ಅಮೆರಿಕದ ಮಿಸೌರಿ ರಾಜ್ಯದಲ್ಲಿ ಸ್ಕೈಡೈವಿಂಗ್ ಕಂಪೆನಿ ಗುತ್ತಿಗೆ ಪಡೆದುಕೊಂಡಿದ್ದ ವಿಮಾನ ಅಪಘಾತಗೊಂಡಿದ್ದು, ಹನ್ನೊಂದು ಸ್ಕೈಡೈವರ್ಗಳು ಮತ್ತು ಒಬ್ಬ ಪೈಲಟ್ ಮೃತಪಟ್ಟಿದ್ದಾರೆ.
ಸ್ಕೈಡೈವಿಂಗ್ ಕಂಪನಿ ಗುತ್ತಿಗೆ ಪಡೆದಿದ್ದ ವಿಮಾನವು ಹಾರಾಟ ವಿಫಲವಾಗಿ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ 200 ಗಜ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿದ್ದ ಎಲ್ಲಾ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೇಟ್ಸ್ ಕೌಂಟಿ ತುರ್ತು ನಿರ್ವಹಣಾ ವಕ್ತಾರರು ತಿಳಿಸಿದ್ದಾರೆ.
ಈ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಸಂಬಂಧಿಕರು, ಸ್ನೇಹಿತರು, ಕುಟುಂಬದವರ ಕಣ್ಣೆದುರೇ ಎದುರೇ ಈ ದುರಂತ ಸಂಭವಿಸಿದ್ದು, ಹನ್ನೆರಡು ಮಂದಿ ಸುಟ್ಟು ಬೂದಿಯಾಗಿದ್ದಾರೆ.
ಇದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ವಿಮಾನ ಪೆಸಿಫಿಕ್ ಏರೋಸ್ಪೇಸ್ ಪಿ 750 ಆಗಿದ್ದು, ವಿಮಾನ ನಿಲ್ದಾಣದಿಂದ ಹೊರಡುವಾಗ ಅಪಘಾತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


