Sunday, September 27, 2026
Menu

ವೆನಿಜುವೆಲಾವನ್ನು ಕಾಡಿದ ಕರಾಳ ಭೂಕಂಪ: ಲಕ್ಷ ಮಂದಿಯ ಸಾವು ಸಾಧ್ಯತೆ?

ವೆನೆಜುವೆಲಾದಲ್ಲಿ ಎರಡು ಪ್ರಬಲ ಭೂಕಂಪ ಸಂಭವಿಸಿದ್ದು, ದೇಶವೇ ತತ್ತರಿಸಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ನಗರ ಧೂಳಿನಿಂದ ಆವೃತವಾಗಿದೆ. 100 ವರ್ಷಕ್ಕೂ ಹೆಚ್ಚಿನ ಅವಧಿ ಬಳಿಕ ವೆನೆಜುವೆಲಾವನ್ನು ಕಾಡಿದ ಭೀಕರ ಭೂಕಂಪ ಇದು ಎಂದು ತಜ್ಞರು ಹೇಳಿದ್ದಾರೆ. ಇಲ್ಲಿವರೆಗೆ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ 10,000 ರಿಂದ 100,000 ಮಂದಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್

ಕಾಂಗ್ರೆಸ್ ಅನುಮತಿ ಇಲ್ಲದೆ ಸೇನಾ ಕಾರ್ಯಾಚರಣೆ ಬೇಡ: ಟ್ರಂಪ್‌ ನೀತಿಗೆ ಅಂಕುಶ

ಕಾಂಗ್ರೆಸ್‌ನ ಸ್ಪಷ್ಟ ಅನುಮೋದನೆ ಇಲ್ಲದೆ ಯಾವುದೇ ದೇಶದ ವಿರುದ್ಧ ಯುದ್ಧ ಅಥವಾ ದೀರ್ಘಕಾಲದ ಸೇನಾ ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸುವ ನಿರ್ಣಯವನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಈ ಮೂಲಕ ಅಧ್ಯಕ್ಷ ಟ್ರಂಪ್ ಅವರ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಮತ್ತು ಯುದ್ಧ

17 ಕೋಟಿ ವೆಚ್ಚದಲ್ಲಿ ಜೈಪುರ ಅರಮನೆಯಲ್ಲಿ ಮದುವೆ ನಿಗದಿ: ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯ ಕೊಲೆಗೈದ ಯುವತಿ

ಮಹಾರಾಷ್ಟ್ರದ ಉದ್ಯಮಿ ವಿಶಾಲ್ ಅಗರ್ವಾಲ್ ಮಗ ಕೇತನ್ ಅಗರ್ವಾಲ್ ಪುಣೆಯ ಲೋಹಗಢ ಕೋಟೆಯಿಂದ ಪ್ರಪಾತಕ್ಕೆ ಬಿದ್ದು ಕೊಲೆಯಾಗಿರುವ ಪ್ರಕರಣ ಆಕಸ್ಮಿಕವಲ್ಲ ಕೊಲೆ ಎಂಬುದು ಬಯಲಾಗಿದೆ. ಉದ್ಯಮಿಯ ಮಗಳು ಸಿಯಾ ಎಂಬಾಕೆ ಪ್ರಿಯಕರನೊಂದಿಗೆ ಸೇರಿ ತಾನು ಮದುವೆಯಾಗಬೇಕಿದ್ದ ಯುವಕ ಕೇತನ್ ಅಗರ್ವಾಲ್ ನನ್ನು

ಕತಾರ್‌ ಕಾರ್ಖಾನೆ ಸ್ಫೋಟಕ್ಕೆ ಬಲಿಯಾದವರಲ್ಲಿ 12 ಭಾರತೀಯರು

ಕತಾರ್‌ನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟಿರುವ 13 ಮಂದಿಯಲ್ಲಿ 12 ಮಂದಿ ಭಾರತೀಯರು, ಈ ದುರಂತದಲ್ಲಿ 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಲ್ಲಿನ ಇಂಧನ ಸಚಿವ ಸಾದ್ ಅಲ್ ಕಾಬಿ ದೃಢಪಡಿಸಿದ್ದಾರೆ. ದೋಹದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಷಿಯಲ್ ಮೀಡಿಯಾ ಎಕ್ಸ್

ಅಯೋಧ್ಯೆ ರಾಮಮಂದಿರ ಹಣಕಾಸು ಅಕ್ರಮ: ಸುಪ್ರೀಂಕೋರ್ಟ್‌ ನಿಗಾದಲ್ಲಿ ಸಿಬಿಐ ತನಿಖೆಗೆ ಪಿಐಎಲ್‌

ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಆರ್ಥಿಕ ಅಕ್ರಮಗಳು ಮತ್ತು ಕಾಣಿಕೆ ಹಣ ಹಗರಣದ ತನಿಖೆ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಕೇಂದ್ರೀಯ ತನಿಖಾ ದಳವು ಹೊಸ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

NEET ಬರೆಯಲು ಬಂದಿದ್ದ ಒಂಬತ್ತು ನಕಲಿ ಅಭ್ಯರ್ಥಿಗಳ ಬಂಧನ

ಬಿಹಾರದ ಪರೀಕ್ಷಾ ಕೇಂದ್ರಗಳಲ್ಲಿ ಜೂ 21ರಂದು ನಡೆದ ನೀಟ್‌-ಯುಜಿ ಮರುಪರೀಕ್ಷೆ ಬರೆಯಲು ಬಂದಿದ್ದ ಒಂಬತ್ತು ನಕಲಿ ಅಭ್ಯರ್ಥಿಗಳು ಹಾಗೂ ಅವರೊಂದಿಗಿದ್ದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಖಿಸರಾಯ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಪರೀಕ್ಷಾ ಕೇಂದ್ರಗಳ ಮೇಲೆ

ಟ್ರಂಪ್‌ ದಾಳಿ ಬೆದರಿಕೆ: ಜಾಗರೂಕರಾಗಿರಿ ಎಂದು ಇರಾನ್‌ ತಿರುಗೇಟು

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ-ಇರಾನ್ ಯುದ್ಧ ನಿಲ್ಲಿಸುವ ಕುರಿತು ಶಾಂತಿ ಮಾತುಕತೆ ಆರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಾಯಕರ ನಡುವಿನ ವಾಗ್ದಾಳಿ ಮುಂದುವರಿದಿದೆ. ಇರಾನ್ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದು, ನಮ್ಮ ಸಶಸ್ತ್ರ ಪಡೆಗಳು

ಸಾಯಲು ಹೋಗಿದ್ದ ಮಗನ ಉಳಿಸಲು ಯತ್ನಿಸಿ ತಂದೆಯೂ ಸಾವು

ಜಗಳವಾಡಿ ಸಾಯಲು ಹೋಗಿದ್ದ ಮಗನನನ್ನು ಉಳಿಸಲು ಹೋದ ವ್ಯಕ್ತಿ ಮೇಲೆ ರೈಲು ಹರಿದು ತಂದೆ-ಮಗ ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ದೇವರಿಯಾದಲ್ಲಿ ನಡೆದಿದೆ. ಗೋರಖ್‌ಪುರ-ಛಾಪ್ರಾ ರೈಲು ವಿಭಾಗದ ಗೌರಿಬಜಾರ್ ಪಶ್ಚಿಮ ರೈಲ್ವೆ ಕ್ರಾಸಿಂಗ್ ಬಳಿ ಈ ದುರಂತ ಸಂಭವಿಸಿದೆ. ಗೌರಿಬಜಾರ್ ಪೊಲೀಸ್

ನೀಟ್‌ ಮರುಪರೀಕ್ಷೆ: ನಾಗ್ಪುರ ನಿವಾಸಿಗೆ ಅಬುಧಾಬಿ ಕೇಂದ್ರ ನಿಯೋಜಿಸಿ ಎಡವಟ್ಟು

ನಾಗ್ಪುರ ನಗರದ ನಿವಾಸಿ, ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ನೀಟ್‌-ಯುಜಿ ಮರುಪರೀಕ್ಷೆಯ ಹಾಲ್ ಟಿಕೆಟ್ ನೀಡಿದ್ದು, ಅಬುಧಾಬಿ ಇಂಡಿಯನ್‌ ಸ್ಕೂಲ್‌ ಅನ್ನು ಪರೀಕ್ಷಾಕೇಂದ್ರವಾಗಿ ನಿಯೋಜಿಸಿದೆ. ಜೂನ್ 14 ರಂದು ನೀಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿ

ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿಗೆ 16 ಮಂದಿ ಬಲಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ

ದಕ್ಷಿಣ ಲೆಬನಾನ್‌ನ ಹಲವೆಡೆ ಇಸ್ರೇಲ್‌ ನಡೆಸಿರುವ ದಾಳಿಗಳಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ, ಈ ಭಾಗದಲ್ಲಿ ತೀವ್ರ ಯುದ್ಧ ನಡೆಯುತ್ತಿದೆ ಎಂದು ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಹೇಳಿದೆ. ಈ ಸಂಘರ್ಷ ಭುಗಿಲೆದ್ದ ಕಾರಣ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್