Saturday, October 10, 2026
Menu

ಅಭಿಜಿತ್‌ ದೀಪ್ಕೆ ಅಜ್ಜಿ ನಿಧನ: ಪ್ರತಿಭಟನಾನಿರತ ಸಿಜೆಪಿ ಸ್ಥಾಪಕನಿಗೆ ಆಘಾತ!

ಉದಯಕಾಲ ನ್ಯೂಸ್‌, ನವದೆಹಲಿ: ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijit Deepke) ಅವರಿಗೆ ತೀವ್ರ ಆಘಾತ ಎದುರಾಗಿದೆ. ದೆಹಲಿ ಪೊಲೀಸರು ಅವರನ್ನು ಬಂಧಿಸಿದ  ಕೆಲವೇ ಗಂಟೆಗಳಲ್ಲಿ ಅವರ ಅಜ್ಜಿ ಇಹಲೋಕ ತ್ಯಜಿಸಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಿಬಾಯಿ ಶಂಕರ್ ದೀಪ್ಕೆ (80) ಅವರು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

 ದೆಹಲಿ ವಿಮಾನ ನಿಲ್ದಾಣದಲ್ಲೇ ದೀಪ್ಕೆವಶಕ್ಕೆ!

ಈ ಹಿಂದೆ ನೀಟ್‌ ಅಕ್ರಮ ಖಂಡಿಸಿ ನಡೆದಿದ್ದ ಹೋರಾಟದ ಯಶಸ್ಸನ್ನು ಮನಗಂಡ ಕೇಂದ್ರ ಬಿಜೆಪಿ ಸರ್ಕಾರ ಸಿಇಸಿ ರಾಜೀನಾಮೆಗಾಗಿ ಸಿಜೆಪಿ ಹಮ್ಮಿಕೊಂಡಿರುವ ಹೋರಾಟವನ್ನು ಹತ್ತಿಕ್ಕಲು ದೆಹಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನಿನ್ನೆಯೇ ಪೊಲೀಸರಿಗೆ ನಿರ್ದೇಶನ ನೀಡಿತ್ತು.  ಇಂದು ಪ್ರತಿಭಟನೆ ಪ್ರಾರಂಭವಾಗುವ ಮುನ್ನವೇ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಪೊಲೀಸರು ಕೂಡಲೆ ಬಂಧಿಸಿದರು.

ಪ್ರಮುಖ ನಾಯಕರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ವಹಿಸಿಕೊಂಡಿದ್ದಾರೆ.

ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಛತ್ರಪತಿ ಸಂಭಾಜಿನಗರದಲ್ಲಿರುವ ಶಂಕರ್ ಸದನ್ ನಿವಾಸದಲ್ಲಿ ವಾಸಿಸುತ್ತಿರುವ ಅಭಿಜಿತ್ ಅವರ ಪೋಷಕರು ಸಾವಿತ್ರಿಬಾಯಿ ಅವರ ಮರಣ ವಾರ್ತೆ ತಿಳಿಯುತ್ತಿದ್ದಂತೆ ಸಂತುಕ್ ಪಿಂಪ್ರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 9:30 ರಿಂದ 10 ಗಂಟೆಯ ನಡುವೆ ಸಾವಿತ್ರಿಬಾಯಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈ ವೇಳೆ ಅಭಿಜಿತ್ ದೀಪ್ಕೆ ಅವರು ಕೂಡ ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

#AbhijitDeepke #CJP #DelhiProtest #Maharashtra #Hingoli #KannadaNews #Udayakala #UdayakalaNews #BreakingNewsKannada #NationalNews

Related Posts

Leave a Reply

Your email address will not be published. Required fields are marked *