ದೇಶ-ವಿದೇಶ
ಪುಣೆಯಲ್ಲಿ ಕಸದ ದಿಬ್ಬ ಕುಸಿದು 16 ಮಂದಿ ನಾಪತ್ತೆ
ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮೂರು ಅಂತಸ್ತಿನ ಕಟ್ಟಡದ ಮೇಲೆ ಕಸದ ದಿಬ್ಬ ಕುಸಿದು ಕನಿಷ್ಠ 16 ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಂಪ್ರಿ ಚಿಂಚ್‌ವಾಡ್‌ನ ಮೋಶಿಯಲ್ಲಿ ಈ ದುರಂತ ನಡೆದಿದ್ದು, ಅಲ್ಲಿ ಕಾರ್ಪೋರೇಶನ್ ಸಂಸ್ಥೆಯ ಪರವಾಗಿ ತ್ಯಾಜ್ಯವನ್ನು ಸಂಸ್ಕರಿಸುವ ಖಾಸಗಿ ಕಂಪನಿಯ ಆಡಳಿತ ಕಚೇರಿಯಾಗಿ ಕಟ್ಟಡವನ್ನು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಆಡಳಿತ ಕಟ್ಟಡವು ಪರ್ವತದಂತಹ ಎತ್ತರದ ತ್ಯಾಜ್ಯದ ರಾಶಿಯ
ಬಹ್ರೇನ್- ಕುವೈತ್‌ಗಳಲ್ಲಿರುವ ಯುಎಸ್ ಸೇನಾ ನೆಲೆಗಳಿಗೆ ಇರಾನ್ ದಾಳಿ
ಅಮೆರಿಕವು ತನ್ನ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ 85 ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದಾಗಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿ: ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಗಂಡನ ಕೊಲೆಗೈದ ಪತ್ನಿ
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ನರ್ಸ್‌ವೊಬ್ಬಳು ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಗಂಡನ ಕೊಲೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ (35) ಹತ್ಯೆಯಾದ ಪತಿ. ಪ್ರಶಾಂತ್ ಇತ್ತೀಚೆಗಷ್ಟೇ ಗಲ್ಫ್‌ನಿಂದ ಊರಿಗೆ ಮರಳಿದ್ದರು. ಪತ್ನಿ ಸಂಧ್ಯಾ ಮತ್ತು
ವಯನಾಡಿನಲ್ಲಿ ಭೂಕುಸಿತ: ಕಾರ್ಮಿಕರಿಬ್ಬರ ಸಾವು, 30 ಮಂದಿ ನಾಪತ್ತೆ
ಕೇರಳದ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 18 ಮಂದಿ ಭೂಕುಸಿತಕ್ಕೆ ಸಿಲುಕಿರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ತುರ್ತು ರಕ್ಷಣಾ ಕಾರ್ಯಾಚರಣೆಗೆ
ಮಹಾರಾಷ್ಟ್ರದಲ್ಲಿ ಮಳೆ ಅವಾಂತರಕ್ಕೆ 13 ಮಂದಿ ಬಲಿ
ಮಹಾರಾಷ್ಟ್ರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ಮುಂಬೈ, ಥಾಣೆ ಮತ್ತು ರಾಯಘಡ ತತ್ತರಿಸಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮುಂಬೈ, ಪಾಲ್ಘರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾಗಿ
ಚುನಾವಣೆ ಇವಿಎಂ ಮುಕ್ತಗೊಳಿಸಿ, ಎಸ್‌ಐ ಆರ್ ರದ್ದುಗೊಳಿಸಲು ಸುಪ್ರೀಂಗೆ ಐಎನ್‌ಡಿಐಎ ಪತ್ರ
ಮುಂದಿನ ಚುನಾವಣೆಗಳನ್ನು ಇವಿಎಂ ಮುಕ್ತಗೊಳಿಸಿ ಬ್ಯಾಲೆಟ್ ಪೇಪರ್‌ಗಳಲ್ಲಿ ನಡೆಸಬೇಕು ಮತ್ತು ಚುನಾವಣಾ ಆಯೋಗ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಡಳಿತದಲ್ಲಿ
ಹೈದರಾಬಾದ್, ಕರ್ನಾಟಕಗಳಲ್ಲಿ ತೆಲಂಗಾಣ ಅಧಿಕಾರಿಯ ಭಾರಿ ಅಕ್ರಮ ಆಸ್ತಿ ಪತ್ತೆ ಮಾಡಿದ ಎಸಿಬಿ
ತೆಲಂಗಾಣದ ಭ್ರಷ್ಟ ಅಧಿಕಾರಿಯೊಬ್ಬರ ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಯಲಿಗೆಳೆದಿದೆ. ಹೈದರಾಬಾದ್ ಮತ್ತು ಕರ್ನಾಟಕಗಳಲ್ಲಿ 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟು ಅಕ್ರಮ ಆಸ್ತಿಯ ನಿಜವಾದ
ಐವಿಎಫ್, ಸರೊಗಸಿ ಚಿಕಿತ್ಸಾ ಕೇಂದ್ರಗಳಿಗೆ ಹೊಸ ನಿಯಮ
ಸಂತಾನೋತ್ಪತ್ತಿ ತಂತ್ರಜ್ಞಾನ ಹಾಗೂ ಐವಿಎಫ್ ಕೇಂದ್ರ, ವೀರ್ಯ ಬ್ಯಾಂಕುಗಳು ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾ ಕೇಂದ್ರಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
ಮದುವೆ ದೀಪಾಲಂಕಾರ: ನವ ವರ, ತಂದೆ ವಿದ್ಯುತ್ ಆಘಾತಕ್ಕೆ ಬಲಿ
ಮದುವೆ ಮುಗಿದು ವಾರವಷ್ಟೇ ಕಳೆದಿರುವಾಗ ದೀಪಾಲಂಕಾರ ಮಾಡಿದ್ದ ಸಾಮಗ್ರಿಯಿಂದ ವಿದ್ಯುತ್ ಸ್ಪರ್ಶಗೊಂಡು ನವ ವರ ಮತ್ತು ಆತನ ತಂದೆ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ಭೀಮವರಂನಲ್ಲಿ ಮದುವೆ ಸಂಭ್ರಮಕ್ಕಾಗಿ ಮನೆಗೆ ಹಾಕಿದ್ದ ವಿದ್ಯುತ್ ದೀಪಾಲಂಕಾರ ತೆಗೆಯುವಾಗ ಮೊದಲು
ಗೋಹತ್ಯೆಗೆ ಸಂಪೂರ್ಣ ನಿಷೇಧ: ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಗೆ
ತಮಿಳುನಾಡಿನಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ. ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ವ್ಯಾಪ್ತಿ ಉಲ್ಲಂಘಿಸಿ ನೀಡಲಾಗಿದೆ ಎಂದು ಸರ್ಕಾರ ವಾದಿಸಿದೆ. ಮೇ 27ರಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್




