ದೇಶ-ವಿದೇಶ
ಔಷಧ ಘಟಕ ಸ್ಫೋಟಕ್ಕೆ ಇಬ್ಬರು ಬಲಿ, ಉಕ್ಕು ಕಾರ್ಖಾನೆ ಸ್ಫೋಟದಲ್ಲಿ ಮೂವರ ಸಾವು
ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಇಂಜಿನಿಯರ್‌ಗಳು ಅಸು ನೀಗಿದ್ದಾರೆ. ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟಕ್ಕೆ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, ಉಕ್ಕು ಕಾರ್ಖಾನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಪೊಚಂಪಲ್ಲಿ ಮಂಡಲದ ದೋತಿಗುಡೆಂ ಗ್ರಾಮದ ಹೊರವಲಯದಲ್ಲಿರುವ ಹ್ಯಾಜೆಲೋ ಲ್ಯಾಬ್ ಕಂಪನಿಯಲ್ಲಿ ಈ ದುರಂತ ನಡೆದಿದೆ. ಸುಟ್ಟ ಗಾಯಗಳಾಗಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ
ಹೊಸ ಮೊಬೈಲ್‌ಗಾಗಿ ಜಗಳ: ಪ್ರಪಾತಕ್ಕೆ ಜಿಗಿದ ಮಗನ ರಕ್ಷಿಸಲು ಹೋದ ತಂದೆಯೂ ಸಾವು, ಪ್ರತ್ಯಕ್ಷದರ್ಶಿ ತಾಯಿ ಆತ್ಮಹತ್ಯೆ
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಾಥೇರಾನ್ ಬೆಟ್ಟದಿಂದ ಯುವಕನೊಬ್ಬ ಪ್ರಪಾತಕ್ಕೆ ಹಾರಿದ್ದು, ರಕ್ಷಿಸಲು ಹೋದ ತಂದೆಯೂ ಬಿದ್ದು ಮೃತಪಟ್ಟರೆ, ಇದನ್ನು ಕಣ್ಣಾರೆ ಕಂಡ ತಾಯಿ ಕೂಡ ಅದೇ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೯ ವರ್ಷದ ಯುವಕ ಕುನಾಲ್ ಎಂಬಾತ ಹೊಸ ಮೊಬೈಲ್
ಸಾರ್ವಜನಿಕರಿಲ್ಲದ ಕಡೆ ಜಾತಿ ನಿಂದನೆ: ಎಸ್ಸಿಎಸ್ಟಿ ಕಾಯ್ದೆಯಡಿ ಅಪರಾಧವಾಗದು ಎಂದ ಸುಪ್ರೀಂ
ಸಾರ್ವಜನಿಕರು ಇರುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿದೆ ಎಂಬುದು ಸಾಬೀತು ಆಗದಿದ್ದರೆ ಅದು ಎಸ್ಸಿಎಸ್ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ ಮೆಹ್ತಾ ಅವರನ್ನು ಒಳಗೊಂಡಿರುವ ಪೀಠವು ಈ ಆದೇಶ ನೀಡಿದೆ,
ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿಕೆ ಶಿವಕುಮಾರ್
ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ
ಡೇಟಿಂಗ್ ಆ್ಯಪ್ ಮಾನಿನಿ ಖೆಡ್ಡಾಗೆ ಬಿದ್ದು 1.30 ಲಕ್ಷ ರೂ. ಕಳೆದುಕೊಂಡ ಹಿರಿಯ ನಾಗರಿಕ
ಒಂಟಿತನ ಕಳೆಯುವುದಕ್ಕೆಂದು ಆನ್‌ಲೈನ್ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯಿಸಿಕೊಂಡ ಯುವತಿಯರ ವಂಚನೆಗೆ ಒಳಗಾಗಿ ಹಿರಿಯ ನಾಗರಿಕರೊಬ್ಬರು 1.30 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಈ ವಂಚನೆ ನಡೆದಿದ್ದು, ನಕಲಿ ಡೇಟಿಂಗ್ ಪ್ರೊಫೈಲ್ ಮೂಲಕ ವ್ಯಕ್ತಿಯನ್ನು ನಂಬಿಸಿದ್ದ ಯುವತಿಯರಿಬ್ಬರು ಡಿನ್ನರ್‌ಗೆ ಕರೆದೊಯ್ದು ಮೊಬೈಲ್ ಕದ್ದು
ಬಿಸಿಯೂಟಕ್ಕೆ ಉಪ್ಪು ಬದಲು ಡಿಟರ್ಜೆಂಟ್ ಪೌಡರ್: 36 ವಿದ್ಯಾರ್ಥಿನಿಯರು ಅಸ್ವಸ್ಥ
ಶಾಲೆಯ ಬಿಸಿಯೂಟ ತಯಾರಿಸುವಾಗ ಉಪ್ಪಿನ ಬದಲಾಗಿ ಡಿಟರ್ಜೆಂಟ್ ಪೌಡರ್ ಬಳಸಿದ ಪರಿಣಾಮವಾಗಿ ಆ ಊಟ ತಿಂದ 36 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ನಳಂದಾ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.
ಚಿನ್ನದ ಗಣಿ ಕುಸಿದು 30 ಕಾರ್ಮಿಕರು ಬಲಿ
ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ಚಿನ್ನದ ಗಣಿ ಕುಸಿದು ಮೂವತ್ತು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಅವಶೇಷಗಲಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ನಾನಾ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಈ
ಕೋಲ್ಕೊತಾದ ಹೋಟೆಲ್‌ನಲ್ಲಿ ಅಗ್ನಿ ದುರಂತಕ್ಕೆ ಒಂಬತ್ತು ಮಂದಿ ಬಲಿ
ಕೋಲ್ಕೊತಾದ ಹೋಟೆಲ್‌ವೊಂದರಲ್ಲಿ ಬುಧವಾರ ಮುಂಜಾನೆ ಅಗ್ನಿ ದುರಂತ ಸಂಭವಿಸಿದ್ದು, ಮಗು ಸೇರಿ ಕನಿಷ್ಠ ಒಂಬತ್ತು ಮಂದಿ ಅಸು ನೀಗಿದ್ದಾರೆ. ನಗರದ ಫ್ರೀ ಸ್ಕೂಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಈ ದುರಂತ ನಡೆದಿದೆ, ಬೆಂಕಿ ಹೊತ್ತಿಕೊಂಡಿದ್ದರಿಂದ ಹೋಟೆಲ್‌ನೊಳಗಿದ್ದ ಅತಿಥಿಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ವಿದೇಶಿ ಆರೋಪಿಗಳಿಗೆ ಜಾಮೀನು: ಕಟ್ಟುನಿಟ್ಟಾದ ನಿರ್ದೇಶನ ನೀಡಿದ ಸುಪ್ರೀಂ
ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯನ್ವಯ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿದೇಶಿ ಪ್ರಜೆಗಳಿಗೆ ಜಾಮೀನು ನೀಡುವಾಗ ಇನ್ನಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ೧೨ ನಿರ್ದೇಶನಗಳನ್ನು ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ
ಇಂಡೋನೇಷ್ಯಾದಲ್ಲಿ ಭೂಕಂಪಕ್ಕೆ ಐವರು ಬಲಿ, ಸುನಾಮಿ ಎಚ್ಚರಿಕೆ
ಇಂಡೋನೇಷ್ಯಾದಲ್ಲಿ ಭೂಕಂಪ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ. ಭೂಕಂಪದ ಬಳಿಕ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿ, ಜನ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಬೆಳಿಗ್ಗೆ




