ಕೊಪ್ಪಳ ಜಿಲ್ಲೆಯ ಬಾಲಕ ತೇಜಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಸಾಧಾರಣ ಏಕಾಗ್ರತೆ ಮತ್ತು ವೇಗದ ಮೂಲಕ ಭಾರತದ ನಕಾಶೆಯ ಪಝಲ್‌ಗಳನ್ನು ಜೋಡಿಸುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026’ರಲ್ಲಿ ಸ್ಥಾನ ಪಡೆದಿದ್ದಾನೆ.
ತೇಜಸ್ ಕೊಪ್ಪಳಕಿದದಾಳದ ಶಾರದಾ ಇಂಟರ್ ನ್ಯಾಷನಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ. ಕಣ್ಣು ಮುಚ್ಚಿ ಭಾರತದ ರಾಜ್ಯಗಳ ಮ್ಯಾಪ್ ಪಝಲ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಸವಾಲನ್ನು ಸ್ವೀಕರಿಸಿ ನಿಗದಿತ ಸಮಯಕ್ಕಿಂತ ಐದು ನಿಮಿಷ ಮೊದಲೇ ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಅಚ್ಚರಿಗೊಳಿಸಿದ್ದಾನೆ.
ತೇಜಸ್‌ನ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಶ್ಲಾಘಿಸಿ ಶಿಸ್ತು, ಏಕಾಗ್ರತೆ ಮತ್ತು ವಿದ್ಯಾಭ್ಯಾಸದ ಕಡೆಗಿನ ಆಸಕ್ತಿಯೇ ಈ ದಾಖಲೆಗೆ ಕಾರಣ ಎಂದು ಹೇಳಿದ್ದಾರೆ. ಮಗನ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.


