Saturday, October 10, 2026
Menu

ಸಿಜೆಪಿ ಉಗ್ರ ಪ್ರತಿಭಟನೆ: ಮಮತಾ ಬ್ಯಾನರ್ಜಿ, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಬಂಧನ!

ಉದಯಕಾಲ  ನ್ಯೂಸ್‌, ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕರೆ ನೀಡಿರುವ ಬೃಹತ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿ ಮುನ್ನುಗ್ಗುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕರಾದ ಡೆರೆಕ್ ಒ’ಬ್ರೇನ್, ಡೋಲಾ ಸೇನ್ ಸೇರಿದಂತೆ ಹಲವರನ್ನು ದೆಹಲಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಐಎನ್ಎ ಮಾರುಕಟ್ಟೆ ಬಳಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೇಹಾ ಬೋರಾ, ಸಿಪಿಐ-ಎಂಎಲ್ ಲಿಬರೇಶನ್ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನೆಪಮಾತ್ರಕ್ಕೆ ಮಾರುಕಟ್ಟೆಗಳು ಬಂದ್!

ಪ್ರತಿಭಟನೆಯ ಕಾವು ಹೆಚ್ಚಿರುವ ಹಿನ್ನೆಲೆಯಲ್ಲಿ ಹೆದರಿದ ಕೇಂದ್ರ ಬಿಜೆಪಿ ಸರ್ಕಾರ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗುವ ನೆಪವೊಡ್ಡಿ ಖಾನ್ ಮಾರ್ಕೆಟ್ ಮತ್ತು ಕನ್ನಾಟ್ ಪ್ಲೇಸ್ ಸೇರಿದಂತೆ ದೆಹಲಿಯ ಪ್ರಮುಖ ಮಾರುಕಟ್ಟೆಗಳನ್ನು ಬಂದ್ ಮಾಡಿದೆ. ಪ್ರತಿಭಟನಾಕಾರರಿಂದ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಭಯದಿಂದ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ ಎಂದು ಖಾನ್ ಮಾರ್ಕೆಟ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂಜೀವ್ ಮೆಹ್ರಾ ಸಬೂಬು ಹೇಳಿದ್ದಾರೆ. ಒಟ್ಟಿನಲ್ಲಿ ಜೆನ್‌-ಜಿಗಳ ಹೋರಾಟ ಕೇಂದ್ರ ಸರ್ಕಾರ ನಿದ್ದೆಗೆಡಿಸಿದ್ದು ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆಗಳು ಎದ್ದು ಕಾಣುತ್ತಿವೆ.

#CJPProtest #MamataBanerjee #YogendraYadav #PrashantBhushan #DelhiPolice #GyaneshKumar #CockroachJanataParty #UdayakalaNews #NationalNews #DelhiUpdates

Related Posts

Leave a Reply

Your email address will not be published. Required fields are marked *