ಖಾಸಗಿ ಫೋಟೊ, ವೀಡಿಯೊ ಇಟ್ಕೊಂಡು ಮೇಕಪ್ ಕ್ಲಿನಿಕ್ ಮಾಲೀಕರೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಯುವತಿ 1.5 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಎಂಬವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕ್ಲಿನಿಕ್ ಪ್ರಮೋಶನ್ ಸಂಬಂಧ ಕಾರ್ತಿಕ್ ಅವರು ಸಾಧನಾ ಶೆಟ್ಟಿಯನ್ನು ಭೇಟಿ ಮಾಡಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿ ಖಾಸಗಿ ಫೋಟಟೊ, ವೀಡಿಯೊಗಳನ್ನು ಸಾಧನಾ ಶೆಟ್ಟಿ ಇಟ್ಟುಕೊಂಡಿದ್ದರು. ಎಲ್ಲ ಆದ ಬಳಿಕ 1.5 ಕೋಟಿ ರೂ. ಕೊಡದಿದ್ದರೆ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರಂಭದಲ್ಲಿ ಭಯಪಟ್ಟಿದ್ದ ಕಾರ್ತಿಕ್ ಆನ್‌ಲೈನ್ ಮೂಲಕ 5 ಲಕ್ಷ ರೂ., ನಗದು ರೂಪದಲ್ಲಿ 5 ಲಕ್ಷ ರೂ. , ಆಪಲ್ ಫೋನ್ ನೀಡಿದ್ದಾರೆ. ಮತ್ತೂ 1.5 ಕೋಟಿ ರೂ. ಕೊಡುವಂತೆ ಸಾಧನಾ ಶೆಟ್ಟಿ ಕೇಳಿದ್ದು, ಹಣ ಕೊಡದಿದ್ದಾಗ ಪೋಟೊ, ವೀಡಿಯೊಗಳನ್ನು ಕಾರ್ತಿಕ್ ಹೆಂಡತಿಗೆ ವಾಟ್ಸಾಪ್ ಮಾಡಿದ್ದರು. ಇದರಿಂದ ಮನೆಯಲ್ಲಿ ಜಗಳ ಶುರುವಾಗಿತ್ತು. ಕಾರ್ತಿಕ್ ಜಯನಗರ ಪೊಲೀಸ್ ಠಾಣೆಎ ದೂರು ನೀಡಿದ್ದಾರೆ.
ವಿಚಾರಣೆಗೆ ಬರುವಂತೆ ಸಾಧನಾ ಶೆಟ್ಟಿಗೆ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆ ವೇಳೆ ನನ್ನ ಬಳಿ ಯಾವುದೇ ವೀಡಿಯೊ ಇಲ್ಲ ಎಂದು ಅವರು ತಿಳಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


