ದೇಶ-ವಿದೇಶ
ಬಾಲಕಿಯ ಅತ್ಯಾಚಾರವೆಸಗಿ ವೀಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಫುಟ್ಬಾಲ್ ಕೋಚ್
ಫುಟ್ಬಾಲ್ ಪಟುವಾಗಿರುವ ಬಾಲಕಿಯ ಮೇಲೆ ತರಬೇತುದಾರ ಮೂರು ವರ್ಷ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೊ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯಾಗಿರುವ ಖಾಸಗಿ ಫುಟ್‌ಬಾಲ್ ತರಬೇತುದಾರ 36 ವರ್ಷದ ಅಭಿಜಿತ್ ಮೆಂಡಲ್ ಎಂಬಾತನನ್ನು ಪೊಲೀಸರು ಬಂಧಿಸಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 2023 ರಲ್ಲಿ ವಸಾಯಿಯಲ್ಲಿರುವ ಫುಟ್‌ಬಾಲ್ ತರಬೇತಿ ಅಕಾಡೆಮಿಗೆ ಸೇರಿದ್ದ 17 ವರ್ಷದ ಬಾಲಕಿಯ ಮೇಲೆ ಮೆಂಡಲ್
ಭಾರತದ ಸೇನಾ ಮುಖ್ಯಸ್ಥರಾಗಿ ಲೆ.ಜ ಧೀರಜ್ ಸೇಠ್
ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಕಗೊಳಿಸಿ ಕೇಂದ್ರ ಸರ್ಕಾರ ದೇಶ ಪ್ರಕಟಿಸಿದೆ. ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ನಿವೃತ್ತಿ ಬಳಿಕ ಧೀರಜ್ ಸೇಠ್ ಜೂನ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಧೀರಜ್ ಸೇಠ್ ಸೇನಾ
ಮನೆಯೊಳಗೆ ನುಗ್ಗಿ ಯೂಟ್ಯೂಬರ್‌ನ ಹತ್ಯೆ
ಯೂಟ್ಯೂಬರ್ ಒಬ್ಬರನ್ನು ಮನೆಯೊಳಗೆ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪ್ರದೇಶದಲ್ಲಿ ನಡೆದಿದೆ. ಶೈಕ್ ಮಹಬೂಬ್ ಅಲಿಯಾಸ್ ಚಾಂಡಿ ಮಸೂದ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಮಾರ್‌ವಾಡಿಯಲ್ಲಿ ಕೃತ್ಯ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಸೂದ್ ಮಸೀದಿಯಿಂದ
ರಾಜ್ಯಸಭೆ ನಾಮಪತ್ರ ತಿರಸ್ಕೃತ: ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ತಾವು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ಚುನಾವಣಾ ಪ್ರಕ್ರಿಯೆಯಲ್ಲಿ
ದೇಶದ ಖ್ಯಾತ ಶೂಟರ್, ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ನಿಧನ
ಖ್ಯಾತ ಭಾರತೀಯ ಶೂಟಿಂಗ್ ತರಬೇತುದಾರ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜಸ್ಪಾಲ್ ರಾಣಾ (49) ನಿಧನರಾಗಿದ್ದಾರೆ. ಭಾರತದ ಪಿಸ್ತೂಲ್ ಶೂಟರ್‌ಗಳಿಗೆ ಹೈ-ಪರ್ಫಾರ್ಮೆನ್ಸ್ ಕೋಚ್ ಆಗಿದ್ದ ಅವರು ಮ್ಯೂನಿಚ್‌ನಲ್ಲಿ ನಡೆದ ISSF ವಿಶ್ವಕಪ್‌ನಿಂದ ಭಾರತಕ್ಕೆ ವಾಪಸಾಗುವಾಗ ಅನಾರೋಗ್ಯಕ್ಕೆ ಒಳಗಾಗಿದ್ದರು. ಭಾರತ ತಂಡವು ವಿಶ್ವಕಪ್‌ನಲ್ಲಿ ಎರಡು
ಭಾರತೀಯ ಸಿಬ್ಬಂದಿಯಿದ್ದ ಮತ್ತೊಂದು ಹಡಗಿನ ಮೇಲೆ ಅಮೆರಿಕ ದಾಳಿ
ಒಮನ್‌ನ ಶಿನಾಸ್ ಬಂದಿರಿನ ಬಳಿ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ ಎನ್ನಲಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ದಾಳಿಗಳ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಿದ ಬಳಿಕ ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಘಟನೆ
ಗೃಹಿಣಿಯರಲ್ಲ, ರಾಷ್ಟ್ರ ನಿರ್ಮಾಪಕರು: ಸುಪ್ರೀಂ ಕೋರ್ಟ್
ಮನೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರ ಕೊಡುಗೆಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಅವರ ಕೆಲಸ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಗೃಹಿಣಿ ಬದಲು ರಾಷ್ಟ್ರ ನಿರ್ಮಾಪಕರೆನ್ನಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೃಹಿಣಿಯೊಬ್ಬಳ ಪಾತ್ರವು ಸುವ್ಯವಸ್ಥೆ
ಭಾರತದ ಪ್ರಜಾಪ್ರಭುತ್ವ ಹಾಳುಗೆಡವಿದ ಮೋದಿ ಸಾಧನೆಗೆ ಬಿಜೆಪಿ ಸಂಭ್ರಮ: ಮಾಜಿ ಸಿಎಂ ಸಿದ್ದರಾಮಯ್ಯ
ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವದ ವಿರುದ್ಧದ ಅತಿದೊಡ್ಡ ಅಣಕವಾಗಿದೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು
ಇರಾನ್ ದಾಳಿಗೆ ಅಮೆರಿಕ ಪ್ರತಿದಾಳಿ, ಬಹರೇನ್‌ನ ಯುಎಸ್ ನೆಲೆಗೆ ಟೆಹ್ರಾನ್ ದಾಳಿ, ಯುದ್ಧ ಭೀತಿ
ಒಮನ್ ಬಳಿ ಅಮೆರಿಕದ ಹೆಲಿಕಾಪ್ಟರ್ ಪತನಗೊಂಡ ನಂತರ ಇರಾನ್ ಮೇಲಿನ ವೈಮಾನಿಕ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ಅಮೆರಿಕ ಸೇನೆ ಹೇಳಿದೆ. ಹರ್ಮುಜ್ ಜಲಸಂಧಿ ಬಳಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ನಿಯಂತ್ರಣ ಕೇಂದ್ರಗಳು ಮತ್ತು ರಾಡಾರ್ ಕಣ್ಗಾವಲು ತಾಣಗಳನ್ನು ನಿಖರ ದಾಳಿಯೊಂದಿಗೆ ಹೊಡೆದುರುಳಿಸಲಾಗಿದೆ
ಮಸೀದಿಯಲ್ಲಿ ಆಝಾನ್ ಕೂಗುತ್ತಿರುವಾಗಲೇ ಕುಸಿದು ಮೃತಪಟ್ಟ ಧರ್ಮಗುರು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯಲ್ಲಿ ಆಝಾನ್ ಕೂಗುತ್ತಿರುವಾಗಲೇ ಬಂಟ್ವಾಳದ ಧರ್ಮಗುರು ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ ನೂಜಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಲತೀಫ್ ಮದನಿ (50) ಮೃತಪಟ್ಟವರು. ಸಂಜೆ




