Menu

ಹೈಕಮಾಂಡ್ ಅನುಮತಿ ಕೊಟ್ಟಾಗ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ: ಸಚಿವ ಯತೀಂದ್ರ

ಸಚಿವ ಸಂಪುಟ ವಿಸ್ತರಣೆಗೆ ನಮ್ಮ ಹೈಕಮಾಂಡ್ ಅನುಮತಿ ಕೊಟ್ಟಾಗ ನಮ್ಮ ನಾಯಕರು ಹೋಗಿ ತೀರ್ಮಾನ ಮಾಡುತ್ತಾರೆ‌ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು, ಅವರು ಯಾವಾಗ ಹೇಳ್ತಾರೋ ಆಗ ನಮ್ಮ ನಾಯಕರು ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.

ಇಡೀ ರಾಜ್ಯದಲ್ಲಿ ಮಳೆ ಕೊರತೆ ಆಗಿದೆ. ಸಿಎಂ ಅವರು ರಾಜ್ಯದಲ್ಲಿ ಸಂಚಾರ ನಡೆಸಿ ಬರ ಪರಿಸ್ಥಿತಿ ಬಗ್ಗೆ ಸಭೆ ನಡೆಸ್ತಿದ್ದಾರೆ. ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗ್ತಿದೆ.ಕುಡಿಯುವ ನೀರು, ಮೇವು ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.ಕುಡಿಯುವ ನೀರಿನ ಅಭಾವ ಇದ್ದಕಡೆ ಕೊಳವೆ ಬಾವಿ ಬಾಡಿಗೆ ಪಡೆಯಲು, ಕೊಳೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ.ಹೆಚ್ಚು ನೀರು ಬೇಕಾಗುವ ಬೆಳೆಗಳನ್ನ ಬೆಳೆಸದಂತೆ ರೈತರಿಗೆ ಸೂಚನೆ ನೀಡಿದ್ದೇವೆ. ಬರ  ಮುಂದುವರಿಯುವ ಮಾಹಿತಿ ಇದೆ ಎಂದರು.

ಬರ ನಿರ್ವಹಣೆಗೆ ಸಿಎಂ ಅವರು ಪ್ರತಿ ಕ್ಷೇತ್ರಕ್ಕೆ 1 ಕೋಟಿ ಅನುದಾನ ಕೊಟ್ಟಿದ್ದಾರೆ. ಬರ ಎದುರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *