Menu

ಬಬಲೇಶ್ವರದಲ್ಲಿ ಜೆಟ್‌ ವಿಮಾನ ಪತನ

ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನವೊಂದು ಭಾನುವಾರ ಪತನಗೊಂಡಿದೆ. ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಇಂಧನ ಖಾಲಿಯಾದ ಕಾರಣ ವಿಮಾನ ಪತನಗೊಂಡಿದೆ ಎಂಬುದಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ತಾಂತ್ರಿಕ ದೋಷದಿಂದ ಜೆಟ್‌ ಉರುಳಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ರೆಡ್ ಬರ್ಡ್‌ ಕಂಪನಿಯ ಖಾಸಗಿ ಕಂಪನಿಯ ವಿಮಾನ ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ   ಪೈಲಟ್‌ ಗೌತಮ್‌ ಮತ್ತು ಸಿಬ್ಬಂದಿ  ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ

ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಬಾಲಕ ಆತ್ಮಹತ್ಯೆ

ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಮನ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪವನ್ (15) ಆತ್ಮಹತ್ಯೆ ಮಾಡಿಕೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿ.

ಟ್ರ್ಯಾಕ್ಟರ್‌ ಚಲಿಸುವಾಗ ರೀಲ್ಸ್‌ ಮಾಡುತ್ತಿದ್ದ ಚಾಲಕ ಚಕ್ರಕ್ಕೆ ಸಿಲುಕಿ ಸಾವು

ಕಲಬುರಗಿಯ ಕಮಲಾಪುರ ತಾಲೂಕಿನ ಮಹಾಗಾಂವದಲ್ಲಿ ಟ್ರ್ಯಾಕ್ಟರ್‌ ಚಲಿಸುವಾಗ ರೀಲ್ಸ್‌ ಮಾಡುತ್ತಿದ್ದ ಚಾಲಕ ಅದೇ ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಮಹಾಗಾಂವ ಗ್ರಾಮದ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ ಎಂದು ಗುರುತಿಸಲಾಗಿದೆ. ಗ್ರಾಮದ ಕಬ್ಬಿನ ಗದ್ದೆಯಲ್ಲಿ ಟ್ರ್ಯಾಕ್ಟರ್‌ನಿಂದ

ಮಲ್ಲಿಕಾರ್ಜುನ ಖರ್ಗೆ, ಧರ್ಮಂ ಸಿಂಗ್‌ರಿಂದ 371 ಜೆ ಜಾರಿಯಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಸಿಎಂ

ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಂ ಸಿಂಗ್ ಅವರು ಇಲ್ಲದೇ ಹೋಗಿದ್ದರೆ 371 ಜೆ ಜಾರಿಯಾಗುತ್ತಿರಲಿಲ್ಲ . 371 ಜೆ ಕಾಯ್ದೆಯಿಂದಾಗಿ ಈ ಭಾಗದಲ್ಲಿ ಹತ್ತು ಸಾವಿರ ವೈದ್ಯರು, 30, 000 ಇಂಜಿನಿಯರ್ ಗಳು , 12,000 ಜನ ದಂತ ವೈದ್ಯರು ಹಾಗೂ

ಯಡ್ರಾಮಿಯಲ್ಲಿ ಪ್ರಜಾ ಸೌಧಕ್ಕೆ ನಾಳೆ ಸಿಎಂ ಅಡಿಗಲ್ಲು: ಡಾ.ಅಜಯ ಸಿಂಗ್

ಯಡ್ರಾಮಿಯಲ್ಲಿ ಪ್ರಜಾ ಸೌಧಕ್ಕೆ  ಅಡಿಗಲ್ಲು ಸೇರಿದಂತೆ ಅಭಿವೃದ್ಧಿ  ಕಾಮಗಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ  ಸೋಮವಾರ  ಪಟ್ಟಣಕ್ಕೆಭೇಟಿ ನೀಡಲಿದ್ದು,ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದ್ದಾರೆ. ಪಟ್ಟಣದ ಮಹಿಬೂಬ್ ಸುಭಾನಿ

ದೆವ್ವದ ಹೆಸರಲ್ಲಿ ಹೊಡೆದು ಮಗನ ಎದುರೇ ಕಲಬುರಗಿ ಮಹಿಳೆಯ ಹತ್ಯೆಗೈದ ಪತಿ ಮನೆಯವರು

ದೆವ್ವ ಹಿಡಿದಿದೆ ಎಂದು ಹೇಳಿಕೊಂಡು ಕಲಬುರಗಿಯ ಮಹಿಳೆಗೆ ಆಕೆಯ ಗಂಡನ ಮನೆಯವರು ಮಗನ ಎದುರಲ್ಲೇ ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಕೊಲೆಯಾದ ಮಹಿಳೆ ಕಲಬುರಗಿ ಆಳಂದ

ಮೊಬೈಲ್‌ ಬಳಸ್ಬೇಡಿ ಅಂದಿದ್ದಕ್ಕೆ ರಾತ್ರಿಯೇ ಬಾಗಲಕೋಟೆ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರು ಎಸ್ಕೇಪ್‌

ಬಾಗಲಕೋಟೆಯ ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಹಾಸ್ಟೆಲ್​ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಪರಾರಿಯಾಗಿದ್ದಾರೆ. ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ತಕ್ಷಣ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡು ವಿಜಯಪುರದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ. ನವನಗರದ ಮೊರಾರ್ಜಿ

ಗಂಡು ಮಗುವಿಗೆ ಹಂಬಲ: ವಿಜಯಪುರದಲ್ಲಿ ಮಾಟಗಾತಿ ಸಲಹೆಯಂತೆ ರಕ್ತ ಬರುವಂತೆ ಪತ್ನಿಯ ಕೂದಲು ಕಿತ್ತ ಗಂಡ

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಗಂಡು ಮಗು ಬೇಕೆಂದು ಬಯಸುತ್ತಿದ್ದ ವ್ಯಕ್ತಿ ಮಾಟಗಾತಿಯ ಮಾತು ಕೇಳಿ ಪತ್ನಿಯ ನೆತ್ತಿಯಲ್ಲಿ ರಕ್ತ ಬರುವಂತೆ ಬಲವಂತವಾಗಿ ಕೂದಲನ್ನು ಕತ್ತರಿಸಿರುವ ಘಟನೆ ನಡೆದಿದೆ. ದುಂಡೇಶ್‌ ಮತ್ತು ಜ್ಯೋತಿ ದಳವಾಯಿ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ನಾಲ್ಕನೇಯದಾಗಿ

ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ ಇನ್ನಿಲ್ಲ

ಬಾಗಲಕೋಟೆಯ ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಸ್ವಾಮೀಜಿ ನಿಧನಾರದರು. ಅವರಿಗೆ ೭೫ ವರ್ಷ ಆಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯನ್ನು ನಾಲ್ಕು ದಿನದ ಹಿಂದೆ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ನಿಧನರಾಗಿದ್ದಾರೆ. ದಾಸೋಹ

ಸಂಬಂಧಿಕನಿಂದ ಅತ್ಯಾಚಾರ: ಅಪ್ರಾಪ್ತ ವಯಸ್ಕ ಬಾಲಕಿ ಗರ್ಭಿಣಿ

ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಸಂಬಂಧಿಯಾಗಿರುವ  ವ್ಯಕ್ತಿ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗಗೊಂಡಿದೆ. ಬಾಲಕಿಯನ್ನು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ಯಾದಗಿರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ