Menu

ತಮಿಳುನಾಡಿನ ಅಧಿಕಾರ ಗದ್ದುಗೆ ಮತ್ತು ರಾಜಕೀಯ ಪಕ್ಷಗಳು

ಮೈತ್ರಿ ಎಂಬುದು ಕೇವಲ ಅಧಿಕಾರವನ್ನು ಪಡೆಯಲೆಂಬ ಪೊಲಿಟಿಕಲ್ ಅಡ್ಜಸ್ಟ್‌ಮೆಂಟ್ ಆಗಬಾರದು. ತಮಿಳುನಾಡಿನಲ್ಲಿ ಸರದಿ ಮೇರೆಗೆ ಅಧಿಕಾರವನ್ನು ಇದುವರೆಗೆ ಅನುಭವಿಸಿರುವ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಭವಿಷ್ಯದಲ್ಲಿ ಒಂದಾದರೆ, ಇದು ಪವರ್ ಪಾಲಿಟಿಕ್ಸ್ ಗಾಗಿ ಜನತೆಯ ಮುಂದೆ ಆಡುವ ಬೃಹನ್ನಾಟಕ ಎನ್ನದೆ ವಿಧಿಯಿಲ್ಲ. ಹೊಸದಾಗಿ ಪಕ್ಷಗಳನ್ನು ಕಟ್ಟುವುದು ಸರಿ. ಆದರೆ ಇಂತಹ ಪಕ್ಷಗಳ ದೀರ್ಘಕಾಲಿಕ ಉಳಿಗಾಲ ಹೇಗೆ ? ತಮಿಳುನಾಡು ರಾಜಕೀಯವೂ ಈಗ ಸಿನಿಮುಯವಾಗಿದೆ ! ವಿಜಯ್ ಸಾರಥ್ಯದ ಟಿವಿಕೆ, ಏಕೈಕ

ಕಾಮುಕ ಅಧಿಕಾರಿಗೆ ರಕ್ಷಣೆ ನೀಡುವುದೇ ಕಾಂಗ್ರೆಸ್‌ ಸರ್ಕಾರಕ್ಕೆ ಮುಖ್ಯ: ಆರ್‌ ಅಶೋಕ

ಲೈಂಗಿಕ ಹಗರಣದ ವಿಡಿಯೋ ಅಸಲಿ ಎಂದು ವರದಿ ಬಂದಿದ್ದರೂ, ಕಾಮುಕ ಅಧಿಕಾರಿಯನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪೊಲೀಸ್ ಮಹಾನಿರ್ದೇಶಕ (DGP) ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ರಾಜ್ಯ

ಸರ್ಕಾರಿ ಕೆಲಸದ ಆಮಿಷ: ಹಣ ಪಡೆದು ವಂಚನೆ

ಸರ್ಕಾರಿ ಕೆಲಸ‌ದ ಆಮಿಷವೊಡ್ಡಿ ಯುವಕ ಯುವತಿಯರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹೈದರಾಬಾದ್ ಖಾಸಗಿ ಕಂಪನಿಯೊಂದರ ವ್ಯಕ್ತಿ ಪ್ರದೀಪ್​​ ಎಂಬಾತ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ರಾಜ್ಯದ ಅತಿ ದೊಡ್ಡ ಮೆಡಿಕಲ್ ಕಾಲೇಜು ಇರುವ ಇಎಸ್​​ಐ

ಶೃಂಗೇರಿ ಫಲಿತಾಂಶ ಘೋಷಣೆ ತಡ: ಸಿಬಿಐ ತನಿಖೆ ನಡೆಯಲಿ ಎಂದ ಆರ್‌ ಅಶೋಕ 

ಡಿ.ಎನ್‌.ಜೀವರಾಜ್‌ ಅವರ ಶಾಸಕ ಸ್ಥಾನದ ಫಲಿತಾಂಶ ಬಂದ ನಂತರವೂ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಲು ಒಂದು ದಿನ ತಡ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ತಿಳಿಯಲು ಸಿಬಿಐ ತನಿಖೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದ್ದಾರೆ. ಶೃಂಗೇರಿ

ಬ್ಯಾಂಕಲ್ಲಿ ಚಿನ್ನ ಅಡವಿಟ್ಟು ಹಣ ಜಮೆಯಾದ ಕೂಡಲೇ ಎಗರಿಸಿದ ಸೈಬರ್‌ ವಂಚಕರು

ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಖಾತೆಗೆ ಹಣ ಜಮೆ ಮಾಡಿ ಹೊರ ಬರುವಷ್ಟರಲ್ಲಿ ಸೈಬರ್‌ ವಂಚಕರು ಆ ಹಣವನ್ನು ಎಗರಿಸಿರುವ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ

26 ವರ್ಷದ ಮಹಿಳೆಯ ಮೋಹಕ್ಕೆ ಬಿದ್ದ 15 ವರ್ಷದ ಬಾಲಕ ಆತ್ಮಹತ್ಯೆ

26 ವರ್ಷದ ಮಹಿಳೆಯನ್ನು ಮದುವೆಯಾಗುವೆನೆಂದು ಹೊರಟಿದ್ದ 15 ವರ್ಷದ ಬಾಲಕ ಪೋಷಕರ ಬುದ್ಧಿವಾದಕ್ಕೆ ಬೇಸರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿಯಲ್ಲಿ ನಡೆದಿದೆ. ಬಿಡದಿಯ ಭೂಮಿಕಾ ಪೃಥ್ವಿ ಲೇಔಟ್‌ನ ಆರ್. ತನ್ಮಯ್ ನಾಯಕ್ ಮೃತ ಬಾಲಕ. ಮಹಿಳೆಯನ್ನು ಮದುವೆಯಾಗಲು ಬಾಲಕ ಇಚ್ಛಿಸಿದ್ದ, ಆಕೆಯನ್ನು

ವೃದ್ಧೆಯನ್ನು ಬೆದರಿಸಿ 2.1 ಕೋಟಿ ರೂ. ಕಿತ್ತುಕೊಂಡ ಸೈಬರ್‌ ವಂಚಕರು

ಸೈಬರ್‌ ವಂಚಕರು ಎನ್‌ಐಎ ಅಧಿಕಾರಿಯ ಹೆಸರಿನಲ್ಲಿ ವೃದ್ಧೆಯೊಬ್ಬರನ್ನು ಬೆದರಿಸಿ 2.1 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣವು ಬೆಂಗಳೂರಿನ ಜಯನಗರದಲ್ಲಿ ಬೆಳಕಿಗೆ ಬಂದಿದೆ. ನಿಮಗೆ ಪಿಎಫ್‌ಐ ಸಂಘಟನೆ ಜೊತೆ ಸಂಪರ್ಕ ಇದೆ ಎಂದು ಹೆದರಿಸಿದ ವಂಚಕರು ಬಂಧನ ಭೀತಿ ಹುಟ್ಟಿಸಿ ಬ್ಯಾಂಕ್ ಖಾತೆಗಳ

ಮದುವೆಯಾಗಿ ಎಂಟು ತಿಂಗಳಲ್ಲೇ ಮಹಿಳೆ ಆತ್ಮಹತ್ಯೆ

ಬೆಂಗಳೂರಿನ ಯಶವಂತಪುರದಲ್ಲಿ ಮದುವೆಯಾಗಿ ಎಂಟು ತಿಂಗಳಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಶಾರದ ಎಂಬ ಮಹಿಳೆ ಪತಿ ಮಹೇಶ್ ಮನೆಯಲ್ಲಿಯೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶಾರದಾ ವೀಡಿಯೊ ಕಾಲ್ ಮಾಡಿ ನಾನು ಸಾಯುತ್ತೇನೆ

ವೋಟರ್‌ ಐಡಿ ದುರುಪಯೋಗ: ಅಮಾಯಕನ ವಿರುದ್ಧ ದಾಖಲಾಯ್ತು ಕೊಲೆ ಪ್ರಕರಣ

ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್​ ಖರೀದಿಸಿ, ಅದನ್ನು ಕೊಲೆ ಕೃತ್ಯದಲ್ಲಿ ಬಳಸಿಕೊಂಡ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಸಂತ್ರಸ್ತನ ಹಳೆಯ ವೋಟರ್ ಐಡಿ ಪೋಟೊ ಬದಲಿಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿಸಿದ್ದ ಆರೋಪಿ ಅದನ್ನು ಕೊಲೆ ಕೃತ್ಯದ ವೇಳೆ

ಕರೀಂನಗರದಲ್ಲಿ ಮಗನ ಶವ ತಳ್ಳುಗಾಡಿಯಲ್ಲಿ ಮನೆಗೆ ಕೊಂಡೊಯ್ದ ಪೋಷಕರು

ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ವಾಹನ ಸಿಗದೆ ಹೆತ್ತ ಮಗನ ಶವವನ್ನು ಪೋಷಕರು ತಳ್ಳುಗಾಡಿಯಲ್ಲಿ ಸಾಗಿಸಿದ ಘಟನೆ ನಡೆದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ನಿವಾಸಿ ಯಾಕೂಬ್ ಎಂಬ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದ. ಪೋಷಕರಿಗೆ ಆಸ್ಪತ್ರೆಯಿಂದ ಮನೆಗೆ ಮಗನ