದುಕೊಳ್ಳಿ: ನಿಖಿಲ್‌ ಕುಮಾರಸ್ವಾಮಿ

ರೈತರ ಭಾವನೆಗಳ ವಿರುದ್ದ ಸರಕಾರ ಹೋಗುತ್ತಿದೆ,  ಬಿಡದಿಯಲ್ಲಿ 9 ರೆವೆನ್ಯೂ ಗ್ರಾಮಗಳಿದ್ದು, 26 ಹಳ್ಳಿಗಳು ಬರುತ್ತವೆ. ಶೇ. 80  ರೈತರಿಂದ ಒಪ್ಪಿಗೆ ಪಡೆದಿದ್ದೇವೆಂದು ಸರಕಾರ ಹೇಳುತ್ತಿದೆ. ಆದರೆ ಇಲ್ಲಿನ ಶೇ. 90 ರಿಂದ 95  ಜನ ರೈತರು ಸರಕಾರಕ್ಕೆ ಭೂಮಿ ನೀಡಿಲ್ಲ.

ಹೈಕಮಾಂಡ್ ಅನುಮತಿ ಕೊಟ್ಟಾಗ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ: ಸಚಿವ ಯತೀಂದ್ರ

ಸಚಿವ ಸಂಪುಟ ವಿಸ್ತರಣೆಗೆ ನಮ್ಮ ಹೈಕಮಾಂಡ್ ಅನುಮತಿ ಕೊಟ್ಟಾಗ ನಮ್ಮ ನಾಯಕರು ಹೋಗಿ ತೀರ್ಮಾನ ಮಾಡುತ್ತಾರೆ‌ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು, ಅವರು

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ, ನೆಪ ಕೇಳಲು ನಾನು ಸಿದ್ಧನಿಲ್ಲ: ಸಿಎಂ ವಾರ್ನ್‌

ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.  ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕ  ಭಾಷಣ ಮಾಡಿದ ಸಿಎಂ ಅವರು, ಜನಪರ

ಎಸ್ಟಿ ಸಮುದಾಯದ ತಳವಾರ, ನಾಯ್ಕಡ್ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ: ಸಿಎಂಗೆ ಮನವಿ

ಎಸ್‌ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕಲಬುರಗಿಯಲ್ಲಿ  ನವ ಕರ್ನಾಟಕ ರೈತ ಸಂಘದ

SIR ಲೋಪದ ಬಗ್ಗೆ ದೂರು: ಬಿಜೆಪಿಯ ಹೊಸ ನಾಟಕವೆಂದ ಪ್ರಿಯಾಂಕ್‌ ಖರ್ಗೆ 

ಎಸ್ ಐಆರ್ ಲೋಪದ ಬಗ್ಗೆ ದೂರು ಕೊಟ್ಬಿದ್ದು, ಬಿಜೆಪಿಯ ಮತ್ತೊಂದು ಹೊಸ ನಾಟಕ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ‌ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿದ್ದೆ ಬಿಜೆಪಿ. ಆಮೇಲೆ

ಯುವ ಕರ್ನಾಟಕ ನಿರ್ಮಾಣ ಯೋಜನೆಗೆ ಸಿಎಂ ಸಿದ್ಧತೆ: ಪ್ರಿಯಾಂಕ್‌ ಖರ್ಗೆ

ಯುವ ಕರ್ನಾಟಕದ ನಿರ್ಮಾಣ ಸರ್ಕಾರದ‌ ಸಂಕಲ್ಪವಾಗಿದೆ. ಮುಂದಿನ ಭವಿಷ್ಯ ಯುವಕರ ಕೈಯಲ್ಲಿ ಇರುವುದರಿಂದಾಗಿ ಯುವಕರಿಗಾಗಿ ಯೋಜನೆಗಳನ್ನು ತರಲು ಸಿಎಂ ಡಿಕೆಶಿವಕುಮಾರ್ ಮುಂದಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ನೋಂದಣಿ ಸಮಸ್ಯೆ ದೊಡ್ಡದಾಗಿದೆ: ಎಂಎಲ್ಸಿ ರವಿಕುಮಾರ್ ಕಿಡಿ

ರಾಜ್ಯದಲ್ಲಿ ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ರಿಜಿಸ್ಟ್ರೆಷನ್ ಸಮಸ್ಯೆ ದೊಡ್ಡದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ರೆಜಿಸ್ಟ್ರೆಷನ್ ದೇಶದಲ್ಲಿ ನಂ 1 ಸಮಸ್ಯೆ ಆಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬರಗಾಲ ಆವರಿಸಿದೆ,

6.62 ಕೋಟಿ ರೂ. ಗೋಲ್ಮಾಲ್: ಡೆತ್‌ನೋಟ್ ಬರೆದಿಟ್ಟು ಬ್ಯಾಂಕ್‌ ಅಧ್ಯಕ್ಷ ಸುಸೈಡ್‌

ಯಾದಗಿರಿಯ ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಸನಗೌಡ ಪಾಟೀಲ ಮೂರು ಪುಟಗಳ ಡೆತ್‌ನೋಟ್‌ ಬರೆದು, ವೀಡಿಯೊ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸಹಕಾರ ಬ್ಯಾಂಕ್‌ನಲ್ಲಿ 6.62 ಕೋಟಿ ರೂ. ಗೋಲ್ಮಾಲ್ ಆರೋಪ ಎದುರಿಸುತ್ತಿದ್ದ ಅಧ್ಯಕ್ಷ ಬಸವನಗೌಡ ಶಹಪುರ ನಿವಾಸದಲ್ಲಿ ನೇಣು ಬಿಗಿದುಕೊಂಡು

ಕಲಬುರಗಿಯಲ್ಲಿ ತೆರಿಗೆ ಇಲಾಖೆ ಅಧಿಕಾರಿಯ ಮಗ ಸುಸೈಡ್‌

ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯ ಪುತ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಾನಸ ಲೇಔಟ್ ನಲ್ಲಿರುವ ಮನೆಯಲ್ಲಿ ನಡೆದಿದೆ. ಕೃಷ್ಣ ಪಾಟೀಲ್ ( 25 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಭಾರತಿ- ಅಪ್ಪಾರಾವ್ ಮಾಲಿಪಾಟೀಲ್ ಪುತ್ರ