Sunday, September 27, 2026
Menu

ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾ ಬಲ ಇನ್ನಷ್ಟು ಹೆಚ್ಚಳ

ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ಲಾನಿ ಅವರ ಗೆಲುವಿನೊಂದಿಗೆ, ಮೇಲ್ಮನೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)  ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತದ ಗಡಿಗೆ ಎನ್‌ಡಿಎ ಅತ್ಯಂತ ಸಮೀಪದಲ್ಲಿದೆ. ಜಾರ್ಖಂಡ್‌ನ ಈ ಗೆಲುವಿನ ಬಳಿಕ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಒಟ್ಟು ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಜಾರ್ಖಂಡ್‌ನ ಆಡಳಿತಾರೂಢ ’ಇಂಡಿಯಾ’ ಮೈತ್ರಿಕೂಟದಲ್ಲಿ ನಡೆದಿದೆ ಎನ್ನಲಾದ ಕ್ರಾಸ್

ಅತ್ಯಾಚಾರ, ಚಿತ್ರಹಿಂಸೆ ನೀಡಿ ಮಹಿಳೆಯ ಆಸ್ತಿ ಕಬಳಿಸಿದ ಸ್ವಯಂಘೋಷಿತ ಗುರು ಅರೆಸ್ಟ್‌

ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ನಂಬಿಸಿದ ಸ್ವಯಂಘೋಷಿತ ಗುರುವೊಬ್ಬನನ್ನು  ಮಹಿಳೆಯ ಮೇಲೆ ೧೫ ವರ್ಷ ಲೈಂಗಿಕ ದೌರ್ಜನ್ಯ ಜೊತೆಗೆ ಮೂತ್ರ ಕುಡಿಸಿ ವಿದ್ಯುತ್‌ ಶಾಕ್‌ ನೀಡಿರುವ ಆರೋಪದಡಿ  ಏಳು ಮಂದಿ ಸಹಚರರೊಂದಿಗೆ ಪುಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿಯನ್ನು

48 ದಿನಗಳ ಹಿಂದೆ ಮದುವೆ: ಪತಿಯ ಕಿರುಕುಳಕ್ಕೆ ನೊಂದು ಪತ್ನಿ ಆತ್ಮಹತ್ಯೆ

48 ದಿನಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಗಂಡ ಮತ್ತು ಅತ್ತೆ-ಮಾವನ ಕಿರುಕುಳಕ್ಕೆ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಥಾಣೆಯ ಅಂಬರನಾಥ್‌ನಲ್ಲಿ ನಡೆದಿದೆ. ವಿಶಾಖಾ ತಿಲ್ಕರ್ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಏಪ್ರಿಲ್ 30ರಂದು ವೈದ್ಯ ನಿತಿನ್ ತಿಲ್ಕರ್ ಎಂಬಾತನನ್ನು

ಬ್ಯಾನ್‌ ಪ್ರಶ್ನಿಸಿ ಟೆಲಿಗ್ರಾಂ ಹೈಕೋರ್ಟ್‌ಗೆ, ರಿಲಯನ್ಸ್‌, ವಾಟ್ಸಾಪ್‌ ಲಾಬಿ ಎಂದ ಸಿಇಒ

ಜೂನ್ 21ರಂದು ನಡೆಯಲಿರುವ NEET-UG 2026ರ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ದಾರಿ ತಪ್ಪಿಸಲು ಸಂಘಟಿತ ವಂಚನೆ ಜಾಲಗಳು ಟೆಲಿಗ್ರಾಂ ಬಳಸುತ್ತಿವೆ ಎಂಬ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಆರೋಪ ಹಿನ್ನೆಲೆ ಕೇಂದ್ರ ಸರ್ಕಾರವು ಟೆಲಿಗ್ರಾಂ ಅನ್ನು ಬ್ಯಾನ್‌ ಮಾಡಿದೆ. ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ

ಅಮೆರಿಕ-ಇರಾನ್‌ ಒಪ್ಪಂದ ಒಪ್ಪಲ್ಲ, ಲೆಬನಾನ್‌ನಿಂದ ಸೇನೆ ವಾಪಸ್‌ ಪಡೆಯಲ್ಲ: ಇಸ್ರೇಲ್‌ ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನೇತೃತ್ವದಲ್ಲಿ ನಡೆದಿರುವ ಈ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿಲ್ಲ, ಯಾವುದೇ ಕಾರಣಕ್ಕೂ ಲೆಬನಾನ್‌ನಿಂದ ತನ್ನ ಸೇನೆ ವಾಪಸ್‌ ಹಿಂಪಡೆಯುವುದಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ

ಸಿರಪ್‌ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ

ಮೆಡಿಕಲ್‌ ಶಾಪ್‌ಗಳಲ್ಲಿ ಯಾವುದೇ ಸಿರಪ್‌ ಖರೀದಿಸಬೇಕಾದರೆ ಇನ್ನು ಮುಂದೆ ಕಡ್ಡಾಯವಾಗಿ ವೈದ್ಯರ ಪ್ರಿಸ್ಕ್ರಿಪ್ಷನ್ ತೋರಿಸಲೇಬೇಕು. ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಔಷಧದ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯ ಉದ್ದೇಶದಿಂದ  ವೈದ್ಯರ ಶಿಫಾರಸು

ಅಯೋಧ್ಯೆ ಮಂದಿರ ದೇಣಿಗೆಯಲ್ಲಿ ಅಕ್ರಮ: ಸುಪ್ರೀಂಗೆ ಅರ್ಜಿ ಸಲ್ಲಿಕೆ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದೇಣಿಗೆಗೆ ಸಂಬಂಧಿಸಿದಂತೆ ಕೇಳಿ ಬಂದಿರುವ ಅಕ್ರಮಗಳ ಆರೋಪ ಈಗ ಸುಪ್ರೀಂಕೋರ್ಟ್‌ಗೆ ತಲುಪಿದೆ. ದೇವಸ್ಥಾನದ ವಿಚಾರದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದೆ.

ವಿಮಾನ ಪತನಗೊಂಡು 11 ಸ್ಕೈಡೈವರ್‌ಗಳು, ಪೈಲಟ್ ಸಾವು

ಅಮೆರಿಕದ ಮಿಸೌರಿ ರಾಜ್ಯದಲ್ಲಿ ಸ್ಕೈಡೈವಿಂಗ್ ಕಂಪೆನಿ ಗುತ್ತಿಗೆ ಪಡೆದುಕೊಂಡಿದ್ದ ವಿಮಾನ ಅಪಘಾತಗೊಂಡಿದ್ದು, ಹನ್ನೊಂದು ಸ್ಕೈಡೈವರ್‌ಗಳು ಮತ್ತು ಒಬ್ಬ ಪೈಲಟ್ ಮೃತಪಟ್ಟಿದ್ದಾರೆ. ಸ್ಕೈಡೈವಿಂಗ್ ಕಂಪನಿ ಗುತ್ತಿಗೆ ಪಡೆದಿದ್ದ ವಿಮಾನವು ಹಾರಾಟ ವಿಫಲವಾಗಿ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ 200

ದೇಗುಲದಿಂದ ವಾಪಸಾಗುತ್ತಿದ್ದಾಗ ವಾಹನ ತೆರೆದ ಬಾವಿಗೆ ಉರುಳಿ ಎಂಟು ಮಂದಿ ಸಾವು

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್‌ನಲ್ಲಿ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ.  ಘಟನೆಯಲ್ಲಿ ಅಪಘಾತದಲ್ಲಿ ಏಳು ಜನರು ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಢರಪುರ ಮೂಲದ

ಜಾಗತಿಕ ತೈಲ ಬೆಲೆ ಗಣನೀಯ ಕುಸಿತ, ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ?

ಯುದ್ಧ ವಿರಾಮ ಘೋಷಣೆಯೊಂದಿಗೆ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಜಾರಿ ನೀರಿಕ್ಷೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನದ ಹಾದಿಯಲ್ಲಿದೆ, ಈ ಹಿನ್ನೆಲೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ