ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ಸಾಕಷ್ಟು ಜನ ಸಿಲುಕಿದ್ದಾರೆ. ನೂರಾರು ಕೊಚ್ಚಿಕೊಂಡು ಹೋಗಿದ್ದಾರೆ, ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ್ತೆತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರಿಗೆ ಪರಹಾರ ಕೊಡಬೇಕು. ನೇಪಾಳದ ಜೊತೆಗೆ ನಿಲ್ಲುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದರು.
ನೇಪಾಳದಲ್ಲಿ ಭೀಕರ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಲಬುರಗಿ ಜಿಲ್ಲೆಯ ಇಬ್ಬನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ , ಸಂಗಮೇಶ್ ಕನಕಪುರ ಸುರಕ್ಷಿತವಾಗಿದ್ದಾರೆ. ಇಬ್ಬರನ್ನೂ ಸಂಪರ್ಕಿಸಿದ ವಿಪತ್ತು ನಿರ್ವಹಣಾ ಸಂಸ್ಥೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ನೇಪಾಳದಿಂದ ದೆಹಲಿ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಿಂದ ವೀಡಿಯೋ ಮೂಲಕ ಇವರಿಬ್ಬರಲ್ಲಿ ಮಾತನಾಡಿ ಧೈರ್ಯ ತುಂಬಿದ್ದಾರೆ.
ಇವರಿಬ್ಬರು ಸೇರಿದಂತೆ ಆಗಷ್ಟ್ 21 ರಂದು ಹೈದರಾಬಾದ್ನಿಂದ ಒಟ್ಟು 23 ಜನ ಮಾನಸ ಸರೋವರರಕ್ಕೆ ತೆರಳಿದ್ದರು. ಕಂಠ್ಮಂಡುವಿನಿಂದ ಮಾನಸ ಸರೋವರರಕ್ಕೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. ಏಕಾಏಕಿ ಪ್ರವಾಹ ಉಂಟಾಗಿದೆ. ಮಲ್ಲಿನಾಥ್ ಮತ್ತು ಸಂಗಮೇಶ ಇಬ್ಬರು ಕಠ್ಮಂಡುವಿನಲ್ಲಿ ಸುರಕ್ಷಿತವಾಗಿದ್ದಾರೆ. ಸುರಕ್ಷಿತವಾಗಿ ಕರೆತರಲು ಕೇಂದ್ರದ ಜೊತೆ ಜಿಲ್ಲಾಡಳಿತ ಸಂಪರ್ಕದಲ್ಲಿದೆ.
ಸಂಪುಟ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆಯವರು, ನಿಮಗೇನಾದ್ರು ಗೊತ್ತಿದ್ದರೆ ಹೇಳಿ. ನನಗೇನು ಗೊತ್ತಿಲ್ಲ. ಸಿಎಂ ದೆಹಲಿ ಭೇಟಿ ಹೋಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಾನು ಕಲಬುರಗಿಯಲ್ಲಿ ಇದ್ದೇನೆ. ಏನಾದರೂ ವಿಷಯ ಬರಬೇಕಾದರೆ ನನ್ನ ಬಳಿಯೇ ಬರಬೇಕು. ಯಾವುದೇ ಫೈಲ್ ನನ್ನ ಬಳಿ ಬಾರದೆ ಹೋಗುವುದಿಲ್ಗೊಲ. ಯಾರನ್ನು ಸೇರಿಸಬೇಕು, ಯಾರನ್ನು ತೆಗೆಯಬೇಕಾದರೂ ನನ್ನ ಬಳಿ ಬರಬೇಕು. ಹಾಗೆ ನನ್ನ ಬಳಿ ಫೈಲ್ ಬಂದಾಗ ನಿಮಗೆ ತಿಳಿಸುಳುತ್ತೆನೆ ಎಂದು ಹೇಳಿದರು.


